ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಟ್ಟೂರಿಗೆ ತಾಲ್ಲೂಕು ಸ್ಥಾನ’

Last Updated 11 ಜನವರಿ 2017, 9:05 IST
ಅಕ್ಷರ ಗಾತ್ರ

ಕೊಟ್ಟೂರು: ಪಟ್ಟಣದ ಜನತೆಯ ಬಹು ದಶಕಗಳ ಕನಸಾದ ತಾಲ್ಲೂಕುರಚನಾ ಕಾರ್ಯವು ನನಸಾಗುವ ದಿನ ಹತ್ತಿರವಾಗುತ್ತಿದೆ.  ರಾಜ್ಯದಲ್ಲಿ ನೂತನ ತಾಲ್ಲೂಕು ರಚನೆಗೆ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ  43 ತಾಲ್ಲೂಕು ರಚನಾ ಪಟ್ಟಿಗೆ ಇದೀಗ  ಕಾಯಕಲ್ಪ ಕೂಡಿ ಬಂದಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಲದ ಬಜೆಟ್‌ನಲ್ಲಿ 33 ತಾಲ್ಲೂಕು ರಚನೆಗಳ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ  ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಹೇಳಿಕೆಯಿಂದ  ಈ ಭಾಗದ ಜನತೆಗೆ ತಾಲ್ಲೂಕು ಪಟ್ಟವನ್ನು ಹೊಂದುವ ಹೆಮ್ಮೆ ತಮ್ಮದಾಗಲಿದೆ ಎಂಬ ಉತ್ಸಾಹ ಹುಮ್ಮಸ್ಸು ಈ ಭಾಗದ ಜನರಲ್ಲಿ ಕಾಣಿಸಿಕೊಳ್ಳತೊಡಗಿದೆ.

ಹಿಂದಿನ ಸರ್ಕಾರ ಘೋಷಿಸಿದಂತೆ 43 ತಾಲ್ಲೂಕುಗಳಲ್ಲಿ 33 ತಾಲ್ಲೂಕುಗಳನ್ನು ರಚಿ ಸಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂಬ ಕಂದಾಯ ಸಚಿವರ ಹೇಳಿಕೆಯಿಂದ ಪಟ್ಟಣದ ಜನತೆಯನ್ನು ಗೊಂದಲಕ್ಕೀಡುಮಾಡಿದೆ ಹಾಗಾ ದರೆ 33 ತಾಲ್ಲೂಕು ಪಟ್ಟಿಯಲ್ಲಿ ಕೊಟ್ಟೂರು ಸೇರ್ಪಡೆ ಬಗ್ಗೆ ವ್ಯಕ್ತವಾಗಿರುವ ಅನುಮಾನ ಗಳಿಗೆ ಮಂಗಳವಾರ ಎಪಿಎಂಸಿ ಚುನಾವಣೆ ಪ್ರಯುಕ್ತ ಪಟ್ಟಣಕ್ಕೆ ಆಗಮಿಸಿದ್ದ ಶಾಸಕ ಎಸ್. ಭೀಮಾನಾಯ್ಕ ತೆರೆಎಳೆದಿದ್ದಾರೆ.

ಪತ್ರಕರ್ತ ರೊಂದಿಗೆ ಮಾತನಾಡಿ ಯಾವುದೇ ಕಾರಣಕ್ಕೂ ಈ ಬಾರಿ ನಡೆಯುವ ತಾಲ್ಲೂಕು ರಚನಾ ಪಟ್ಟಿಯಲ್ಲಿ ಕೊಟ್ಟೂರು ಪಟ್ಟಣ ವಂಚಿತವಾಗ ದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ ದ್ದಾರಲ್ಲದೇ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷಲಾಡ್ ಅವರನ್ನು ಸಂಪರ್ಕಿಸಿ ತಾಲ್ಲೂಕು ಪಟ್ಟಿಯಲ್ಲಿ ಕೊಟ್ಟೂರು ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದೇನೆ ಎಂದರು.ಅಲ್ಲದೇ
ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಹಾಗೂ ಕಂದಾಯ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ 33 ತಾಲ್ಲೂಕು ರಚನಾ ಪಟ್ಟಿಯಲ್ಲಿ ಕೊಟ್ಟೂರು ಸೇರ್ಪಡಿಯಾಗುವಂತೆ ಕೋರು ವುದಾಗಿ ತಿಳಿಸಿದರು

ಪಟ್ಟಣವು ತಾಲ್ಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದು ಈ ಭಾಗದ ಜನತೆಯ ಬಹು ವರ್ಷಗಳ ಬೇಡಿಕೆಯಾದ ತಾಲ್ಲೂಕು ರಚನೆಯ ಕನಸು ನನಸಾಗುವು ದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟವಾಗಿ ಭರವಸೆ ವ್ಯಕ್ತಪಡಿಸಿದರು  ಹಾಗೂ ಪಟ್ಟಣದಲ್ಲಿ ಪೂರ್ಣಗೊಳ್ಳದ ಯೋಜನೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಿ ಈ ಭಾಗದ ಜನತೆಯ ಬೇಡಿಕೆಗಳನ್ನು ಈಡೇರಿಸುವುದೇ ನನ್ನ ಪ್ರಮುಖ ಕರ್ತವ್ಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT