ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

ಎಪಿಎಂಸಿ ಚುನಾವಣೆ ಇಂದು; ಜಿಲ್ಲೆಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌; ಮತಗಟ್ಟೆಗಳತ್ತ ಸಿಬ್ಬಂದಿ ಪಯಣ
Last Updated 12 ಜನವರಿ 2017, 8:38 IST
ಅಕ್ಷರ ಗಾತ್ರ
ಬೈಲಹೊಂಗಲ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜ.12 ರಂದು ನಡೆಯಲಿರುವ ಚುನಾವಣೆಗೆ ಶಾಂತಿಯುತವಾಗಿ ಮತದಾನ ನಡೆಯಲು ತಾಲ್ಲೂಕು ಆಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಲ್ಲಿಯೂ ಅಕ್ರಮ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
 
ಹೊಸೂರ ರಸ್ತೆಯ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಬುಧವಾರ ಚುನಾವಣೆ ಸಿಬ್ಬಂದಿಗೆ ಮತದಾನ ಪ್ರಕ್ರಿಯೆ ನಡೆಸುವ ಬಗ್ಗೆ ಮಾರ್ಗದರ್ಶನ ನೀಡಿ ಅವರು ಮಾತನಾಡಿದರು. 
 
ಕೃಷಿ ಉತ್ಪನ್ನ ಮಾರುಕಟ್ಟೆಗೆ 11 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, 146 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 39 ಸೂಕ್ಷ್ಮ, 11 ಅತೀ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. 644 ಸಿಬ್ಬಂದಿ ಚುನಾವಣೆ ಕರ್ತವ್ಯನಿರ್ವಹಿಸಲಿದ್ದಾರೆ. ಸಿಬ್ಬಂದಿ ಕರೆದೊಯ್ಯಲು 18 ಬಸ್‌, 1 ಜೀಪ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 87,417ಮತದಾರರಿದ್ದು ಅದರಲ್ಲಿ 75,024 ಪುರುಷರು, 12,393 ಮಹಿಳೆ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 
 
ಮತದಾನ ನಡೆಯುವ 100 ಮೀ. ಸುತ್ತಮುತ್ತ 144 ಕಲಂ ಜಾರಿಯಲ್ಲಿದೆ. ಅರ್ಹ ಮತದಾರರು ಮತದಾರರ ಗುರುತಿನ ಚೀಟಿ ಅಥವಾ ಇತರೇ 22 ಭಾವ ಚಿತ್ರವಿರುವ ಗುರುತಿನ ಪ್ರಮಾಣ ಪತ್ರಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ. 1 ಸಿಪಿಐ, 3 ಪಿಎಸ್‍ಐ, 77 ಪೊಲೀಸ್, ಗ್ರಹರಕ್ಷಕದಳ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು. ತಹಶೀಲ್ದಾರ್ ಪ್ರಕಾಶ ಗಾಯಕವಾಡ, ಶಿರಸ್ತೇದಾರ್ ಜೆ.ಸಿ.ಅಷ್ಟಗಿಮಠ, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.
 
500 ಸಿಬ್ಬಂದಿ ನಿಯುಕ್ತಿ
ಹುಕ್ಕೇರಿ: ತಾಲ್ಲೂಕಿನ ಸಂಕೇಶ್ವರದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ ಜರುಗುವ 100 ಮತಗಟ್ಟೆ ಅಧಿಕಾರಿಗಳು ತಮ್ಮ ಮತಪೆಟ್ಟಿಗೆ ಮತ್ತು ಚುನಾವಣೆ ಸಾಮಗ್ರಿ ಜೊತೆ ತಮಗೆ ನೇಮಕಾತಿ ಮಾಡಿದ ಮತಗಟ್ಟೆಗಳಿಗೆ ಬುಧವಾರ ತೆರಳಿದರು.
 
ಒಂದು ಮತಗಟ್ಟೆಗೆ ನಾಲ್ಕು ಮತಗಟ್ಟೆ ಅಧಿಕಾರಿಗಳು, ಒಬ್ಬ ಪೊಲೀಸ್ ಸೇರಿದಂತೆ 8 ಕ್ಷೇತ್ರಗಳಿಗೆ ಒಟ್ಟು ಸುಮಾರು 500 ಸಿಬ್ಬಂದಿ ನೇಮಿಸಲಾಗಿದೆ. 
ಪ್ರತಿ ಮತಗಟ್ಟೆಯಲ್ಲಿ ಸರಾಸರಿ 800 ಮತದಾರರು ಇರುವಂತೆ ಗಮನಿಸಿ ಸಿಬ್ಬಂದಿ ನೀಡಲಾಗಿದೆ ಎಂದು ಚುನಾವಣಾ ಅಧಿಕಾರಿಯೂ ಆದ ತಹಶೀಲ್ದಾರ್ ಎನ್. ಬಿ.ಪಾಟೀಲ ತಿಳಿಸಿದ್ದಾರೆ.
 
ಮತದಾರರು: 7 ಕೃಷಿಕ ಕ್ಷೇತ್ರಕ್ಕೆ ಮತ್ತು 1 ವರ್ತಕ ಕ್ಷೇತ್ರ ಸೇರಿ ಸುಮಾರು 62,000 ಮತದಾರರು ಗುರುವಾರ ಮತ ಚಲಾಯಿಸಲಿದ್ದಾರೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.
 
ಮತ ಎಣಿಕೆ: ಇದೇ ತಿಂಗಳ 14ರಂದು ಬೆಳಿಗ್ಗೆ 8 ಗಂಟೆಗೆ ಸ್ಥಳೀಯ ಎಸ್.ಕೆ.ಹೈಸ್ಕೂಲಿನಲ್ಲಿ ಮತ ಎಣಿಕೆ ನಡೆಸಲಾಗುವುದು. 8 ಕ್ಷೇತ್ರಕ್ಕೆ 12 ಮತ ಎಣಿಕೆ ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಮತ ಎಣಿಕೆ ಸಿಬ್ಬಂದಿಗೆ ಈಗಾಗಲೆ ತರಬೇತಿ ನೀಡಲಾಗಿದೆ ಎಂದ ತಹಶೀಲ್ದಾರರು ಅಂದು ಮಧ್ಯಾಹ್ನ 2 ಗಂಟೆಯ ಒಳಗೆ  ಫಲಿತಾಂಶ ಪ್ರಕಟಿಸಲಾಗುವುದು ಎಂದರು.
 
10 ಸ್ಥಾನಕ್ಕೆ ಚುನಾವಣೆ
ಖಾನಾಪುರ: ತಾಲ್ಲೂಕಿನ ನಂದಗಡದ ಕೃಷಿ ಉತ್ಪನ್ನ ಮಾರುಕಟ್ಟೆಯ 10 ಕ್ಷೇತ್ರಗಳಿಗೆ ಗುರುವಾರ ನಡೆಯಲಿರುವ ಚುನಾವಣೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ.
 
ಬುಧವಾರ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಪಟ್ಟಣದ ಸರ್ವೋದಯ ಪ್ರೌಢಶಾಲೆಯಿಂದ ಮತಪೆಟ್ಟಿಗೆ ಮತ್ತು ಚುನಾವಣಾ ಸಾಮಗ್ರಿಗಳ ಸಮೇತ ಮತದಾನ ಕೇಂದ್ರಗಳಿಗೆ ತಲುಪಿದ್ದಾರೆ ಎಂದು ಚುನಾವಣಾ ಅಧಿಕಾರಿಯೂ ಆದ ತಹಸೀಲ್ದಾರ್ ಶಿವಾನಂದ ಉಳ್ಳೇಗಡ್ಡಿ ತಿಳಿಸಿದ್ದಾರೆ.
 
ಚುನಾವಣೆಗಾಗಿ ತಾಲ್ಲೂಕಿನ ವಿವಿಧೆಡೆ ಒಟ್ಟು 95 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 66,144 ಮತದಾರರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದು, 10 ಕ್ಷೇತ್ರಗಳಲ್ಲಿ ಒಟ್ಟು 32 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಗೆ 95 ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆ. ಒಟ್ಟು 450 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. 
 
ಒಟ್ಟು 95 ಮತಗಟ್ಟೆಗಳ ಪೈಕಿ 24 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಸೂಕ್ಷ್ಮ ಮತಗಟ್ಟೆಗಳಿಗೆ ತಲಾ 2 ಹಾಗೂ ಉಳಿದ ಮತಗಟ್ಟೆಗಳಲ್ಲಿ ತಲಾ 1 ಪೊಲೀಸ್ ಮತ್ತು ಹೋಂ ಗಾರ್ಡ್ ಸಿಬ್ಬಂದಿ ಸೇರಿದಂತೆ ಒಟ್ಟು 150 ಪೊಲೀಸರನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ನಾಲ್ಕು ಪಿ.ಎಸ್.ಐ, ಒಂದು ಡಿ.ಆರ್ ತುಕಡಿ ಸೇರಿ ಜಿಲ್ಲೆಯ ವಿವಿಧೆಡೆ ಪೊಲೀಸ್ ಸಿಬ್ಬಂದಿ ನಿಯೋಜಿಸಿದೆ ಎಂದರು.
 
***
ಚಿಕ್ಕೋಡಿ: 1285 ಮತಗಟ್ಟೆ
ಚಿಕ್ಕೋಡಿ: ಪ್ರಸಕ್ತ ನಿಪ್ಪಾಣಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮತದಾನದ ಸಾಮಗ್ರಿಗಳೊಂದಿಗೆ ನಿಯೋಜಿತ ಮತಗಟ್ಟೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಬುಧವಾರ ನಿಗದಿತ ಮತಗಟ್ಟೆಗೆ ತೆರಳಿದರು.
 
ಚಿಕ್ಕೋಡಿ ತಾಲ್ಲೂಕಿನಲ್ಲಿ ಒಟ್ಟು 257 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಂದು ಮತಗಟ್ಟೆ ಅಧಿಕಾರಿ ಮತ್ತು 3ರಿಂದ 4 ಸಹಾಯಕ ಮತಗಟ್ಟೆ ಅಧಿಕಾರಿ ಒಳಗೊಂಡಂತೆ ಒಟ್ಟು 1285 ಮತಗಟ್ಟೆ ಮಟ್ಟದ ಸಿಬ್ಬಂದಿ ಹಾಗೂ 150 ಮೀಸಲು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಸಿ.ಎಸ್‌.ಕುಲಕರ್ಣಿ ತಿಳಿಸಿದ್ದಾರೆ. 
 
ತಾಲ್ಲೂಕಿನಲ್ಲಿ 1,81,261 ಪುರುಷರು ಮತ್ತು 18,650 ಮಹಿಳೆಯರು ಸೇರಿದಂತೆ ಒಟ್ಟು 1.99,911 ಮತದಾರರಿದ್ದಾರೆ. 
 
ಮತಗಟ್ಟೆ ಸಿಬ್ಬಂದಿ ಮತ್ತು ಸಾಮಗ್ರಿಗಳ ರವಾನೆ ಸಲುವಾಗಿ ಸಾರಿಗೆ ಸಂಸ್ಥೆಯ 13 ಬಸ್‌ಗಳನ್ನು ಹಾಗೂ 31 ಖಾಸಗಿ ಮಿನಿಬಸ್‌, 12 ಕ್ರೂಸರ್‌ ಮತ್ತು 1 ಜೀಪ್‌ ಬಳಸಲಾಗುತ್ತಿದೆ. 
 
 
**
ತಾಯಂದಿರ ಪರದಾಟ
ಆರೋಗ್ಯ ಸರಿ ಇಲ್ಲದವರು, ಚಿಕ್ಕ ಮಕ್ಕಳ ಹೊಂದಿದ ತಾಯಂದಿರು ಕರ್ತವ್ಯದಿಂದ ಬಿಡುಗಡೆ ಹೊಂದಲು ಹುಕ್ಕೇರಿ ತಾಲ್ಲೂಕು ಕಚೇರಿಯಲ್ಲಿ ಸಾಕಷ್ಟು ಪರಿದಾಡಿದರು.
 
ನೈಜ ಪರಿಸ್ಥಿತಿ ಅವಲೋಕಿಸಿ ಅವಶ್ಯವಿದ್ದ ಸಿಬ್ಬಂದಿಗೆ ಕರ್ತವ್ಯದಿಂದ ಬಿಡುಗಡೆ ಮಾಡಲಾಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT