ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಘವೇಂದ್ರ ಚಿತ್ರವಾಣಿ’ಯ ವಾರ್ಷಿಕೋತ್ಸವ ಪ್ರಶಸ್ತಿ

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದ ಪ್ರಮುಖ ಪ್ರಚಾರ ಸಂಸ್ಥೆಯಾದ ‘ರಾಘವೇಂದ್ರ ಚಿತ್ರವಾಣಿ’ಯು, ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ 11 ಮಂದಿಗೆ 2015 ಮತ್ತು 2016ನೇ ಸಾಲಿನ ‘ರಾಘವೇಂದ್ರ ಚಿತ್ರವಾಣಿ’, ವಿವಿಧ ಸಂಸ್ಥೆ ಹಾಗೂ ವ್ಯಕ್ತಿಗಳ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಘೋಷಿಸಿದೆ.

ಪ್ರಶಸ್ತಿಗಳ ವಿವರ: 2015ರ ‘ರಾಘವೇಂದ್ರ ಚಿತ್ರವಾಣಿ’ಗೆ ಆಯ್ಕೆಯಾದವರು: ಎಚ್.ಎನ್. ಮಾರುತಿ (ನಿರ್ಮಾಪಕ), ರುಕ್ಕೋಜಿ (ಚಲನಚಿತ್ರ ಪತ್ರಕರ್ತ).
2016: ಸಂದೇಶ್ ನಾಗರಾಜ್ (ನಿರ್ಮಾಪಕ), ಚಿರಂಜೀವಿ (ಚಲನಚಿತ್ರ ಪತ್ರಕರ್ತ)

ಡಾ. ರಾಜ್‌ಕುಮಾರ್ ಪ್ರಶಸ್ತಿ– ಲತಾ ಹಂಸಲೇಖ (ಹಿನ್ನೆಲೆ ಗಾಯಕಿ), ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ– ನಾಗಣ್ಣ (ನಿರ್ದೇಶಕ), ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ– ಆರ್‌.ಟಿ. ರಮಾ (ಕಲಾವಿದೆ),  ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್‍ಟೈನ್‍ಮೆಂಟ್ ಪ್ರೈ.ಲಿ ಪ್ರಶಸ್ತಿ– ಚರಣ್ ರಾಜ್ (ಸಂಗೀತ ನಿರ್ದೇಶಕ), ನಿರ್ಮಾಪಕ ಕೆ.ವಿ. ಜಯರಾಂ ಪ್ರಶಸ್ತಿ– ಹೇಮಂತ್ ರಾವ್ (‘ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿರ್ದೇಶಕ),

ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ– ಸಿದ್ದಗಂಗಯ್ಯ ಕಂಬಾಳು (ರಾಮಾ ರಾಮಾರೇ ಚಿತ್ರದ ಸಂಭಾಷಣೆಗಾಗಿ), ಬಿ. ಸುರೇಶ್ ಪ್ರಶಸ್ತಿ– ರಾಮರಡ್ಡಿ (‘ತಿಥಿ’ ಚಿತ್ರದ ನಿರ್ದೇಶಕ), ಪತ್ರಕರ್ತ ಪಿ.ಜಿ. ಶ್ರೀನಿವಾಸಮೂರ್ತಿ ಸ್ಮರಣಾರ್ಥ ಪ್ರಶಸ್ತಿ– ವಿಜಯಪ್ರಸಾದ್ (‘ನೀರ್ ದೋಸೆ’ ಚಿತ್ರದ ‘ಹೋಗಿ ಬಾ ಬೆಳಕೆ’ ಗೀತ ರಚನೆ), ಕಿಚ್ಚ ಕ್ರಿಯೇಷನ್ಸ್ ಪ್ರಶಸ್ತಿ– ಡಿಂಗ್ರಿ ನಾಗರಾಜ್ (ಹಾಸ್ಯ ಕಲಾವಿದ) ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಂಸ್ಥೆಯ 40ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT