ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಎಪಿಎಂಸಿಗೆ ಮತದಾನ ಇಂದು

ಮತಗಟ್ಟೆಗಳು ಸಜ್ಜು: ಮತ ಕ್ಷೇತ್ರಗಳಿಗೆ ತೆರಳಿದ ಚುನಾವಣೆ ಸಿಬ್ಬಂದಿ, ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ
Last Updated 12 ಜನವರಿ 2017, 5:50 IST
ಅಕ್ಷರ ಗಾತ್ರ
ಬಳ್ಳಾರಿ: ಜಿಲ್ಲೆಯ ನಾಲ್ಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಸಲುವಾಗಿ ಗುರುವಾರ ಮತದಾನ ನಡೆಯಲಿದೆ. ಜಿಲ್ಲೆಯ ಸಿರುಗುಪ್ಪ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹಡಗಲಿ ಮತ್ತು ಕೂಡ್ಲಿಗಿಯ ಸಮಿತಿಗಳಿಗೆ ಮತದಾನ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ನಡೆಯಲಿದೆ.
 
ಮತದಾನಕ್ಕೆ ನಿಗದಿ ಮಾಡಿರುವ ಮತಗಟ್ಟೆಗಳ ಪೈಕಿ, ಕೂಡ್ಲಿಗಿಯಲ್ಲಿ ಅತಿ ಹೆಚ್ಚು ಹಾಗೂ ಹೊಸಪೇಟೆಯಲ್ಲಿ ಅತಿ ಕಡಿಮೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕೂಡ್ಲಿಗಿ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕೊಟ್ಟೂರಿನಲ್ಲಿ ಎಪಿಎಂಸಿ ಮಾರುಕಟ್ಟೆಯು ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿಯೇ ಹೆಚ್ಚು ಮತಗಟ್ಟೆಗಳಿರುವುದು ವಿಶೇಷ.
 
ಅವಿರೋಧ ಆಯ್ಕೆ: ಸಿರುಗುಪ್ಪ, ಹಡಗಲಿಯಲ್ಲಿ ತಲಾ ಇಬ್ಬರು, ಹೊಸಪೇಟೆಯಲ್ಲಿ ಒಂಭತ್ತು ಮಂದಿ, ಹಗರಿಬೊಮ್ಮನಹಳ್ಳಿಯಲ್ಲಿ ಮೂವರು ಹಾಗೂ ಕೊಟ್ಟೂರಿನಲ್ಲಿ ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ.
 
ಮತ ಎಣಿಕೆ: ಮತ ಎಣಿಕೆ ಕಾರ್ಯ ಜನವರಿ 14ರಂದು ತಾಲ್ಲೂಕು ಕೇಂದ್ರ ಗಳಲ್ಲಿ ನಡೆಯಲಿದೆ. ಸಿರುಗುಪ್ಪದ ವಿವೇಕಾನಂದ ಪಬ್ಲಿಕ್‌ ಶಾಲೆ, ಹೊಸ ಪೇಟೆಯ ಚಿತ್ತವಾಡಗಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಗರಿಬೊಮ್ಮನಹಳ್ಳಿಯಲ್ಲಿರುವ ಜೆವಿ ಪಿಸಿ ಪ್ರಥಮ ದರ್ಜೆ ಕಾಲೇಜು, ಹಡಗಲಿಯ ಜಿ.ಪಿ.ಬಾಲಕದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಕೂಡ್ಲಿಗಿಯ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
 
ನಿಷೇಧ: ಮತದಾನದ ಪ್ರಯುಕ್ತ ಜನವರಿ 11ರ ಬೆಳಿಗ್ಗೆ 7ರಿಂದ 12ರ ಮಧ್ಯರಾತ್ರಿವರೆಗೆ, ಮತ ಎಣಿಕೆ ಪ್ರಯುಕ್ತ ಜನವರಿ 14ರ ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.
 
52 ಮತಗಟ್ಟೆಗಳು ಸಜ್ಜು 
ಹೂವಿನಹಡಗಲಿ: ಚುನಾವಣೆ ಪ್ರಯುಕ್ತ ಎಲ್ಲ 52 ಮತಗಟ್ಟೆಗಳನ್ನು ಸಜ್ಜುಗೊಳಿಸ ಲಾಗಿದೆ ಎಂದು ಚುನಾವಣಾಧಿಕಾರಿ ಯಾಗಿರುವ ತಹಶೀಲ್ದಾರ್ ರಾಘವೇಂದ್ರರಾವ್ ತಿಳಿಸಿದರು.
 
ಜಿಪಿಜಿ ಕಾಲೇಜು ಆವರಣದಲ್ಲಿ ತೆರೆಯಲಾದ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ರಾಗಿರುವ ಸಿಬ್ಬಂದಿಯನ್ನು ಬುಧವಾರ ಬೀಳ್ಕೊಟ್ಟ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು.
 
ಎಪಿಎಂಸಿಯ 13 ಕ್ಷೇತ್ರಗಳ ಪೈಕಿ 2ರಲ್ಲಿ ಅವಿರೋಧವಾಗಿ ಆಯ್ಕೆಯಾ ಗಿದ್ದು, 11ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಭದ್ರತೆಗೆ 170 ಪೊಲೀಸರು: ಮತ ಗಟ್ಟೆಗಳ ಭದ್ರತೆಗಾಗಿ 170 ಜನ ಪೊಲೀಸರನ್ನು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಲು ಕೆಎಸ್‌ಆರ್‌ಪಿ ಹಾಗೂ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಸಿಪಿಐ ಸುಧೀರ್ ಎಂ. ಬೆಂಕಿ ತಿಳಿಸಿದರು. 
 
648 ಚುನಾವಣಾ ಸಿಬ್ಬಂದಿ 
ಕೂಡ್ಲಿಗಿ: ಚುನಾವಣಾ ಸಿಬ್ಬಂದಿಯವರು ಆಯಾ ಮತಗಟ್ಟೆಗಳಿಗೆ ಬುಧವಾರ ತೆರಳಿದರು.   ತಾಲ್ಲೂಕಿನ 12 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಒಟ್ಟು 108 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 77,435 ರೈತ ಮತದಾರರು 32 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
 
ಒಟ್ಟು 648 ಚುನಾವಣಾ ಸಿಬ್ಬಂದಿ ಯವರು ಮತದಾನ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣಾ ಸಿಬ್ಬಂದಿಯವರು ಮತದಾನದ ಪೆಟ್ಟಿಗೆಗಳು, ಚುನಾವಣಾ ಸಾಮಗ್ರಿಗಳನ್ನು ಪಡೆದರು. 
 
ಬಿಗಿ ಭದ್ರತೆ: 108 ಮತಗಟ್ಟೆಗಳಲ್ಲಿ 28 ಅತೀ ಸೂಕ್ಷ್ಮ, 35 ಸೂಕ್ಷ್ಮ ಮತ್ತು 45 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.
 
27 ಅತೀಸೂಕ್ಷ್ಮ
ಸಿರುಗುಪ್ಪ: ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಯ ಒಟ್ಟು 14 ಕ್ಷೇತ್ರಗಳ ಪೈಕಿ 2 ಅವಿರೋಧ ಆಯ್ಕೆಯಾಗಿದ್ದು, ಉಳಿದ 12 ಕ್ಷೇತ್ರಗಳಿಗೆ ಗುರುವಾರ ಚುನಾವಣೆ ನಡೆಯಲಿದೆ.
 
ಒಟ್ಟು 57,918 ಮತದಾರರ ಪೈಕಿ, ಪುರುಷರು 41390, ಮಹಿಳಾ ಮತದಾರರು 16528 ಇದ್ದಾರೆ. 
 
12 ಕ್ಷೇತ್ರಗಳಲ್ಲಿ 76 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ತಹಶೀಲ್ದಾರ್‌ ಎಂ.ಸುನಿತಾ ತಿಳಿಸಿದರು.
 
ಇದರಲ್ಲಿ 27 ಅತೀಸೂಕ್ಷ್ಮ, 32 ಸೂಕ್ಷ್ಮ, 17ಸಾಮಾನ್ಯ ಮತಗಟ್ಟೆಗಳಿವೆ. ಸೂಕ್ಷ್ಮ, ಅತೀಸೂಕ್ಷ್ಮ ಮತಗಟ್ಟಿಗಳಲ್ಲಿ ಸೂಕ್ತ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 76 ಪಿ.ಆರ್.ಓ, 76 ಎ.ಪಿಆರ್.ಒ, 76 ಚುನಾವಣಾ ಸಹಾಯ ಕರನ್ನು ನೇಮಿಸಲಾಗಿದ್ದು. ಮತದಾನ ಶಾಂತಿ ಯುತವಾಗಿ ನಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳ ಲಾಗಿದೆ ಎಂದು ವಿವರಿಸಿದರು. 
 
ಚುನಾವಣೆ ಬಂದೋಬಸ್ತ್‌ಗಾಗಿ 2 ಸಿಪಿಐ, 4 ಪಿಎಸ್‌ಐ, 9 ಎಎಸ್‌ಐ, 42 ಹೆಡ್‌ಕಾನ್‌ಸ್ಟೆಬಲ್‌ಗಳು, 68 ಕಾನ್‌ಸ್ಟೆಬಲ್‌ಗಳು, 92 ಗೃಹರಕ್ಷಕದಳ ಮತ್ತು 2 ಡಿಆರ್‌ ತುಕಡಿಗಳನ್ನು ನಿಯೋಜಿಸಲಾಗಿದೆ.
 
**
200 ಸಿಬ್ಬಂದಿ ನೇಮಕ
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ 47 ಮತಗಟ್ಟೆಗಳಲ್ಲಿ ಇದೇ 12 ರಂದು 10 ಕ್ಷೇತ್ರಗಳಿಗೆ ನಡೆಯುತ್ತಿರುವ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ) ಚುನಾವಣೆಗೆ 200 ಜನ ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಹಶೀ ಲ್ದಾರ್‌ ಮತ್ತು ಚುನಾವಣಾಧಿಕಾರಿಯೂ ಆದ ಆನಂದಪ್ಪ ನಾಯಕ ತಿಳಿಸಿದ್ದಾರೆ.
 
ಚುನಾವಣೆಯಲ್ಲಿ ಯಾವುದೇ ಅವಘಡಗಳು ಜರುಗದಂತೆ ಸರ್ಕಲ್‌ ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌, ಐದು ಜನ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಮತ್ತು ಪೊಲೀಸ್ ಕಾನ್‌ಸ್ಟೆಬಲ್‌ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಚುನಾವಣೆ ಮತಗಟ್ಟೆಗಳಿಗೆ ನೇಮಕಮಾಡಿದೆ. 100ಕ್ಕೂ ಹೆಚ್ಚು ಮತದಾರರು ಇರುವ ಕಡೆಗಳಲ್ಲಿ ಮೂರು ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಮಲ್ಲಾನಾಯ್ಕ, ಸಹಾಯಕ ಚುನಾವಣಾಧಿಕಾರಿ ಕೆ.ವಿ.ಎಂ. ನಾಗಭೂಷಣ ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT