ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಜೀವನ ರೂಢಿಸಿಕೊಳ್ಳಲು ಸಲಹೆ

ಸ್ವಸ್ಥ ಸಮಾಜ ಅಭಿಯಾನಕ್ಕೆ ಚಾಲನೆ
Last Updated 12 ಜನವರಿ 2017, 7:34 IST
ಅಕ್ಷರ ಗಾತ್ರ
ಕುಮಟಾ: ‘ಸದಾ ಬದುಕಿನ ನೆಮ್ಮದಿಗೋಸ್ಕರ ಹೋರಾಟ ನಡೆಸುವ ನಾವೆಲ್ಲ ನಮ್ಮ ಪೂರ್ವಜರು ಹಾಕಿಕೊಟ್ಟ  ಜೀವನ ಪರಂಪರೆ, ಬಾಹ್ಯ ಹಾಗೂ ಆಂತರಿಕ ನೈರ್ಮಲ್ಯ ಸಾಧನೆ ಮೂಲಕ  ನಿಶ್ಚಿತ ಗುರಿ ಸಾಧಿಸಲು ಸಾಧ್ಯ’ ಎಂದು  ಭಾರತೀಯ ಕುಟುಂಬ ಪ್ರಬೋಧನಾ ಮುಖ್ಯಸ್ಥ  ಸು. ರಾಮಣ್ಣ ಹೇಳಿದರು.
 
ಬಿ.ಜೆ.ಪಿ ಜಿಲ್ಲಾ ಪ್ರಕೋಷ್ಠದ ವತಿಯಿಂದ ತಾಲ್ಲೂಕಿನ ಮೂರೂರಿನಲ್ಲಿ ಗ್ರಾಮೋತ್ಥಾನ ಸೇವಾ ಕೇಂದ್ರ, ದಿ. ಜಿ. ಎನ್‌. ಹೆಗಡೆ ಟ್ರಸ್ಟ್ ಸಹಯೋಗ­ದೊಂದಿಗೆ ನಡೆದ ಸ್ವಸ್ಥ ಸಮಾಜ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
 
‘ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಸ್ಥ ಸಮಾಜ ನಿರ್ಮಾಣದ ಉದ್ದೇಶದಿಂದ ಬಿ.ಜೆ.ಪಿ ಜಿಲ್ಲಾ ಪ್ರಕೋಷ್ಠ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.­ಜಿಲ್ಲೆಯಾದ್ಯಂತ ಕನಿಷ್ಠ 25 ಶಿಬಿರಗಳನ್ನು ಹಮ್ಮಿಕೊಳ್ಳುವುದು ಪಕ್ಷದ ಉದ್ದೇಶ­ವಾಗಿದೆ’ ಎಂದು ಬಿ.ಜೆ.ಪಿ ಜಿಲ್ಲಾ ವೈದ್ಯ­ಕೀಯ ಪ್ರಕೋಷ್ಠ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ಹೇಳಿದರು.  ಕಾರ್ಯಕ್ರಮದಲ್ಲಿ ಮೂರೂರು ಗ್ರಾಮೋತ್ಥಾನ ಕೇಂದ್ರ ವ್ಯಸ್ಥಾಪಕ ದಿನಕರ ಜಾದವ, ಉಪಾಧ್ಯಕ್ಷ ಎಸ್‌.ವಿ. ಭಟ್ಟ, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಕುಮಾರ ಮಾರ್ಕಾಂಡೆ,  ಯೋಗ ಶಿಕ್ಷಕಿ ಜಯಲಕ್ಷ್ಮೀ ನಾಯರ್, ಮಹಾಲಕ್ಷ್ಮಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. 
 
**
‘ಜೀವನ ಪದ್ಧತಿ ಸುಧಾರಿಸುವ ಯೋಗ, ಪ್ರಾಣಾಯಾಮ, ಭಜನೆ, ಸರಳ ಮಂತ್ರಗಳನ್ನು ನಿತ್ಯವೂ ರೂಢಿಸಿಕೊಂಡರೆ ಆದರ್ಶ ಜೀವನ ನಡೆಬಹುದು 
ಸು.ರಾಮಣ್ಣ
ಕುಟುಂಬ ಪ್ರಬೋಧನಾ ಸಂಸ್ಥೆ ಮುಖ್ಯಸ್ಥ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT