ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಎಪಿಎಂಸಿಗೆ ಚುನಾವಣೆ ಇಂದು

490 ಮತಗಟ್ಟೆಗಳ ಸ್ಥಾಪನೆ, 14ರಂದು ಮತ ಎಣಿಕೆ ಕಾರ್ಯ, 1,488 ಸಿಬ್ಬಂದಿ ನಿಯೋಜನೆ
Last Updated 12 ಜನವರಿ 2017, 7:30 IST
ಅಕ್ಷರ ಗಾತ್ರ
ಬಾಗಲಕೋಟೆ: ಬಾದಾಮಿ ತಾಲ್ಲೂಕು ಹೊರತಾಗಿ ಜಿಲ್ಲೆಯ ಐದು ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಬುಧವಾರ ಚುನಾವಣೆ ನಡೆಯಲಿದೆ.
 
4,13,567 ಕೃಷಿಕ ಮತದಾರರು ಹಾಗೂ 1127 ವರ್ತಕರು ಮತದಾನ ಮಾಡಲಿದ್ದಾರೆ. ಕೃಷಿಕರ ವಿಭಾಗದಲ್ಲಿ 3,01,707 ಮಂದಿ ಪುರುಷ ಮತದಾರರು ಹಾಗೂ 1,11,860 ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ. ವರ್ತಕರ ವಿಭಾಗದಲ್ಲಿ 1,127 ಮಂದಿ ಪುರುಷರು ಇದ್ದರೆ, ಮತ ಚಲಾಯಿಸುವ ಮಹಿಳೆಯ ಪ್ರಾತಿನಿಧ್ಯ ಕೇವಲ 78 ಇದೆ. 
 
ಐದು ಎಪಿಎಂಸಿಗಳ ವ್ಯಾಪ್ತಿಯಲ್ಲಿ 55 ಕೃಷಿಕರ ಕ್ಷೇತ್ರಗಳಿಗೆ ತಲಾ ಒಂದು ವರ್ತಕರ ಹಾಗೂ ಟಿಎಪಿಎಂಎಸ್‌ ಕ್ಷೇತ್ರಗಳಿಗೆ ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಅವಿರೋಧವಾಗಿ ಆಯ್ಕೆಯಾದ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳಿಗೆ ಮತದಾನ ನಡೆಯಲಿದೆ.
 
ಬನಶಂಕರಿ ಜಾತ್ರೆ ಹಿನ್ನೆಲೆಯಲ್ಲಿ ಬಾದಾಮಿ ತಾಲ್ಲೂಕಿನಲ್ಲಿ ಬುಧವಾರವೇ ಮತದಾನ ಕಾರ್ಯ ಮುಕ್ತಾಯವಾಗಿದೆ. ಇದೇ 14ರಂದು ಶನಿವಾರ ಮತ ಎಣಿಕೆ ಕಾರ್ಯ ನಡೆಯಲಿದೆ.
 
ಸಿಬ್ಬಂದಿ ನಿಯೋಜನೆ: ಚುನಾವಣೆ ಕರ್ತವ್ಯಕ್ಕೆ ಅಧಿಕಾರಿಗಳು ಒಟ್ಟು 1,488 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಮತದಾನಕ್ಕೆ 490 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣೆ ಕಾರ್ಯಕ್ಕೆ 41 ಬಸ್, 20 ಕ್ರೂಸರ್ ಹಾಗೂ 20 ಜೀಪುಗಳನ್ನು ಒಳಗೊಂಡು ಒಟ್ಟು 81 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
 
ಅವಿರೋಧ ಆಯ್ಕೆ: ಜಿಲ್ಲೆಯಲ್ಲಿ ಈಗಾಗಲೇ ಹುನಗುಂದ ತಾಲ್ಲೂಕಿನ ಇಳಕಲ್, ಜಮಖಂಡಿ ತಾಲ್ಲೂಕಿನ ಜಮಖಂಡಿ, ಮುಧೋಳ ತಾಲ್ಲೂಕಿನ ಮಂಟೂರ ಹಾಗೂ ಚಿಚಖಂಡಿ ಬಿ.ಕೆ.ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿದೆ.
 
ಅಲ್ಲಿನ ಮಹಾಲಿಂಗಪುರ ಟಿಎಪಿಎಂಎಸ್ ಕ್ಷೇತ್ರದ ಚುನಾವಣೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಇರುವುದರಿಂದ ಅಲ್ಲಿ ಚುನಾವಣೆ ನಡೆಯುತ್ತಿಲ್ಲ ಎಂದು ತಿಳಿದುಬಂದಿದೆ.
 
ಮತ ಎಣಿಕೆ: ಇದೇ 14ರಂದು ಬಾಗಲಕೋಟೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಬಾದಾಮಿಯ ವೀರಪುಲಿಕೇಶಿ ವಿದ್ಯಾಸಮಿತಿ, ಹುನಗುಂದದ ವಿಜಯ ಮಹಾಂತೇಶ ಪ್ರೌಢಶಾಲೆ, ಜಮಖಂಡಿಯ ಸರ್ಕಾರಿ ಪದವಿಪೂರ್ವ ಕಾಲೇಜು, ಮುಧೋಳದ ಆರ್.ಎಂ.ಜಿ ಕಾಲೇಜು, ಬೀಳಗಿಯ ಸಿದ್ದೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
 
**
ಬಾದಾಮಿ: ಶೇ 25.7 ಮತದಾನ
ಬಾದಾಮಿ: ತಾಲ್ಲೂಕಿನ ಎಪಿಎಂಸಿ ಚುನಾವಣೆ ಮತದಾನವು ಆರಂಭದಲ್ಲಿ ಮಂದಗತಿಯಲ್ಲಿ ಸಾಗಿತ್ತು. ಇದನ್ನು ಅರಿತ  ಅಭ್ಯರ್ಥಿಗಳ ಬೆಂಬಲಿಗರು ಮನೆ ಮನೆಗೆ ಹೋಗಿ ಮತದಾರರನ್ನು ಕರೆದುಕೊಂಡು ಬಂದು ಮತ ಹಾಕಿಸಿದರು. ಒಟ್ಟಾರೆ ಶೇ 25.7ರಷ್ಟು ಮತದಾನವಾಗಿದೆ. 
 
11 ಗಂಟೆ ನಂತರ ಮತದಾನ ನಿಧಾನವಾಗಿ ಚುರುಕುಗೊಂಡರೂ  ಹೊತ್ತು ಏರಿದಂತೆ ಮತ್ತೆ ನಿಧಾನವಾಯಿತು. ಒಟ್ಟಾರೆ ಎಪಿಎಂಸಿ ಚುನಾವಣೆ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. 
 
ಇಲ್ಲಿನ ಶಾಸಕರ ಮಾದರಿ ಶಾಲೆ ಮತಗಟ್ಟೆ 64/ರಲ್ಲಿ  ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮತ ಚಲಾಯಿಸಿದರು. 
 
 ಮತದಾರರ ಪಟ್ಟಿಯಲ್ಲಿ ರೈತರ ಹೊಲಗಳ ಕೆಲವು ಸಮೀಕ್ಷೆ ಪ್ರಕಟವಾಗಲಿಲ್ಲ.  ಕೆಲ ಮತದಾರರು ಮತದಾನ ಮಾಡದೇ ಜನರು ನಿರಾಸೆಗೊಂಡರು. ಮತದಾನವು ಶಾಂತಿಯುತವಾಗಿ ನಡೆಯಿತು.
 
**
ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಎಲ್ಲಿಯೂ ಗುರುತಿಸಿಲ್ಲ. ಸ್ಥಳೀಯ ಅಗತ್ಯತೆ ಮೇಲೆ ಆಯಾ ತಾಲ್ಲೂಕಿನ ತಹಶೀಲ್ದಾರ್‌ಗಳು ಕ್ರಮ ಕೈಗೊಂಡು ಹೆಚ್ಚುವರಿ ಪೊಲೀಸ್ ಪಡೆ ಬಳಸಿಕೊಳ್ಳಲಿದ್ದಾರೆ
-ಪಿ.ಎ.ಮೇಘಣ್ಣವರ
ಜಿಲ್ಲಾಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT