ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ಬಾಳಿಕೆ ಬಾರದ ಕಟ್ಟಡ

ಅಕ್ರಮ ಚಟುವಟಿಕೆ ತಾಣವಾದ ವಸತಿ ನಿಲಯ ಕಟ್ಟಡ: ಖಾಸಗಿ ಸ್ಥಳದಲ್ಲಿ ಮಕ್ಕಳ ವಾಸಕ್ಕೆ ₹ 18 ಸಾವಿರ ಬಾಡಿಗೆ
Last Updated 12 ಜನವರಿ 2017, 8:54 IST
ಅಕ್ಷರ ಗಾತ್ರ
ಡಂಬಳ: ವಸತಿ ನಿಲಯ ಕನಿಷ್ಠ ಇಷ್ಟು ವರ್ಷಗಳ ಕಾಲ ಬಾಳಕೆ ಬರಬೇಕು ಎನ್ನುವ ನಿಯಮ ಸೇರಿದಂತೆ ಹಲವು ಷರತ್ತುಗಳ ಆಧಾರದ ಮೇಲೆ ಗುತ್ತಿಗೆದಾ ರರಿಗೆ ಟೆಂಡರ್‌ ನೀಡಲಾಗಿರುತ್ತದೆ. ಆದರೆ ವಸತಿ ನಿಲಯ ಯಾವಾಗ ಪ್ರಾರಂಭವಾಯ್ತು ಯಾವ ಗುತ್ತಿಗೆದಾ ರರಿಗೆ ಟೆಂಡರ್‌ ನೀಡಲಾಗಿತ್ತು ಎನ್ನುವ ಮಾಹಿತಿಯು ಅಧಿಕಾರಿಗಳಿಗಿಲ್ಲ. 
 
ಗುತ್ತಿಗೆದಾರರ ಕಳಪೆ ಕಾಮಗಾರಿ ಯಿಂದ ವಸತಿ ನಿಲಯದಲ್ಲಿ ವಿದ್ಯಾರ್ಥಿ ಗಳು ಕೇವಲ 6 ವರ್ಷಗಳ ಕಾಲ  ವಿದ್ಯಾಭ್ಯಾಸ ಮಾಡಲು ಅವಕಾಶವಾಗಿದ್ದು, ಸರ್ಕಾರದ ಲಕ್ಷಾಂತರ ರೂಪಾಯಿ ಹಣಕ್ಕೆ ಯಾರು ಹೊಣೆ  ಹಾಗೂ ಈಗಾಗಲೆ ಕಟ್ಟಡ ಶಿಥಿಲಾವಸ್ಥೆಯಲ್ಲಿರು ವುದರಿಂದ ಕಳೆದ ನಾಲ್ಕು ವರ್ಷಗಳಿಂದ  ಬಾಡಿಗೆ ಕಟ್ಟಡದಲ್ಲಿ ಕಾಯರ್ನಿವರ್ಹಿಸು ತ್ತಿದ್ದು, ಶಿಥಿಲಗೊಂಡಿರುವ ಕಟ್ಟಡ ಅಕ್ರಮ ಚಟುವಟಿಕೆಯ ತಾಣವಾಗಿದೆ. ಇದು ಡಂಬಳ ಗ್ರಾಮದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ದುಃಸ್ಥಿತಿಯಾಗಿದೆ. 
 
50 ವಿದ್ಯಾರ್ಥಿಗಳಿಗೆ ವಸತಿ ನಿಲಯದ ಪ್ರವೇಶ ಪಡೆಯಲು ಅವಕಾಶವಿದೆ. 
ಆದರೆ ವಿದ್ಯಾರ್ಥಿಗಳ ಕೊರತೆ ಯಿಂದ 33 ವಿದ್ಯಾರ್ಥಿಗಳು  ಮಾತ್ರ ವಸತಿ ನಿಲಯದಲ್ಲಿದ್ದಾರೆ. 2006 ರಿಂದ 2012ರವರೆಗೆ ಮಾತ್ರ ವಿದ್ಯಾರ್ಥಿಗಳು ಇದ್ದರು. 
ಆದರೆ ಕಟ್ಟಡ ತುಂಬಾ ಶಿಥಿಲಾ ವಸ್ಥೆಯಲ್ಲಿರುವುದರಿಂದ ಇಲಾಖೆಯ ಅಧಿಕಾರಿಗಳು 2013ರಿಂದ  ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಮಾಡಿದ್ದ ಪ್ರತಿ ತಿಂಗಳ ಬಾಡಿಗೆ ₹ 18  ಸಾವಿರವಿದೆ.
 
ಅಲ್ಲದೆ ಈ ವಸತಿ ನಿಲಯಕ್ಕೆ ಖಾಯಂ ಮೇಲ್ವಿಚಾರಕರು ಇಲ್ಲದೆ ಇರುವುದರಿಂದ ಡೋಣಿ ಗ್ರಾಮದ ವಸತಿ ನಿಯಲದ ಮೇಲ್ವಿಚಾರಕ ಸಂತೋಷ ಗುಂಜಳದ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ  ವಿದ್ಯೆ ಕಲಿಯುತ್ತಿದ್ದ ಜಾಗದ ಹಳೆಯ ಕಟ್ಟಡ  ನಿತ್ಯ ಕುಡಕರಿಗೆ ಆಶ್ರಯ ತಾಣವಾಗಿದ್ದು, ಅಕ್ರಮ ಚಟುವಟಿಕೆಯ ಸ್ಥಳವಾಗಿ ಪರಿಣಮಿಸಿದೆ.
 
ಸರ್ಕಾರದ ಲಕ್ಷಾಂತರ ಹಣ ಹೋಗಿದೆ. ಕಟ್ಟಡವು ಅಲ್ಪ ಕಾಲ ಮಾತ್ರ ಬಾಳಿಕೆ ಬಂದಿದೆ. ಇದಕ್ಕೆ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಹೊಣೆ ಮಾಡಬೇಕೆ ಅಥವಾ ಇಷ್ಟೆಲ್ಲ ಸಮಸ್ಯೆಯಾದರು ಯಾವುದೇ ಕ್ರಮ ಜರುಗಿಸದ ಅಧಿಕಾರಿಗಳ ಮೇಲೆ ಕ್ರಮ ಜರಗಿಸಬೇಕಾ ಎಂದು ಶಿಕ್ಷಣಪ್ರೇಮಿಗಳ ಪ್ರಶ್ನೆಯಾಗಿದೆ.
 
ಒಟ್ಟಿನಲ್ಲಿ ವಿದ್ಯಾರ್ಥಿಗಳು ಅಕ್ಷರ ಕಲಿಯುವ ವಸತಿ ನಿಲಯದ ಕಟ್ಟಡವೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಾರೆ ಎಂದರೆ ಸಾಮಾನ್ಯ ಕಾಮಗಾರಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹೀಗಾಗಿ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಕಾಮಗಾರಿಯ ಸಮಗ್ರ ತನಿಖೆ ಮಾಡಬೇಕು ಎಂದು ಗ್ರಾಮದ ಈರಣ್ಣ ನಂಜಪ್ಪನವರ ಒತ್ತಾಯಿಸಿದ್ದಾರೆ.  
 
 
***
ಗುತ್ತಿಗೆದಾರರ ಮಾಹಿತಿ ಇಲ್ಲ 
ಕಟ್ಡಡ ಶಿಥಿಲಾವಸ್ಥೆಯಲ್ಲಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸದ್ಯ ಬಾಡಿಗೆ ಕಟ್ಟಡದಲ್ಲಿ ಕಾಯರ್ನಿವರ್ಹಿ ಸುತ್ತಿದೆ ಮೂರು ಜನರಿಗೆ ಟೆಂಡರ್ ನೀಡಲಾಗಿತ್ತು ಎನ್ನುವ ಮಾಹಿತಿಯಿದ್ದು ಗುತ್ತಿಗೆದಾರರ ದಾಖಲೆ ನಮ್ಮಲ್ಲಿ ಇಲ್ಲ ಎನ್ನುತ್ತಾರೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ವರಗಪ್ಪನವರ 
 
*
-ಲಕ್ಷ್ಮಣ ಎಚ್ ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT