ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಮಟ್ಟದಲ್ಲೂ ಪರಿಶೀಲನಾ ಸಭೆ

Last Updated 11 ಜನವರಿ 2017, 8:47 IST
ಅಕ್ಷರ ಗಾತ್ರ

ಕಾರವಾರ: ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಯಲ್ಲಿ ಇನ್ನೂ ಪೂರ್ಣಗೊಳ್ಳಬೇಕಾಗಿರುವ ಕಾಮ­ಗಾರಿಗಳ ಕುರಿತು ತಾಲ್ಲೂಕು ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸಲಾ­ಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಹೇಳಿದರು. ಮಂಗಳವಾರ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

2013-–14ನೇ ಸಾಲಿನಲ್ಲಿ ಆಯ್ಕೆ ಮಾಡಲಾಗಿರುವ ಕುಡಿಯುವ ನೀರಿನ ಕಾಮಗಾರಿಗಳ ಅನುಷ್ಠಾನ ಇನ್ನೂ ಮುಂದುವರೆದಿದ್ದು, ಈ ಎಲ್ಲ ಕಾಮ­ಗಾರಿಗಳನ್ನು ಪೂರ್ಣಗೊಳಿಸಲು ₹ 274.­89 ಕೋಟಿ ಅಗತ್ಯವಿದೆ. ಪ್ರಸ್ತುತ ಸಾಲಿನಲ್ಲಿ ₹ 34.61 ಕೋಟಿ ಬಿಡುಗಡೆ­ಯಾಗಿದೆ. ಅನುದಾನ ಬಿಡುಗಡೆಯಾ­ದಂತೆ ಹಂತ ಹಂತವಾಗಿ ಕಾಮಗಾರಿ­ಗಳನ್ನು ಪೂರ್ಣಗೊಳಿಸಲಾ­ಗುತ್ತಿದೆ. ಪ್ರಸ್ತುತ ಹೊಸ ಕುಡಿಯುವ ನೀರಿನ ಕಾಮಗಾರಿಗಳಿಗೆ ಅನುಮತಿ ನೀಡದೆ ಮುಂದುವರೆದ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗುತ್ತಿದೆ. 2013–-14ರಲ್ಲಿ ಕೇಂದ್ರೀಕೃತ ಅನುದಾನ ಖಾತೆಯಲ್ಲಿದ್ದ ₹ 16 ಕೋಟಿ ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿದೆ. ಸದರಿ ಕಾಮಗಾರಿಗಳ ಅನುಷ್ಠಾನ ಕುರಿತು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರ ಸಭೆಯನ್ನು ಕರೆಯುವಂತೆ ಅವರು ಸೂಚನೆ ನೀಡಿದರು.

ಸದರಿ ಕಾಮಗಾರಿಗಳ ಅನುಷ್ಠಾನ­ದಲ್ಲಿ ಲೋಪ ಉಂಟಾಗಿದ್ದು, ಅಧಿಕಾರಿ­ಗಳು ಸರಿಯಾದ ಮಾಹಿತಿಯನ್ನು ಒದಗಿಸುತ್ತಿಲ್ಲ. ಈ ಕುರಿತು ಸಮಗ್ರ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಸದಸ್ಯರು ಒತ್ತಾಯಿಸಿದರು.

ಮೈತ್ರಿ ಕಾರ್ಯಕರ್ತರ ನೇಮಕ 
‘ಗ್ರಾಮೀಣ ಮಟ್ಟದಲ್ಲಿ ಪಶು ಸಂಗೋಪನಾ ಇಲಾಖೆಯನ್ನು ಬಲಪಡಿ­ಸಲು ‘ಮೈತ್ರಿ’ ಕಾರ್ಯಕರ್ತರನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ. ಕನಿಷ್ಠ 10ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಪಶುಗಳ ಕೃತಕ ಗರ್ಭಧಾರಣೆ, ಪ್ರಾಥಮಿಕ ಪಶು ಚಿಕಿತ್ಸಾ ವಿಧಾನಗಳ ಕುರಿತು 3 ತಿಂಗಳ ಕಾಲ
ತರಬೇತಿ ನೀಡಲಾಗುವುದು. ಪ್ರಥಮ ಮೂರು ವರ್ಷಗಳ ಕಾಲ ಇಲಾಖೆಯಿಂದ ಅವರಿಗೆ ಗೌರವಧನ ನೀಡಿ, ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಅವರನ್ನು ಸಜ್ಜುಗೊಳಿಸಲು ಉದ್ದೇಶಿಸ­ಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.­ಚಂದ್ರಶೇಖರ ನಾಯಕ ತಿಳಿಸಿದರು.
ಸದಸ್ಯರ ಗಮನಕ್ಕೆ ತರಬೇಕು

ಜಿಲ್ಲಾ ಪಂಚಾಯ್ತಿಯ ಪ್ರತಿಯೊಂದು ಯೋಜನೆ ಹಾಗೂ ಕಾರ್ಯಕ್ರಮಗಳಿಗೆ ಆಯಾ ವ್ಯಾಪ್ತಿಯ ಜಿಲ್ಲಾ ಪಂಚಾಯ್ತಿ ಸದಸ್ಯರನ್ನು ಆಹ್ವಾನಿಸಬೇಕು. ಈ ಕುರಿತು ಶಿಷ್ಟಾಚಾರದಲ್ಲಿ ಯಾವುದೇ ಲೋಪ ಮಾಡಬಾರದು ಎಂದು ಅಧ್ಯಕ್ಷರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT