ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿನೆಲೆಯಲ್ಲಿ ಭಾಷೆ ಬಳಸಿ ಶ್ರೀಮಂತಗೊಳಿಸಿ

ಸಮಾರೋಪ ಸಮಾರಂಭ; ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಮತ
Last Updated 12 ಜನವರಿ 2017, 7:02 IST
ಅಕ್ಷರ ಗಾತ್ರ

ಆರ್.ಗುಂಡೂರಾವ್ ಸಭಾಂಗಣ, ಎದುರ್ಕುಳ ಶಂಕರನಾರಾಯಣ ಭಟ್ ಪ್ರಧಾನ ವೇದಿಕೆ, ಕುಶಾಲನಗರ: ಕನ್ನಡ ಭಾಷೆಯನ್ನು ವ್ಯಕ್ತಿ ನೆಲೆಯಲ್ಲಿ ಬಳಸುವ ಮೂಲಕ ಶ್ರೀಮಂತಗೊಳಿಸಬೇಕಾದ ನೈತಿಕ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ಇಲ್ಲಿನ ರೈತ ಸಹಕಾರ ಭವನದ ಆವರಣದಲ್ಲಿ ಬುಧವಾರ ನಡೆದ 11ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
ಪ್ರತಿ ಗ್ರಾಮದಲ್ಲಿ ದೇವಾಲಯಗಳನ್ನು ನಿರ್ಮಿಸುವ ಬದಲು ಗ್ರಂಥಾಲಯಗಳನ್ನು ಸ್ಥಾಪಿಸಬೇಕು. ಇದು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ವಾತಾವರಣ ಸೃಷ್ಟಿಸುತ್ತದೆ. ಮೌಲಿಕ ಸಂಗತಿಯೊಂದಿಗೆ ಹೊಸ ಆವಿಷ್ಕಾರ ಅಳವಡಿಸಿಕೊಳ್ಳುವ ಮೂಲಕ ಕನ್ನಡ ಬೆಳೆಸಬೇಕು ಎಂದು ಸಲಹೆ ನೀಡಿದರು.

ಕನ್ನಡದ ಬೆಳವಣಿಗೆಗೆ ಪೂರಕ ವಾತಾವರಣ ದೇಶ, ಮತ್ತು ವಿದೇಶಗಳಲ್ಲಿ ಇದೆ. ಅದನ್ನು ಸ್ವೀಕಸುವ ಮನೋಭಾವ ಕನ್ನಡಿಗರಲ್ಲಿರಬೇಕು. ಕನ್ನಡದಲ್ಲೇ ಸಹಿ ಹಾಕಿ, ವ್ಯಾಕರಣ ಬದ್ಧವಾಗಿ ಮಾತನಾಡಬೇಕು. ಇಂಥ ಸಮ್ಮೇಳನಗಳಿಗೆ ಪೋಷಕರು ಮಕ್ಕಳನ್ನು ಕರೆತರಬೇಕು ಎಂದು ಸಲಹೆ ನೀಡಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, 1994ರಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಹೊಲಿಕೆ ಮಾಡಿದರೆ 23 ವರ್ಷಗಳ ನಂತರ ಉತ್ತಮ ಸಮ್ಮೇಳನ ನಡೆದಿದೆ ಎಂದರು.

ಸಮ್ಮೇಳನಾಧ್ಯಕ್ಷ ಎಸ್.ಸಿ.ರಾಜಶೇಖರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಹಣಕಾಸು ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ವಿವಿಧ ಸಮಿತಿಗಳ ಮುಖಂಡರಾದ ವಿ.ಪಿ.ಶಶಿಧರ್, ಎಂ.ವಿ.ನಾರಾಯಣ, ಎಪಿಸಿಎಂಎಸ್ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ, ಪ.ಪಂ. ಅಧ್ಯಕ್ಷ ಎಂ.ಎಂ. ಚರಣ್, ಡಾ.ಮೇಕಲ್ ಮೇರಿ ಹಾಗೂ ಕಸಾಪ ಪದಾಧಿಕಾರಿಗಳು  ಉಪಸ್ಥಿತರಿದ್ದರು. ಸಮ್ಮೇಳನಾಧ್ಯಕ್ಷ ರಾಜಶೇಖರ್ ಹಾಗೂ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಅವರನ್ನು ಸನ್ಮಾನಿಸಲಾಯಿತು.
- ರಘು ಹೆಬ್ಬಾಲೆ

ಕಸಾಪದಿಂದ ಸಾಧಕರಿಗೆ ಸನ್ಮಾನ

ಕುಶಾಲನಗರ: ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕಿಗ್ಗಾಲು ಗಿರೀಶ್, ಶಿಲ್ಪಕಲೆಗಾಗಿ ಆನಂದ್ ಕೂಡ್ಲೂರು, ಚಿತ್ರಕಲೆಗಾಗಿ ಉ.ರ.ನಾಗೇಶ್, ಶರಣ ಸಾಹಿತ್ಯ ಸಂಗ್ರಹಕ್ಕಾಗಿ ಸುಲೋಚನಾ ಪ್ರಸನ್ನ, ಸಮಾಜಸೇವೆಗಾಗಿ ಎ.ಪಿ.  ಶಂಕರಪ್ಪ, ಸಂಗೀತ ಕ್ಷೇತ್ರದ ಸಾಧನೆಗಾಗಿ ಜಯಲಕ್ಷ್ಮಿ ರಮೇಶ್, ನಾಟಕ ಕ್ಷೇತ್ರದಲ್ಲಿ ಅಲ್ಲಾರಂಡ ವಿಠಲ್ ನಂಜಪ್ಪ, ವೈದ್ಯಕೀಯ ಸೇವೆಗಾಗಿ ಡಾ. ರವಿಚಂದ್ರ, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ನೀರಜಾಕ್ಷಿ ಅವರನ್ನು ಸನ್ಮಾನಿಸಲಾಯಿತು.

ಯುವ ಪ್ರತಿಭೆ ಹೇರಂಬ ಹೇಮಂತ್ ಸಹೋದರರು, ಕ್ರೀಡಾ ಕ್ಷೇತ್ರದಿಂದ ಗ್ರೀನಿಡ್ಜ್ ಡಿಕುನ್ನ, ಉದ್ಯಮ ಕ್ಷೇತ್ರದ ಸಾಧನೆಗಾಗಿ ಸಾತಪ್ಪನ್, ಮಾಧ್ಯಮ ಕ್ಷೇತ್ರದಿಂದ ಬಿ.ಆರ್.ನಾರಾಯಣ್, ವಾದ್ಯ ಸಂಗೀತ ಸೇವೆಗಾಗಿ ಎಚ್.ಆರ್.ದಾಮೋದರ್, ಕನ್ನಡ ತಂತ್ರಾಂಶ ಕ್ಷೇತ್ರದಿಂದ ಅಶ್ವತ್ಥ್‌ಕುಮಾರ್, ಉನ್ನತ ಶಿಕ್ಷಣ ಕ್ಷೇತ್ರದಿಂದ ನಕುಲ್ ಪರವಾಗಿ ಅವರ ತಂದೆ ಸತೀಶ್, ಬುಡಕಟ್ಟು ಜನಪದ ಕ್ಷೇತ್ರದಿಂದ ಜೆ.ಕೆ.ರಾಮು, ಜಾನಪದ ಸಂಶೋಧನೆ ಕ್ಷೇತ್ರದಿಂದ ನಾಗೇಶ್ ಹೆಬ್ಬಾಲೆ, ಯಕ್ಷಗಾನ ಕ್ಷೇತ್ರದಿಂದ ಲೋಕನಾಥ್ ಅವರನ್ನು ಸನ್ಮಾನಿಸಲಾಯಿತು.

ಗ್ರಾಮೀಣ ಪ್ರತಿಭೆ ಕ್ಷೇತ್ರದಿಂದ ಅಮ್ಜದ್, ಕೃಷಿ ಕ್ಷೇತ್ರದ ಸಾಧನೆಗಾಗಿ ಜರ್ಮಿ ಡಿಸೋಜ, ಪೌರ ಕಾರ್ಮಿಕ ಕ್ಷೇತ್ರದಿಂದ ಎನ್.ಗಣೇಶ್, ಯೋಗ ಶಿಕ್ಷಕ ಕ್ಷೇತ್ರದಿಂದ ಚೆರಿಯಮನೆ ಸಂತೋಷ್ ಅವರನ್ನು ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಗಣ್ಯರು ಸನ್ಮಾನಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT