ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಚುನಾವಣೆ; ವಿವಿಧೆಡೆ ಮತದಾನ ಇಂದು

ಆಯಾ ತಾಲ್ಲೂಕು ಆಡಳಿತಗಳಿಂದ ಸಿದ್ಧತೆ ಪೂರ್ಣ; ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ, ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ
Last Updated 12 ಜನವರಿ 2017, 8:41 IST
ಅಕ್ಷರ ಗಾತ್ರ
ರಾಣೆಬೆನ್ನೂರು: ಸ್ಥಳೀಯ ಎಪಿಎಂಸಿಗೆ ಜ. 12ರಂದು ನಡೆಯಲಿರುವ 12 ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಒಟ್ಟು 34 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ ಆಗಲಿದೆ. ಚುನಾವಣಾ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡು ಮತಪೆಟ್ಟಿಗೆ ಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು. 
 
ತಾಲ್ಲೂಕಿನ 117 ಮತಗಟ್ಟೆಗಳಲ್ಲಿ 29 ಸೂಕ್ಷ್ಮ, 32 ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಒಟ್ಟು 84,114 ಮತ ದಾರರಿದ್ದಾರೆ.  ಒಟ್ಟು 512 ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸೂಕ್ತ ಭದ್ರತಾ ವ್ಯವಸ್ಥೆಯನ್ನೂ ಕೈಗೊಳ್ಳ ಲಾಗಿದೆ ಎಂದು ತಹಶೀಲ್ದಾರ್ ರಾಮ ಮೂರ್ತಿ ತಿಳಿಸಿದರು. 
 
ಮತದಾನವು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ನಡೆಯಲಿದೆ. ಮತದಾನದ ನಂತರ ಮತಪೆಟ್ಟೆಗೆಗಳನ್ನು ತರಲು 11  ಬಸ್, 6 ಮ್ಯಾಕ್ಸಿಕ್ಯಾಬ್‌ ಸೇರಿ ವೀಕ್ಷಣೆ ಗಾಗಿ 2 ಜೀಪ್ ನಿಯೊಜಿಸಲಾಗಿದೆ,
 
ಮತಗಳ ಎಣಿಕೆ ಜ. 14ರಂದು ನಗರದ ಹೊರವಲಯದಲ್ಲಿ ಇರುವ ರೋಟರಿ ಶಾಲೆಯಲ್ಲಿ ಬೆಳಿಗ್ಗೆ 8ರಿಂದ ಆರಂಭವಾಗಲಿದೆ ಎಂದು ಚುನಾವಣಾ ಅಧಿಕಾರಿ ರಾಮಮೂರ್ತಿ ಹಾಗೂ ಸಹಾ ಯಕ ಚುನಾವಣಾ ಅಧಿಕಾರಿ ಶಿವಾನಂದ ಬಾಗಾದಿ ತಿಳಿಸಿದ್ದಾರೆ.
 
ಶಿಗ್ಗಾವಿ: 53 ಮತಗಟ್ಟೆ
ಶಿಗ್ಗಾವಿ: ತಾಲ್ಲೂಕಿನ ಕೃಷಿ ಮಾರುಕಟ್ಟೆ ಸಮಿತಿ(ಎಪಿಎಂಸಿ) ಚುನಾವಣೆ ಜ. 12ರಂದು ನಡೆಯುತ್ತಿದ್ದು, ಚುನಾವಣೆ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿ ತಮಗೆ ನೀಡಿರುವ ಚುನಾವಣೆ ಸಾಮಗ್ರಿ ಗಳ ಜತೆಗೆ ಮತಗಟ್ಟೆಗಳತ್ತ ತೆರಳಿದರು.
 
ತಾಲ್ಲೂಕಿನಲ್ಲಿ ಒಟ್ಟು 53 ಮತಗಟ್ಟೆ ಗಳನ್ನು ತೆರೆಯಲಾಗಿದ್ದು, ಅದರಲ್ಲಿ ಸುಮಾರು 12 ಮತಗಟ್ಟೆಗಳನ್ನು ಸೂಕ್ಷ್ಮ  ಕೇಂದ್ರಗಳೆಂದು, 17 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 
 
ಈ ಬಾರಿ ಸಾರಿಗೆ ಸಂಸ್ಥೆ ಬಸ್‌ಗಳ ಬಳಕೆ ಮಾಡಿಲ್ಲ. ಪ್ರತಿಯೊಂದು ಗ್ರಾಮೀಣ ಪ್ರದೇಶಗಳಿಗೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಎಲ್ಲ ಮಾರ್ಗ ದಲ್ಲಿ ಖಾಸಗಿ ವಾಹನಗಳನ್ನು ಬಳಕೆ ಮಾಡಲಾಗಿದೆ. ಸುಮಾರು 375 ಜನ ಚುನಾವಣಾ ಸಿಬ್ಬಂದಿ ನೇಮಿಸಲಾಗಿದೆ. ಸುಮಾರು 75 ಜನ ಪೊಲೀಸ್‌ರನ್ನು ನೇಮಿಸಲಾಗಿದೆ.
 
ಅದರ ಜತೆಗೆ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌, ಡಿವೈಎಸ್ಪಿ ಸೇರಿ ಉನ್ನತ ಮಟ್ಟದ ಅಧಿ ಕಾರಿಗಳು ಸಹ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
 
ತಾಲ್ಲೂಕಿನ ಒಟ್ಟು 13 ಮತಕ್ಷೇತ್ರ ದಲ್ಲಿ ಒಂದು ಅವಿರೋಧವಾಗಿ ಆಯ್ಕೆ ಯಾಗಿದ್ದು, 12ಮತ ಕ್ಷೇತ್ರದಲ್ಲಿ ಚುನಾ ವಣೆ ನಡೆಯುತ್ತಿದ್ದು, ಸುಮಾರು 44 ಜನ ಕಣದಲ್ಲಿದ್ದಾರೆ ಎಂದು ತಹಶೀಲ್ದಾರ್‌ ಶಿವಾನಂದ ರಾಣೆ ತಿಳಿಸಿದರು.
 
ಬ್ಯಾಡಗಿ: 58 ಮತಗಟ್ಟೆ
ಬ್ಯಾಡಗಿ: ಎಪಿಎಂಸಿಯ 14 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಿಗೆ ಗುರುವಾರ (ಜ.12) ನಡೆಯುವ ಚುನಾವಣೆಗೆಶಾಂತ ರೀತಿಯಲ್ಲಿ ಮತದಾನ ನಡೆಯುವಂತೆ ತಾಲ್ಲೂಕು ಆಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ತಹಶೀಲ್ದಾರ್ ಶಿಶಂಕರ ನಾಯಕ ತಿಳಿಸಿದರು. 
 
ತಾಲ್ಲೂಕಿನಲ್ಲಿ ಒಟ್ಟು 58 ಮತಗಟ್ಟೆ ಸ್ಥಾಪಿಸಿದ್ದು, ಚುನಾವಣಾ ಸಿಬ್ಬಂದಿಯನ್ನು ಕಳುಹಿಸುವ ಪ್ರಕ್ರಿಯೆ ಬುಧವಾರ ಇಲ್ಲಿಯ ತಹಶೀಲ್ದಾರ್ ಕಾರ್ಯಾಲಯ ದಲ್ಲಿ ನಡೆಯಿತು. 
 
ಪ್ರತಿ ಮತಗಟ್ಟೆಗೆ ತಲಾ ನಾಲ್ಕು ಸಿಬ್ಬಂದಿಗಳಂತೆ ಚುನಾವಣಾ ಕಾರ್ಯಕ್ಕೆ ಒಟ್ಟು 256 ಸಿಬ್ಬಂದಿ ಕಾರ್ಯನಿರ್ವಹಿಸ ಲಿದ್ದಾರೆ. 12 ಮಾರ್ಗಗಳನ್ನು ಗುರುತಿಸ ಲಾಗಿದ್ದು, 6 ಬಸ್‌, 2 ಟ್ರ್ಯಾಕ್ಸ್‌, 4 ಜೀಪ್‌ ಬಳಸಿಕೊಳ್ಳಲಾಗುತ್ತಿದೆ. 
 
34,793 ಪುರುಷ, 9,562 ಮಹಿಳೆಯರು ಸೇರಿ ಒಟ್ಟು 44,355 ಮತದಾರರು ಗುರುವಾರ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನ ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. 
 
14 ಸ್ಥಾನಗಳ ಪೈಕಿ ವರ್ತಕರ ಕ್ಷೇತ್ರ, ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘ ಹಾಗೂ ಕೃಷಿ ಉತ್ಪನ್ನ ಮಾರಾಟ ಸಂಸ್ಕರಣ ಘಟಕದಿಂದ ತಲಾ ಒಬ್ಬರು ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆ ಆಗಿದ್ದು, ಇನ್ನುಳಿದ 11 ಪ್ರತಿನಿಧಿಗಳನ್ನು ಗುರುವಾರ ನಡೆಯುವ ಚುನಾವಣೆಯಲ್ಲಿ ಆಯ್ಕೆ ಮಾಡಲಾಗುವುದು. 
 
ಅತೀ ಹೆಚ್ಚು ಮತದಾರರು ಕಲ್ಲೆ ದೇವರು ಕ್ಷೇತ್ರದಲ್ಲಿದ್ದು, 3,733 ಪುರುಷ, 1227 ಮಹಿಳೆಯರು ಸೇರಿ ಒಟ್ಟು 4,960 ಮತದಾರರಿದ್ದಾರೆ. ಅತಿ ಕಡಿಮೆ ಮತದಾರರು ಹಿರೇಅಣಜಿ ಕ್ಷೇತ್ರದಲ್ಲಿದ್ದು, 2,300 ಪುರುಷ, 635 ಮಹಿಳೆಯರು ಸೇರಿ ಒಟ್ಟು 2,935 ಮತ ದಾರರು ಇದ್ದಾರೆ ಎಂದು ತಿಳಿಸಿದರು.  
 
ಸವಣೂರು: 35 ಅಭ್ಯರ್ಥಿಗಳು
ಸವಣೂರ: ಗುರುವಾರ  ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ ಅಂಗವಾಗಿ ತಾಲ್ಲೂಕು ಆಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.
 
ತಾಲ್ಲೂಕಿನ 11 ಕ್ಷೇತ್ರಗಳಲ್ಲಿ 35 ಅಭ್ಯರ್ಥಿಗಳ  ಸ್ಪರ್ಧಿಸಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಸಿಬ್ಬಂದಿ ವಿದ್ಯುನ್ಮಾನ ಮತಯಂತ್ರ, ಅಗತ್ಯ ಚುನಾವಣಾ ಉಪಕರಣಗಳೊಂದಿಗೆ ಬುಧವಾರ ಮತಗಟ್ಟೆಗಳತ್ತ ನಡೆದರು.
 
ತಾಲ್ಲೂಕಿನಲ್ಲಿ 6,753 ಮಹಿಳೆ ಯರು, 37,743 ಪುರುಷ ಮತದಾರರು ಇದ್ದಾರೆ. ತಾಲೂಕಿನಲ್ಲಿ ಒಟ್ಟು 66 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ 6 ಅತಿಸೂಕ್ಷ್ಮ, 15 ಸೂಕ್ಷ್ಮ, 45 ಸಾಮಾನ್ಯ ಮತಗಟ್ಟೆಗಳಿವೆ. ಒಟ್ಟು 264 ಮತಗಟ್ಟೆ ಸಿಬ್ಬಂದಿಗಳನ್ನು ಮತ್ತು 5 ಸೆಕ್ಟರ್ ಆಫೀಸರ್‌ಗಳನ್ನು ಹಾಗೂ ಪ್ರತಿ ಮತಗಟ್ಟೆಗೆ  ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚುನಾವಣಾ ಸಿಬ್ಬಂದಿ ಯನ್ನು ಮತಗಟ್ಟೆಗೆ ಕರೆದೊಯ್ಯಲು 6 ಕೆಎಸ್‌ಆರ್‌ಟಿಸಿ  ಬಸ್‌, 1 ಟೆಂಪೋ ಟ್ರ್ಯಾಕ್ಸ್‌ ಮತ್ತು 3 ಜೀಪ್ ವ್ಯವಸ್ಥೆ ಮಾಡ ಲಾಗಿದೆ ಎಂದು ಚುನಾವಣಾಧಿಕಾರಿ, ತಹಶೀಲ್ದಾರ್ ವಿ.ಡಿ.ಸಜ್ಜನ ತಿಳಿಸಿದರು. 
 
***
ಹಿರೇಕೆರೂರ: 105 ಬೂತ್‌ಗಳ ಸ್ಥಾಪನೆ
ಹಿರೇಕೆರೂರ: ‘ತಾಲ್ಲೂಕಿನಲ್ಲಿ ಎಪಿಎಂಸಿ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 105 ಬೂತ್‌ಗಳನ್ನು ನಿರ್ಮಿಸಲಾಗಿದ್ದು, ಪ್ರತಿ ಬೂತ್‌ಗೆ 4 ಸಿಬ್ಬಂದಿ ನಿಯೋಜಿಸಲಾಗಿದೆ. ಶೇ 10ರಷ್ಟು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದು ತಹಶೀಲ್ದಾರ್ ಎ.ವಿ.ಶಿಗ್ಗಾವಿ ತಿಳಿಸಿದರು.
 
ತುರುಸಿನ ಹೋರಾಟ: ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) 12 ಸ್ಥಾನಗಳಿಗೆ 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ತುರುಸಿನ ಹೋರಾಟ ಕಂಡು ಬಂದಿದೆ.
 
ರಟ್ಟೀಹಳ್ಳಿ ಹಾಗೂ ಕುಡುಪಲಿ ಕ್ಷೇತ್ರಗಳಲ್ಲಿ ಮಾತ್ರ ತಲಾ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದು, ಉಳಿದ 10 ಕ್ಷೇತ್ರಗಳಲ್ಲಿ ತಲಾ ಇಬ್ಬರು ಕಣದಲ್ಲಿರುವುದರಿಂದ ನೇರ ಹಣಾಹಣಿ ಇದೆ. ಶಾಸಕ ಯು.ಬಿ.ಬಣಕಾರ ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಮಾಜಿ ಶಾಸಕ ಬಿ.ಸಿ.ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT