ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ: ತೊಗರಿ ಖರೀದಿ ಕೇಂದ್ರ ಸ್ಥಾಪಿಸಿ

Last Updated 11 ಜನವರಿ 2017, 6:29 IST
ಅಕ್ಷರ ಗಾತ್ರ

ಕೆಂಭಾವಿ:  ರೈತರ ಅನುಕೂಲಕ್ಕೆ ಪಟ್ಟ ಣದಲ್ಲಿ ತೊಗರಿ ಖರಿದಿ ಕೇಂದ್ರವನ್ನು ಸ್ಥಾಪನೆ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಆಲ್ಹಾಳ ಗ್ರಾಮ ಶಾಖೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಮಂಗಳವಾರ ಈ ಕುರಿತು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರವನ್ನು ಉಪತಹಸೀಲ್ದಾರ್‌ ಆರ್.ಆನಂದ ಅವರಿಗೆ ಸಲ್ಲಿಸಿ ಸಂಘದ ಅಧ್ಯಕ್ಷ ರಾಮನಗೌಡ ಗೂಗಲ್ಲ ಮಾತನಾಡಿ, ಪಟ್ಟಣದ ವ್ಯಾಪ್ತಿಗೆ ಸುಮಾರು 60 ಗ್ರಾಮಗಳು ಬರುತ್ತವೆ. ತೊಗರಿಯು ಇಲ್ಲಿನ ರೈತರ ಪ್ರಮುಖ ಬೆಳೆಯಾಗಿದೆ. ಜಿಲ್ಲೆಯಲ್ಲಿ  ದೊಡ್ಡ ಹೋಬಳಿ ಕೇಂದ್ರ ವಾಗಿರುವ ಪಟ್ಟಣದಲ್ಲಿ ಈಗಾಗಲೆ ಕೃಷಿ ಉತ್ಪನ್ನ ಮಾರುಕಟ್ಟೆಯ ಉಪ ಕೇಂದ್ರವಿದ್ದು ಎಪಿಎಂಸಿ ಹಾಗೂ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಕಚೇರಿ ಮತ್ತು ಗೋದಾಮುಗಳು ಇಲ್ಲಿ ಇವೆ.

ಆದ್ದರಿಂದ ತೊಗರಿ ಬೆಳೆಯ ಸಂಗ್ರಹಣೆಗೆ ಸಾಕಷ್ಟು ಅನುಕೂಲತೆ ಇದೆ. ಕಾರಣ ಇಲ್ಲಿ ಸರ್ಕಾರದಿಂದ ತೊಗರಿ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಶಿವನಗೌಡ ಸಾಲವಡಗಿ, ವಿಶ್ವ ನಾಥರೆಡ್ಡಿ, ಪ್ರಭುಗೌಡ ಗೂಗಲ್ಲ, ಬಸ ನಗೌಡ ಕೆಂಭಾವಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT