ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಬೆಂಬಲಿತರಿಗೆ ಒಲಿದ ಎಪಿಎಂಸಿ

Last Updated 11 ಜನವರಿ 2017, 9:15 IST
ಅಕ್ಷರ ಗಾತ್ರ

ಮಂಡ್ಯ: ಇಲ್ಲಿ ಮಂಗಳವಾರ ನಡೆದ ಮಂಡ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ಚುನಾವಣೆಯ ಮತ ಎಣಿಕೆಯಲ್ಲಿ 14 ಕ್ಷೇತ್ರಗಳ ಪೈಕಿ ಒಂಬತ್ತು ಕ್ಷೇತ್ರಗಳಲ್ಲಿ ಜೆಡಿಎಸ್‌ ಬೆಂಬಲಿತರು ಜಯ ಸಾಧಿಸಿದ್ದಾರೆ. ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ.

ವರ್ತಕರ ಕ್ಷೇತ್ರದಿಂದ ಕೆ.ಆತ್ಮಾನಂದ ಹಾಗೂ ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿವೈ.ಕೆ.ಪ್ರೇಮಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಲ್ಲೇಗೆರೆ, ಕೆರಗೋಡು, ಕೀಲಾರ, ಬೂದನೂರು, ದುದ್ದ, ಹೊಳಲು, ಯಲಿಯೂರು, ಕೊತ್ತತ್ತಿ ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತರು, ತಗ್ಗಹಳ್ಳಿ, ಬಸರಾಳು, ಹಾಪ್‌ಕಾಮ್ಸ್‌, ಆರ್ಎಪಿಸಿಎಂಎಸ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ.

ಹಲ್ಲೇಗೆ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಗಿರಿಯಮ್ಮ ಅವರು 1,305 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತ ಬಿ.ಎಂ.ಜಯರಾಮು ಅವರು 8,36  ಮತ ಪಡೆದಿದ್ದಾರೆ. 469 ಮತಗಳಿಂದ ಗಿರಿಯಮ್ಮ ಗೆಲುವು ಸಾಧಿಸಿದ್ದಾರೆ.

ಬೂದನೂರು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತರಾಗಿ ತಾ.ಪಂ ಮಾಜಿ ಸದಸ್ಯ ಬಿ.ಎನ್.ರಘು ಅವರು 2, 304  ಮತ ಪಡೆದರೆ, ಅಮರಾವತಿ ನಾಗರಾಜು 1,866 ಮತ ಪಡೆದಿದ್ದಾರೆ. 438 ಮತಗಳಿಂದ ರಘು ಗೆದ್ದಿದ್ದಾರೆ.

ಕೆರಗೋಡು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಿ.ಬೋರೇಗೌಡ ಅವರು 2,676 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ.ಯೋಮಕೇಶ್ (ಯೋಗೀಶ್) ಅವರು 1,355 ಮತ ಪಡೆದಿದ್ದಾರೆ.

ಬೋರೇಗೌಡ ಅವರು 1,321 ಮತಗಳ ಭಾರಿ ಅಂತರ ಗೆಲುವು ಪಡೆದಿದ್ದಾರೆ.

ಬಸರಾಳು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿ.ಎ.ವಿನೋದ್ ಅವರು 1,573 ಮತ ಪಡೆದರೆ,  ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೃಷ್ಣೇಗೌಡ ಅವರು 1,562 ಮತ ಪಡೆದಿದ್ದಾರೆ. ಕೇವಲ 11 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಕೀಲಾರ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ಪಿ. ವೀರಪ್ಪ ಅವರು 2,121 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತ ಸಿ.ಎ.ಜಯಶಂಕರ್ ಅವರು 1,233 ಮತ ಪಡೆದಿದ್ದಾರೆ. 888 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಹಣ್ಣು ಸಂಸ್ಕರಣಾ ಘಟಕಗಳ (ಹಾಪ್‌ಕಾಮ್ಸ್) ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಕೆ.ಎಚ್.ಪುಟ್ಟಸ್ವಾಮೇಗೌಡ ಅವರು ಎಂಟು ಮತ ಗಳಿಸಿ ಜಯಸಿದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಸ್.ಲಿಂಗಯ್ಯ ಅವರು ಏಳು ಮತ ಪಡೆದು ಕೇವಲ ಒಂದು ಮತದಿಂದ ಸೋತಿದ್ದಾರೆ.

ರೈತರ ವ್ಯವಸಾಯೋತ್ಪನ್ನ ಸಂಘಗಳ (ಆರ್ಎಪಿಸಿಎಂಎಸ್) ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾತನೂರು ಸತೀಶ್ 12 ಮತ ಪಡೆದರೆ, ಬಿ. ಚಂದ್ರ ಅವರು ಯಾವುದೇ ಮತ ಪಡೆದಿಲ್ಲ.

ಸತೀಶ್‌ ಅವರು ಪರವಾಗಿ ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದರು ಎಂದು ತಿಳಿದು ಬಂದಿದೆ.
ಕೊತ್ತತ್ತಿ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ.ಮಧು 2849 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿದ್ದರಾಮು 1,918 ಮತ ಪಡೆದಿದ್ದಾರೆ. ಮಧು ಅವರು 931 ಮತಗಳಿಂದ ಜಯ ಗಳಿಸಿದ್ದಾರೆ.

ತಗ್ಗಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಪಲ್ಲವಿ ಹಳುವಾಡಿ 2,084 ಮತ ಪಡೆದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಅನುರಾಧಾ 1,664 ಮತ ಪಡೆದಿದ್ದಾರೆ. ಪಲ್ಲವಿ 420 ಮತಗಳಿಂದ ಜಯ ಪಡೆದಿದ್ದಾರೆ.

ಯಲಿಯೂರು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಬೋರವೆಲ್‌ ಕೃಷ್ಣಪ್ಪ 2,082 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತ ಮಾಯಪ್ಪ ಅವರು 1,227 ಮತ ಪಡೆದಿದ್ದಾರೆ. ಹೊಳಲು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಎಂ.ಎಲ್.ಶಿವಕುಮಾರ್ 2,439 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತ ಸಿ.ಡಿ.ತಮ್ಮೇಗೌಡ ಅವರು 1,772 ಮತ ಪಡೆದಿದ್ದಾರೆ.
ದುದ್ದ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಚಿಕ್ಕಹಲಗಯ್ಯ 1,743 ಮತ ಪಡೆದರೆ, ಪ್ರತಿಸ್ಪರ್ಧಿ ಅರಸಯ್ಯ ಅವರು 8,97 ಮತ ಪಡೆದಿದ್ದಾರೆ.

ಚಿಕ್ಕಹಲಗಯ್ಯ ಅವರು 8,46 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಯಾಗಿ ಮಾರುತಿ ಪ್ರಸನ್ನ ಅವರು ಪ್ರಮಾಣಪತ್ರ ನೀಡಿದರು. ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಮತ ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT