ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿಯಲಿವೆ ಹೊಸ ಗಸ್ತು ವಾಹನಗಳು!

25 ಅತ್ಯಾಧುನಿಕ ಮಾರುತಿ ಎರ್ಟಿಗಾ ಕಾರು ಸಿದ್ಧ
Last Updated 12 ಜನವರಿ 2017, 10:00 IST
ಅಕ್ಷರ ಗಾತ್ರ
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪೊಲೀಸ್ ಗಸ್ತು ವ್ಯವಸ್ಥೆಗೆ ಗುರುವಾ ರದಿಂದ ಆಧುನಿಕ ಸ್ಪರ್ಶ ದೊರೆಯಲಿದೆ. ಚಲಿಸುವ ಪೊಲೀಸ್ ಹೊರ ಠಾಣೆಗಳ ಮಾದರಿಯಲ್ಲಿ ಸಜ್ಜಾಗಿರುವ 25 ಅತ್ಯಾಧುನಿಕ ವಾಹನಗಳು ಜನರ ಸೇವೆಗೆ ರಸ್ತೆಗೆ ಇಳಿಯಲಿವೆ.
 
ಹಳೆಯ ಪೊಲೀಸ್ ಗಸ್ತು ವಾಹನಗಳನ್ನು ಬದಲಿಸಲು ಮುಂದಾ ಗಿದ್ದ ಗೃಹ ಇಲಾಖೆ ಮೊದಲಿಗೆ ಬೆಂಗ ಳೂರು ನಗರ ಪೊಲೀಸ್ ಕಮಿಷನ ರೇಟ್‌ಗೆ 220 ಅತ್ಯಾಧುನಿಕ ಸಂಪರ್ಕ ಸಾಧನಗಳನ್ನು ಅಳವಡಿಸಲಾದ ಹೊಸ ಮಾರುತಿ ಎರ್ಟಿಗಾ ಕಾರುಗಳನ್ನು ನೀಡಿತ್ತು. ಈಗ ಮಂಗಳೂರು ಪೊಲೀಸ್ ಕಮಿಷನರೇಟ್ ಸರದಿ. ಇಲ್ಲಿಗೆ ಅದೇ ಮಾದರಿಯ 25 ಮಾರುತಿ ಎರ್ಟಿಗಾ ಕಾರುಗಳನ್ನು ನೀಡಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಗುರುವಾರ ಅವುಗಳ ಬಳಕೆಗೆ ಚಾಲನೆ ನೀಡುವರು.
 
ಡಿಸೆಂಬರ್ ತಿಂಗಳಿನಲ್ಲಿ ಪಣಂಬೂರು ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆಗೆ ಬಂದಿದ್ದ ಗೃಹ ಸಚಿವರು, ಬೆಂಗಳೂರಿನ ಮಾದರಿಯ ಗಸ್ತು ವಾಹನಗಳನ್ನು ಮಂಗಳೂರಿಗೂ ಒದಗಿಸುವ ಭರವಸೆ ನೀಡಿದ್ದರು. ಕಳೆದ ವಾರವೇ 25 ಕಾರುಗಳು ಮಂಗಳೂರು ಪೊಲೀಸ್ ಕಚೇರಿಯನ್ನು ತಲುಪಿವೆ. ಅಂದಾಜು ₹ 3 ಕೋಟಿ ವೆಚ್ಚದಲ್ಲಿ ಈ ವಾಹನಗಳನ್ನು ಖರೀದಿಸಲಾಗಿದೆ. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಿಗೂ ತಲಾ ಒಂದು ಹೊಸ ವಾಹನ ವಿತರಿಸ ಲಾಗುತ್ತಿದೆ.
 
ಜಿಪಿಎಸ್‌, ಟ್ಯಾಬ್‌ ಅಳವಡಿಕೆ: ‘ಹೊಸ ದಾಗಿ ಬಂದಿರುವ ಗಸ್ತು ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಈ ವಾಹನ ಗಳಲ್ಲಿ ಅತ್ಯಾಧುನಿಕ ಟ್ಯಾಬ್ಲೆಟ್‌ ಅಳವಡಿ ಸಿದ್ದು, ನೇರವಾಗಿ ನಗರ ಪೊಲೀಸ್ ಕಮಿಷನರೇಟ್‌ನ ನಿಯಂತ್ರಣ ಕೊಠಡಿ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಕಾರು ಗಳು ನಿರಂತರವಾಗಿ ನಗರದೊಳಗೆ ಸಂಚರಿಸುತ್ತಾ ಇರುತ್ತವೆ. ಯಾವುದೇ ಸ್ಥಳದಲ್ಲಿ ಅಪರಾಧ ಪ್ರಕರಣಗಳು, ಅಹಿತಕರ ಘಟನೆಗಳು ನಡೆದರೆ ನಿಯಂತ್ರಣ ಕೊಠಡಿಯಿಂದ ಆ ಸ್ಥಳಕ್ಕೆ ಸಮೀಪದಲ್ಲಿರುವ ವಾಹನವನ್ನು ಗುರುತಿಸಿ ಕಳುಹಿಸಲಾಗುತ್ತದೆ’ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ.ಸಂಜೀವ್ ಎಂ. ಪಾಟೀಲ್ ತಿಳಿಸಿದರು.
 
ಪ್ರತಿ ವಾಹನದಲ್ಲಿ ಇಬ್ಬರಿಂದ ಮೂವರು ಸಿಬ್ಬಂದಿ ನಿಯೋಜಿಸಲಾ ಗುತ್ತದೆ. ಎಂಟು ಗಂಟೆಗೆ ಒಂದು ತಂಡದಂತೆ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಒಂದು ತಂಡಕ್ಕೆ ದಿನದಲ್ಲಿ ಎರಡು ಪಾಳಿ ಕೆಲಸ ಇರುತ್ತದೆ. ನಿಯಂತ್ರಣ ಕೊಠಡಿ ಮೂಲಕ ನೇರ ವಾಗಿ ಈ ವಾಹನ ನಿಯಂತ್ರಿಸುವ ವ್ಯವಸ್ಥೆ ಮಾಡಲಾಗಿದೆ.  ಈ ವಾಹನಗಳ ಸೇರ್ಪಡೆ ಯಿಂದ ನಗರದಲ್ಲಿ ಪೊಲೀಸ್ ಗಸ್ತು ಮತ್ತಷ್ಟು ಚುರುಕಾಗಲಿದೆ ಎಂದರು.
 
ಪಿಸಿಆರ್‌ ಇರಲಿವೆ: ಹೊಸ ಗಸ್ತು ವಾಹನ ಗಳು ದೊರೆತಿರುವ ಕಾರಣಕ್ಕೆ ಹಳೆಯ ಪಿಸಿಆರ್‌ ಗಸ್ತು ವಾಹನಗಳನ್ನು ಸೇವೆ ಯಿಂದ ಹಿಂದಕ್ಕೆ ಪಡೆಯದಿರಲು ಅಧಿ ಕಾರಿಗಳು ನಿರ್ಧರಿಸಿದ್ದಾರೆ. ಆಯಾ ಠಾಣೆ ಪಿಸಿಆರ್‌ಗಳು ನಿಗದಿತ ವ್ಯಾಪ್ತಿಯೊಳಗೆ ಗಸ್ತು ತಿರುಗುತ್ತಿರುತ್ತವೆ. ಅವುಗಳ ಜೊತೆ ಹೊಸ 25 ಕಾರುಗಳು ಸೇರಿಕೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT