ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಕ್ಕೇ ದೇಶದ ಹಿರಿಮೆ ಸಾರಿದ ವ್ಯಕ್ತಿ’

ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ‘ವಿವೇಕ ಬ್ಯಾಂಡ್‌’ ಉದ್ಘಾಟನೆ
Last Updated 11 ಜನವರಿ 2017, 8:20 IST
ಅಕ್ಷರ ಗಾತ್ರ

ಹಾವೇರಿ: ‘ಭಾರತ ಕೇವಲ ಹಾವಾಡಿಗರ ದೇಶವಲ್ಲ, ಅದು ಸುಂದರ ಮನಸ್ಸುಗಳುಳ್ಳ, ಒಳ್ಳೆಯ ತತ್ವಸಿದ್ಧಾಂತಗಳನ್ನು ಒಳಗೊಂಡ ಮಹಾನ್‌ ವ್ಯಕ್ತಿಗಳು ಹುಟ್ಟಿದ ಪವಿತ್ರ ಭೂಮಿ’ ಎಂದು ಇಡೀ ವಿಶ್ವಕ್ಕೆ ಸಾರಿದವರು ಸ್ವಾಮಿ ವಿವೇಕಾನಂದರು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

‘ಸ್ವಾಮಿ ವಿವೇಕಾನಂದರ 154ನೇ ಜಯಂತಿ’ ನಿಮಿತ್ತ ಸಮರ್ಥ ಭಾರತ ಟ್ರಸ್ಟ್‌ ಇಲ್ಲಿಯ ಜಿಲ್ಲಾ ಗುರುಭವನದಲ್ಲಿ ಆಯೋಜಿಸಿದ್ದ ‘ವಿವೇಕ ಬ್ಯಾಂಡ್‌’ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಯುವಕರಲ್ಲಿ ದೇಶದ ಬಗ್ಗೆ ಆಲೋಚಿಸುವಂತೆ ಸ್ವಾಮಿ ವಿವೇಕಾನಂದರ ತತ್ವದ ಸಿದ್ಧಾಂತದ ನೆಲೆಗಟ್ಟಿನ ಮೇಲೆ, ‘ಉತ್ತಮನಾಗು ಉಪಕಾರಿಯಾಗು’ ಎಂಬ ಸಂದೇಶದ ಮೂಲಕ ವಿವೇಕ ಬ್ಯಾಂಡನ್ನು ಎಲ್ಲರಿಗೂ ಪರಿಚಯಸುವ ಕೆಲಸವನ್ನು ಟ್ರಸ್ಟ್‌ ಮಾಡುತ್ತಿದೆ. ದೇಶದಲ್ಲಿ ಅನೇಕ ಶತಮಾನಗಳಿಂದ ಆಚರಿಸುತ್ತಾ ಬಂದ ‘ರಕ್ಷಾ ಬಂಧನ’ದ ಮಹತ್ವ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಅದೊಂದು ಸಂಘ ಪರಿವಾರದ ಕಾರ್ಯಕ್ರಮವೆಂದು, ಒಂದು ಬ್ರ್ಯಾಂಡ್‌ ರೀತಿಯಲ್ಲಿ ಅದನ್ನು ನೊಡುವುದು ತಪ್ಪು. ಅಣ್ಣ –ತಂಗಿಯರ ಪವಿತ್ರ ಭಾವನಾತ್ಮಕ ಸಂಬಂಧವನ್ನು ಗಟ್ಟಿ ಮಾಡುವುದೇ ರಕ್ಷಾ ಬಂಧನದ ಮುಖ್ಯ ಉದ್ದೇಶ’ ಎಂದರು.

‘ಪ್ರಪಂಚದ ವಿವಿಧ ದೇಶಗಳಲ್ಲಿ ಆರ್ಥಿಕ ಸದೃಢತೆಗೆ ಶ್ರಮಿಸುತ್ತಿರುವ ನಮ್ಮ ದೇಶದ ಬುದ್ಧಿವಂತರನ್ನು ಬಳಸಿಕೊಳ್ಳುತ್ತಿದ್ದಾರೆ. ಅವರನ್ನು ನಮ್ಮಲ್ಲೇ ಏಕೆ ಉಳಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ದೇಶದಲ್ಲಿನ ಒಳಜಗಳ, ಕಿತ್ತಾಟವೇ ಅದಕ್ಕೆ ಮೂಲ ಕಾರಣ.  ನಮ್ಮ ದೇಶದ ಬುದ್ಧಿವಂತರನ್ನು ದೇಶದಲ್ಲಿಯೇ ಉಳಿಸಿಕೊಂಡು, ದೇಶವನ್ನು  ಸದೃಢವಾಗಿ ಪರಿವರ್ತಿಸಲು, ದೇಶದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಅವಶ್ಯಕ’ ಎಂದರು.

‘ವಿವೇಕ ಬ್ಯಾಂಡ್‌ ಧರಿಸಿ ದಿನದಲ್ಲಿ ಒಂದಾದರೂ ಒಳ್ಳೆಯ ಆಲೋಚನೆ ಅಥವಾ ಒಳ್ಳೆಯ ಕೆಲಸ ಮಾಡುವ ಮನೋಭಾವ ಬೆಳೆಯಿಸಿಕೊಳ್ಳಬೇಕು’ ಎಂದರು.
‘ಸ್ವಾತಂತ್ರ್ಯ ಬಂದು 70ವರ್ಷ ಗತಿಸಿದರೂ ಈ ವರೆಗೆ ಭಾರತ ಹಾಗೂ ಬಾಂಗ್ಲಾ ದೇಶದ ಗಡಿಪ್ರದೇಶ ನಿರ್ಧಾರವಾಗಿರಲ್ಲಿಲ್ಲ. ಆದರೆ, ಪ್ರಧಾನಿ ಅಧಿಕಾರ ವಹಿಸಿಕೊಂಡ 6 ತಿಂಗಳಲ್ಲಿ ಭಾರತ ಹಾಗೂ ಬಾಂಗ್ಲಾ ದೇಶದ ಗಡಿಯನ್ನು ನಿರ್ಧರಿಸಿ ಅಕ್ರಮ ಬಾಂಗ್ಲಾ ವಾಸಿಗಳನ್ನು ಅವರ ದೇಶಕ್ಕೆ ಕಳುಹಿಸಿದ್ದಾರೆ’ ಎಂದರು.

‘ಕಾಶ್ಮೀರ, ಪಾಕ್‌ ಆಕ್ರಮಿತ ಕಾಶ್ಮೀರವಾಗಿರದೆ ಚೀನಾ ಆಕ್ರಮಿತ ಕಾಶ್ಮೀರವಾಗಿದೆ. ಭಾರತ ಯುವ ಸಮುದಾಯದ ಮನೋಭಾವನ್ನು ಹಾಳು ಮಾಡುವ ದೃಷ್ಟಿಯಿಂದಲೇ ನೆರೆಯ ರಾಷ್ಟ್ರಗಳು ನಮ್ಮ ದೇಶಕ್ಕೆ ಮಾದಕ ವಸ್ತು, ಅಕ್ರಮ ಶಸಸ್ತ್ರಗಳನ್ನು ರವಾನೆ ಮಾಡುತ್ತಿದೆ.

‘ಭಾರತದಲ್ಲಿ ಹೆಚ್ಚಾಗುತ್ತಿರುವ ಯುವ ಸಮುದಾಯದ ಬಗ್ಗೆ ನೆರೆ ರಾಷ್ಟ್ರಗಳಲ್ಲಿ ನಡುಕ ಉಂಟಾಗಿದೆ. ಆದ್ದರಿಂದ, ನಮ್ಮ ದೇಶದ ಯುವಕರ ಮನೋಭಾವದ ಮೇಲೆ ವ್ಯತಿರಿಕ್ತ ಪರಿಣಾಮ ಬಿರಲು ನೆರೆ ರಾಷ್ಟ್ರಗಳು ಶತಪ್ರಯತ್ನ ಮಾಡುತ್ತಿವೆ. ಹೀಗಾಗಿ ಇಂದು ಬೆಂಗಳೂರಿನಲ್ಲಿ ಕಾಲೇಜುಗಳ ಬಳಿ ಮಾದಕ ವಸ್ತುಗಳು ದೊರೆಯು ವಂತಾಗಿದೆ’ ಎಂದು ವಿಷಾದ ವ್ಯಕ್ತ ಪಡಿಸಿದರು.

ಜಿಲ್ಲಾ ಸಂಯೋಜಕ ಡಾ.ನಾರಾಯಣ ಪವಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ಧರಾಜ ಕಲಕೋಟಿ, ಮಾಜಿ ಶಾಸಕರಾದ ಶಿವರಾಜ ಸಜ್ಜನವರ, ನೆಹರೂ ಓಲೇಕಾರ, ಸುರೇಶ ಹೊಸಮನಿ, ಭಾರತಿ ಜಂಬಗಿ, ರೂಪಾ ಬಾಕಳೆ, ಶಶಿ ಹೊಸಳ್ಳಿ, ಸಂತೋಷ ಆಲದಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ನೇತ್ರದಾನಕ್ಕೆ ಸಲಹೆ
ಪ್ರಭಾಕರ ರಾವ್‌ ಮಂಗಳೂರ ಮಾತನಾಡಿ, ‘ದೇಶದಲ್ಲಿ ಕೇವಲ 20 ಲಕ್ಷ ಜನರು ಮಾತ್ರ ಕಾರ್ನಿಯಾ ರೋಗದಿಂದ ಬಳಲುತ್ತಿದ್ದಾರೆ. ಆದರೆ, ದೇಶದಲ್ಲಿ ಪ್ರತಿವರ್ಷ 1 ಲಕ್ಷ ಜನರು ವಿವಿಧ ಕಾರಣಗಳಿಂದ ಸಾಯುತ್ತಿದ್ದಾರೆ. ಒಂದು ವೇಳೆ  ಎಲ್ಲ ಜನ ಸಮುದಾಯದವರು ತಮ್ಮ ಮರಣದ ನಂತರ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ಮಾಡಿದರೆ ಕೆಲವೇ  ಕೆಲವು ವರ್ಷಗಳಲ್ಲಿ ಭಾರತ ಕಾರ್ನಿಯಾ ಮುಕ್ತ ಭಾರತವಾಗುತ್ತದೆ. ಆದರಿಂದ ಎಲ್ಲರೂ ತಮ್ಮ ಮರಣದ ನಂತರ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT