ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಂಗವಿಕಲರ ದಿನಾಚರಣೆ

Last Updated 12 ಜನವರಿ 2017, 9:18 IST
ಅಕ್ಷರ ಗಾತ್ರ

ಕಲಬುರ್ಗಿ: ಸರ್ಕಾರಿ ವಿಕಲಚೇತನ ನೌಕರರ ಸಂಘಟನೆ ಯಶಸ್ವಿ ಹೆಜ್ಜೆ ಇಡಲು ಪದಾಧಿಕಾರಿಗಳ ಶ್ರಮದ ಜೊತೆಗೆ ಸದಸ್ಯರೂ ಮನಃಪೂರ್ವಕವಾಗಿ ಸ್ಪಂದಿಸಬೇಕು. ಸದಸ್ಯರು ಕೂಡ ಸಂಘದ ಶಕ್ತಿ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿ ವೆಂಕಟರಮಣಪ್ಪ ಸಲಹೆ ನೀಡಿದರು.

ನಗರದಲ್ಲಿ ಈಚೆಗೆ ರಾಜ್ಯ ಸರ್ಕಾರಿ ವಿಕಲಚೇತನ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಘದ ರಾಜ್ಯ ಘಟಕದ ಖಜಾಂಚಿ ರವೀಂದ್ರನಾಥ ಜಿ.ಹೆಗಡೆ ಮಾತನಾಡಿ, ನಕಲಿ ಅಂಗವಿಕಲರ ಹಾವಳಿಯನ್ನು ತಡೆಗಟ್ಟಬೇಕು. ಅಂಗವಿಕಲರ ಸೌಲಭ್ಯ ಕಸಿದುಕೊಳ್ಳುವವರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದರು.

ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಎಸ್‌.ರೇಣುಕರಾಧ್ಯ ಸಂಘದ ದಿನಚರಿ ಬಿಡುಗಡೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಇಂದ್ರೇಶ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬನಸಿ ಪವಾರ ಮಾತನಾಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪಸಿಂಗ್‌ ಅಧ್ಯಕ್ಷತೆ ವಹಿಸಿದ್ದರು.

ಶಾಂತಪ್ಪ ಸಂಗಾವಿ, ರಾಜು ಶಲವಾದೆ, ಆರ್‌.ಬಿ.ಢವಳೇಶ್ವರ ಚಿಕ್ಕೋಡಿ, ಮಹೇಶ ಅಂಗಡಿ ಬೆಳಗಾವಿ, ಶಿವರಾಜು ಪಾಳೇಗಾರ ಕಾರವಾರ, ಪ್ರಶಾಂತ ಉಬ್ಬಾರಹಟ್ಟಿ ಧಾರವಾಡ, ಶಿವು ವಿಭೂತಿ ಬೆಂಗಳೂರು, ಕೊತ್ವಾಲ್‌ ಯಾದಗಿರಿ, ಸಿಂಧೂತಾಯಿ, ರಾಜೇಶ್ವರಿ ಇದ್ದರು.

ಅಂಧ ಬಾಲಕರಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ನಾದಸ್ವರ ಸಂಗೀತ ಶಾಲೆಯ ಸೂರ್ಯಕಾಂತ ಡುಮ್ಮಾ, ವಿಜಯಲಕ್ಷ್ಮಿ ಗೀತೆ ಹಾಡಿದರು. ಡಾ. ಚಂದ್ರಕಾಂತ ಚಂದಾಪುರ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಧಾಯಗೋಡೆ ಸ್ವಾಗತಿಸಿದರು. ಕೆ.ಗಿರಿಮಲ್ಲ ನಿರೂಪಿಸಿದರು. ಈರಣ್ಣ ಇಂಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT