ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ಆತಂಕ

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

ಕಳೆದ ಏಪ್ರಿಲ್ ಒಂದರಿಂದ ನವೆಂಬರ್ ಒಂಬತ್ತರವರೆಗೆ ಉಳಿತಾಯ ಖಾತೆಯಲ್ಲಿ ಜಮಾವಣೆಗೊಂಡಿರುವ ಮೊತ್ತದ ಬಗ್ಗೆ ವಿವರ ಸಲ್ಲಿಸಲು ಎಲ್ಲಾ ಬ್ಯಾಂಕುಗಳಿಗೆ ಆರ್‌ಬಿಐ ಸೂಚಿಸಿರುವುದಕ್ಕೆ ಕೆ.ವಿ.ವಾಸು ಆಕ್ಷೇಪ ವ್ಯಕ್ತಪಡಿಸಿದ್ದಾರೆ (ವಾ.ವಾ., ಜ. 10).

ಆದರೆ ಅವರು ಬ್ಯಾಂಕಿನ ಈ ಕ್ರಮದ ಬಗ್ಗೆ ಏಕೆ ಆತಂಕಿತರಾಗಿದ್ದಾರೋ ಗೊತ್ತಾಗಲಿಲ್ಲ. ಉಳಿತಾಯ ಖಾತೆದಾರನ ಹಣ ನ್ಯಾಯಬದ್ಧ ದುಡಿಮೆಯಿಂದ, ತೆರಿಗೆ ಪಾವತಿ ನಿಯಮಗಳಿಗೆ ಅನುಗುಣವಾಗಿದ್ದರೆ ಅದರಲ್ಲಿ ಭಯಪಡುವುದೇನಿದೆ? ಮೇಲಾಗಿ ಈ ಕ್ರಮವು ಬ್ಯಾಂಕಿಗೆ ಸಂಬಂಧಿಸಿದ್ದು.

ಗ್ರಾಹಕ ಯಾವ ರೀತಿಯಲ್ಲೂ ತನ್ನ ಖಾತೆಯ ವಿವರಗಳನ್ನು ಯಾರಿಗೂ ನೀಡಬೇಕಿಲ್ಲ. ಆದರೆ ಇದು ಬ್ಯಾಂಕಿನ ಅಧಿಕಾರ ವ್ಯಾಪ್ತಿ ಮೀರಿದ್ದರೆ ಮಾತ್ರ ಖಂಡನಾರ್ಹ. ಕೇವಲ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಬೃಹತ್ ಉದ್ಯಮಿಗಳಷ್ಟೇ ಭ್ರಷ್ಟರು ಎಂದು ಅವರು ತಪ್ಪು ಭಾವಿಸಿದಂತಿದೆ!
-ಜಿ.ಕೆ.ಹಂಚಿನಾಳ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT