ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯವೂ ಇಲ್ಲದ ಪ್ರಾಥಮಿಕ ಶಾಲೆ!

Last Updated 11 ಜನವರಿ 2017, 10:10 IST
ಅಕ್ಷರ ಗಾತ್ರ

ಹನೂರು: ಬಿರುಕು ಬಿಟ್ಟ ಗೋಡೆ, ಒಡೆದ ಹೆಂಚು, ಕಳಚಿ ಬೀಳುತ್ತಿರುವ ಚಾವಣಿಯ ಗಾರೆ, ಶಾಲಾ ಆವರಣ ರಾತ್ರಿಯ ಹೊತ್ತು ಕಿಡಿಗೇಡಿಗಳಿಗೆ ಆಶ್ರಯ ತಾಣ.
ಇದು, ಸಮೀಪದ ಮಂಗಲ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿ.  ಹನೂರು ಶೈಕ್ಷಣಿಕ ವಲಯದ ವ್ಯಾಪ್ತಿಯ ಮಂಗಲ ಸರ್ಕಾರಿ ಪ್ರಾಥಮಿಕ ಶಾಲೆ ಮೂಲಸೌಲಭ್ಯಗಳಿಂದ ವಂಚಿತವಾಗಿದೆ.

ಶಾಲೆಯಲ್ಲಿ 10 ಕೊಠಡಿಗಳಿವೆ. ಆದರೆ ಮುಖ್ಯಶಿಕ್ಷಕರ ಕೊಠಡಿ ಹೊರತುಪಡಿಸಿ ಉಳಿದ ಕೊಠಡಿಗಳ ಚಾವಣಿಯ ಗಾರೆ ಕಳಚಿ ಬೀಳುತ್ತಿದೆ. ಕೆಲ ಕೊಠಡಿಗಳ ಗೋಡೆ ಬಿರುಕುಬಿಟ್ಟಿದೆ. ಈ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಇಲ್ಲಿನ ಶಿಕ್ಷಕರು ಸದಾ ಆತಂಕದಲ್ಲೇ ತರಗತಿಯಲ್ಲಿ ಕಾಲ ಕಳೆಯಬೇಕಾಗಿದೆ.

ಶಾಲೆಯಲ್ಲಿ 173 ವಿದ್ಯಾರ್ಥಿಗಳಿದ್ದಾರೆ. 1ರಿಂದ 7ನೇ ತರಗತಿವರೆಗಿನ ಕೆಲ ಕೊಠಡಿಗಳ ಹೆಂಚು ಒಡೆದಿವೆ. ಮಳೆ ಬಂದರೆ ಎರಡು, ಮೂರು ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಕಲಿಸುವ ಅನಿವಾರ್ಯ ಸ್ಥಿತಿ.

ಶಾಲಾಭಿವೃದ್ಧಿ ಸಮಿತಿ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಸೂಕ್ತ ಭದ್ರತೆಯಿಲ್ಲ: ಶಾಲೆಯ ಪಶ್ಚಿಮ ದಿಕ್ಕಿಗೆ ಸುತ್ತುಗೋಡೆ ಇಲ್ಲ. ರಾತ್ರಿಯಾದರೆ ಕಿಡಿಗೇಡಿಗಳು ಗಲೀಜು ಮಾಡುವುದು, ಬೆಳೆಸಿರುವ ಗಿಡಗಂಟಿ ಕಿತ್ತುಹಾಕುವುದು ಮಾಡುತ್ತಾರೆ ಎಂಬುದು ಶಿಕ್ಷಕರ ಆರೋಪ.
ಹಿಂದೆ ಈ ಶಾಲೆಯಲ್ಲಿ ಎರಡು ಬಾರಿ ಅಡುಗೆ ಮನೆ ಬೀಗ ಒಡೆದು ಗ್ಯಾಸ್ ಸಿಲಿಂಡರ್, ಅಡುಗೆ ಪಾತ್ರೆ ಕಳುವಾಗಿದ್ದು, ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT