ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರ; ಕಂಪ್ಯೂಟರ್‌ ಬಳಸಿ

Last Updated 12 ಜನವರಿ 2017, 7:05 IST
ಅಕ್ಷರ ಗಾತ್ರ

ಕುಶಾಲನಗರ: ಶಿಕ್ಷಣ ಕ್ಷೇತ್ರದಲ್ಲಿ ಕಂಪ್ಯೂಟರ್‌ಗಳ ಬಳಕೆ ಅಗತ್ಯವಾಗಿ ಆಗಬೇಕು ಎಂದು ಭಾಗಮಂಡಲದ ಉಪನ್ಯಾಸಕ ಕೆ.ಜೆ.ದಿವಾಕರ್ ಪ್ರತಿಪಾದಿಸಿದರು.
ಸಮ್ಮೇಳನಲ್ಲಿ ಬುಧವಾರ ನಡೆದ ಶೈಕ್ಷಣಿಕಗೋಷ್ಠಿಯಲ್ಲಿ ಕನ್ನಡ ತಂತ್ರಾಂಶದ ಬಳಕೆ– ಸವಾಲುಗಳ ಕುರಿತು ಅವರು ಮಾತನಾಡಿದರು.

ತಂತ್ರಾಂಶ ಸಂಬಂಧಿತ ಪರಿಭಾಷೆಯ ಶಬ್ಧಗಳನ್ನು ಅರ್ಥೈಸಿ ಕೊಳ್ಳಲು ಜನಸಾಮಾನ್ಯರಿಗೆ ಕಷ್ಟ ವಾಗುತ್ತಿದೆ. ತಂತ್ರಾಂಶ ನಿರೂಪಿಸು ವವರ ಕೊರತೆಯೇ ತಂತ್ರಾಂಶಗಳು ಜನಸ್ನೇಹಿ ಆಗದೆ ಇರಲು ಕಾರಣವಾಗುತ್ತಿದೆ ಎಂದರು.

ತಂತ್ರಾಂಶಗಳನ್ನು ರೂಪಿಸು ವವರಿಗೆ ಪ್ರೋತ್ಸಾಹದ ಕೊರತೆ, ಸರ್ಕಾರ ಹಾಗೂ ಇಲಾಖೆಗಳ ಮಧ್ಯೆ ಸಮನ್ವಯ ಇಲ್ಲದೆ ಇರುವುದು ಅಂತರ್ಜಾಲದ ವೇಗದಲ್ಲಿ ಇರುವ ಕೊರತೆಯನ್ನು ಕನ್ನಡ ತಂತ್ರಾಂಶ ಎದುರಿಸುತ್ತಿದೆ ಎಂದು ದಿವಾಕರ್ ಹೇಳಿದರು.

ಕನ್ನಡ ತಂತ್ರಾಂಶಗಳ ಬಳಕೆಯಾಗಬೇಕಾದರೆ ಶಿಕ್ಷಣದಲ್ಲಿ ಕಂಪ್ಯೂಟರ್‌ಗಳ ಬಳಕೆ ಅಗತ್ಯವಾಗಿ ಆಗಬೇಕು. ಕಂಪ್ಯೂಟರ್‌ ಬಗ್ಗೆ ಮಕ್ಕಳಿಗೆ ಕನ್ನಡದಲ್ಲೇ ತಿಳಿಸುವಂತಾಗಬೇಕು ಎಂದರು.

ವಿಜ್ಞಾನ, ಗಣಿತ ಹಾಗೂ ಕನ್ನಡ ಪಠ್ಯ ವಿಷಯಗಳನ್ನು ಕಂಪ್ಯೂಟರ್‌ ಮೂಲಕ ವಿದ್ಯಾರ್ಥಿಗಳಿಗೆ ಕಲಿಸ ಬೇಕು. ಇಂಗ್ಲಿಷ್‌ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷ್‌ಗೆ ಪಠ್ಯವನ್ನು ಅನುವಾದಿಸುವ ತಂತ್ರಾಂಶ ಸೇವೆಯನ್ನು ಗೂಗಲ್ ಪರಿಚಯಿಸಿದೆ. ಆದರೆ ಅನುವಾದ ದಲ್ಲಿ ಸಾಕಷ್ಟು ತಪ್ಪುಗಳು ಆಗುತ್ತಿವೆ ಎಂದು ಹೇಳಿದರು.
ಪಾಲಿಬೆಟ್ಟದ ಉಪನ್ಯಾಸಕ ಶಿವದಾಸ್ ಕೊಡಗಿನಲ್ಲಿರುವ ಮಾತೃಭಾಷೆಯಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು ಕುರಿತು ಮಾತನಾಡಿದರು.

ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕರುಣಾಕರ್, ಗಡಿಜಿಲ್ಲೆ ಕೊಡಗಿನ ಕನ್ನಡ ಶಾಲೆಗಳ ಅಳಿವು ಉಳಿವು ಕುರಿತು ಮಾತನಾಡಿದರು.
ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ಪೂರ್ವಾಧ್ಯಕ್ಷ ಮಾದಂಡ ಎಸ್.ಪೂವಯ್ಯ ವಹಿಸಿದ್ದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರವಿ, ಜಿಲ್ಲಾ ಪ.ಪೂ.ಕಾ. ಉಪನ್ಯಾಸಕರ ಸಂಘದ ಅಧ್ಯಕ್ಷ ಸಿ.ಎನ್.ವಿಶ್ವನಾಥ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಕೆಂಚಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ತಾಲ್ಲೂಕು ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಎಚ್.ಎನ್.ಮಂಜುನಾಥ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಧರ್ಮಪ್ಪ ಉಪಸ್ಥಿತರಿದ್ದರು.

ಎಸ್.ಡಿ.ಪ್ರಶಾಂತ್ ಸ್ವಾಗತಿಸಿ ದರು. ಸಿದ್ದರಾಜು ವಂದಿಸಿದರು. ಹರೀಶ್ ಕಿಗ್ಗಾಲು ನಿರೂಪಿಸಿದರು. ವಿಜಯ ನಿರ್ವಹಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT