ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಮನಸು ಒಂದಾಗಬೇಕು

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ವೇಣುಗೋಪಾಲ ವಹ್ನಿ ಅವರಿಗೆ ಆಹ್ವಾನ
Last Updated 12 ಜನವರಿ 2017, 4:54 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ವೇಣುಗೋಪಾಲ ವಹ್ನಿ ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಯಶಸ್ವಿಗೊಳಿಸುವಂತೆ ತಾಲ್ಲೂಕು  ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಅಧಿಕೃತವಾಗಿ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.

ಮಂಗಳವಾರ ಪಟ್ಟಣದ ಮಾರಿಕಾಂಬ ಕಲ್ಯಾಣ ಮಂಟಪದಲ್ಲಿ ನಡೆದ ಸರಳ ಸಮಾರಂಭದಲ್ಲಿ  ಅಧಿಕೃತ ಆಹ್ವಾನ ನಿಡಿದರು. ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜು ಮಾತನಾಡಿ, ‘ಸಾಹಿತ್ಯ ಸಮ್ಮೇಳನ  ಜಿಲ್ಲೆಯಲ್ಲಿನ ಕನ್ನಡಿಗರ ಮನಸ್ಸುಗಳನ್ನು ಒಂದು ಮಾಡಿ  ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಹ ನೀಡಲಾಗುತ್ತಿದೆ.

ಇಲ್ಲಿನ ಹಿರಿಯ ಸಾಹಿತಿ ವೇಣುಗೋಪಾಲ ವಹ್ನಿ  ಅವರ ಸರಳ ಸಜ್ಜನಿಕೆ, ನಿಷ್ಠಾವಂತ ಕನ್ನಡದ ಕಟ್ಟಾಳಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಜ.16ರಂದು ಪಟ್ಟಣದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರದಲ್ಲಿ ನಡೆಯಲಿರುವ  ತಾಲ್ಲೂಕು 4ನೇ ಕನ್ನೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ  ಸರ್ವಾನುಮತದಿಂದ  ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಹಿತ್ಯ  ಸಮ್ಮೇಳನಕ್ಕೆ ಹಿರಿಯ ಸಾಹಿತಿಗಳು, ಕನ್ನಡ ಪರ ಸಂಘಟನೆಗಳು, ಸರ್ಕಾರಿ ನೌಕರರು, ಸಾರ್ವಜನಿಕರು ಭಾಗವಹಿಸಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.

ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ವೇಣುಗೋಪಾಲ ವಹ್ನಿ  ಮಾತನಾಡಿ, ‘ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಘಟಕ ಸಾಹಿತ್ಯದ ದುಡಿಮೆ ಹಾಗೂ ಹಿರಿತನವನ್ನು ಗುರುತಿಸಿ ಸಾಹಿತ್ಯ  ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಈ ಗೌರವ ತಾಲ್ಲೂಕಿನ ಜರು, ಸಾಹಿತಿಗಳಿಗೆ ಅರ್ಪಿಸುತ್ತೇನೆ. ಪ್ರತಿಯೋಬ್ಬ ಕನ್ನಡಿಗರು  ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ  ಕನ್ನಡ ತೇರು ಎಳೆಯಲು ಸಹಕರಿಸುಂತೆ’ ಕೊರಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ದಾಮು ವೆಂಕಟೇಶ್, ಹಿರಿಯ ಸಾಹಿತಿ ಮಾ.ವೇ. ತಮ್ಮಯ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಚಂದ್ರಪ್ಪ, ಕೋಶಾಧ್ಯಕ್ಷ ರತ್ನಪ್ಪ, ಕೋಲಾರ ನಗರ ಘಟಕದ ಅಧ್ಯಕ್ಷ ವೆಂಕಟಸ್ವಾಮಿ. ಜಿಲ್ಲಾ ಪ್ರತಿನಿದಿ ಜಮು ಚಂದ್ರ, ಕಾರ್ಯದರ್ಶಿ ನಾ.ಗುರುಮೂರ್ತಿ, ಎಸ್. ನಾರಾಯಣಸ್ವಾಮಿ, ಉಪನ್ಯಾಸಕರಾದ ಅನಂತಮೂರ್ತಿ, ರಾಮಕೃಷ್ಣ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT