ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ತತ್ವಗಳು ಘೋಷಣೆಗೆ ಸೀಮಿತ 

Last Updated 11 ಜನವರಿ 2017, 11:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ದೇಶಕ್ಕೆ ಸ್ವತಂತ್ರ ಬಂದು 70 ವರ್ಷ ಕಳೆದಿದ್ದರೂ ಸಂವಿಧಾನದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ, ಆರ್ಥಿಕ ಸಮಾನತೆಗಳು ಇಂದಿಗೂ ಘೋಷಣೆಗಳಾಗಿ ಉಳಿದಿವೆ’ ಎಂದು ಶಾಸಕ ಸಿ.ಟಿ.ರವಿ ವಿಷಾದಿಸಿದರು.  

ನಗರದ ಮಲೆನಾಡು ಶಿಕ್ಷಣ ಸಂಸ್ಥೆ ಕಾಲೇಜು ಆವರಣದಲ್ಲಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ, ಜಿಲ್ಲಾ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ರಾಜ್ಯ ಪದಾಧಿಕಾರಿಗಳ ಮತ್ತು ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ತನ್ನದೇ ಮಹತ್ವದ ಸ್ಥಾನವಿದೆ. ಗುರುಗಳನ್ನು ದೇವರ ಸ್ಥಾನದಲ್ಲಿ ಕಾಣುತ್ತೇವೆ. ಪೋಷಕರ ನಂತರದ ಸ್ಥಾನವನ್ನು ಶಿಕ್ಷಕರಿಗೆ ನೀಡಲಾಗಿದೆ. ದೇಶಕ್ಕೆ ಸ್ವತಂತ್ರ ಲಭಿಸಿ 70 ವರ್ಷಗಳು ಕಳೆದಿದ್ದರೂ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಅವೈಜ್ಞಾನಿಕ ಶಿಕ್ಷಣ ವ್ಯವಸ್ಥೆ ಕಾರಣ ಎಂದು ದೂಷಿಸಿದರು.

ಶಿಕ್ಷಣ ಕೇವಲ ಅಕ್ಷರ ಜ್ಞಾನವಲ್ಲ. ಉದ್ಯೋಗ ಪಡೆಯುವುದೂ ಅಲ್ಲ. ಜ್ಞಾನ ಸಂಪಾದನೆ ಜತೆಗೆ ಸ್ವಾಭಿಮಾ ನಿಯಾಗಬೇಕು. ಅಂತಹ ಆಶಯ ಈಡೇರಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವಮಟ್ಟದಲ್ಲಿ ದೇಶ ಗುರುತಿಸಿಕೊಳ್ಳಲು ಕಾರಣ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ. ಹಾಗೆಂದು ಎಲ್ಲ ಕ್ಷೇತ್ರಗಳಲ್ಲೂ ಪೂರ್ಣ ಪ್ರಗತಿ ಶಿಕ್ಷಣ ದಿಂದ ಸಾಧ್ಯವಾಗಿಲ್ಲ, ಇಂದು ಶಿಕ್ಷಣ ವ್ಯಾಪರವಾಗಿದೆ. ವೈದ್ಯಕೀಯ ಶಿಕ್ಷಣಕ್ಕೆ ಲಕ್ಷಗಟ್ಟಲೇ ಹಣ ಪಾವತಿ ಸಬೇಕು. ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಾಮಾ ಣಿಕತೆಯನ್ನು ಬೂತುಗನ್ನಡಿ ಹಿಡಿದು ಹುಡುಕುವ ಪರಿಸ್ಥಿತಿ ಬಂದಿದೆ ಎಂದರು. 

ಸ್ವತಂತ್ರ ನಂತರದ ಪಂಚವಾರ್ಷಿಕ ಯೋಜನೆಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದೇ, ಕೃಷಿ, ಕೈಗಾರಿಕೆ ಹಾಗೂ ಆರ್ಥಿಕ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಲಾಯಿತು. ಶಿಕ್ಷಣದ ಮೂಲ ಆಲೋಚನೆಯಲ್ಲಿ ಸುಧಾರಣೆಗ ಳಾಗ ಬೇಕು. ತನ್ನ ಸ್ವಾರ್ಥಕ್ಕಿಂತ ಸಮಾಜದ ಮುಖ್ಯವೆಂಬ ಕಲ್ಪನೆ ಮೂಡಬೇಕು. ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಸ್ವಾಸ್ಥ್ಯ ಸಮಾಜ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ತಯಾರಾಗಬೇಕು. ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ ಕುರಿತು ಅಧಿವೇಶನದಲ್ಲಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಶಾಸಕ ಬಿ.ಬಿ. ನಿಂಗಯ್ಯ ಮಾತ ನಾಡಿ, ಒಬ್ಬ ವ್ಯಕ್ತಿಯ ಜೀವನ ಬದಲಾ ವಣೆಗೆ ಗುರುವಿನ ಪಾತ್ರ ಬಹಳ ಷ್ಟಿರು ತ್ತದೆ. ಶಿಕ್ಷಣ ಜಾತಿ, ಧರ್ಮಗಳ ನಡುವೆ ಚದುರಿದೆ. ಶಿಕ್ಷಣ ಕೇವಲ ಅಕ್ಷರ ಜ್ಞಾನಕ್ಕೆ ಸೀಮಿತವಾಗಬಾರದು. ಎಲ್ಲ ರನ್ನು ಪ್ರೀತಿ ಯಿಂದ ಕಾಣುವ ಹಾಗೆಯೇ ಕುವೆಂಪು ಅವರ ‘ವಿಶ್ವ ಮಾನವ ಸಂದೇಶ’ದ ಅರಿವು ಮೂಡಿಸಬೇಕು. ಶಿಕ್ಷಕರು ಹಲವು ಸಮಸ್ಯೆ ಎದುರಿಸು ತ್ತಿದ್ದಾರೆ. ಶಿಕ್ಷಕರ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಅರಿವು ಮೂಡಿಸಲು ಪ್ರಾಮಾ ಣಿಕ ಪ್ರಯತ್ನಿಸುವುದಾಗಿ ತಿಳಿಸಿದರು. 

ಸಮಾಜದ ವಿವಿಧ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿರುವ ಎಂ.ಆರ್. ಸಣ್ಣ ಸಿದ್ದೇಗೌಡ, ಗೌರಮ್ಮ ಬಸವೇಗೌಡ, ಕೆ.ಎಸ್.ರಮೇಶ್, ನರೇಂದ್ರ ಪೈ, ಉಮಾ ಮಹೇಶ್ವರಪ್ಪ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಎಂ.ಆರ್.ಗಿರೀಶ್ ಅವರನ್ನು ಸನ್ಮಾನಿಸ ಲಾಯಿತು.

ವಿಧಾನ ಪರಿಷತ್ ಮುಖ್ಯ ಸಚೇತಕ ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ರಾಜ್ಯ ಸಂಚಾಲಕರಾದ ಜಯಮಂಗಳ ನಾಗ ರಾಜ್, ಕಾರ್ಯಾಧ್ಯಕ್ಷ ಕೆ. ಹನು ಮಂತಪ್ಪ, ಜಿಲ್ಲಾ ಪದವಿ ಪೂರ್ವ ಕಾಲೇ ಜುಗಳ ಉಪನ್ಯಾಸಕರ ಸಂಘದ ಕಾರ್ಯ ದರ್ಶಿ ಕೆ.ಎಸ್.ಮಂಜುನಾಥ್‌ ಭಟ್, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಟಿ.ಆರ್.ಲಕ್ಕಪ್ಪ, ಕೆ.ಪಿ.ಬಸವರಾಜ್, ಮಲ್ಲೇಶಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT