ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿನಾರೆ’ಯ ಋತುಗಳ ಹಾರ!

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

‘ಉಡುಪಿ ಸಮೀಪ ಸಮುದ್ರದ ನೀರಿನಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಆದರೆ ಅದೇ ಸಂದರ್ಭದಲ್ಲಿ ಮಾಸ್ತಿಗುಡಿ ಚಿತ್ರೀಕರಣದಲ್ಲಿ ಸಾಹಸ ಕಲಾವಿದರಾದ ಉದಯ್ ಮತ್ತು ಅನಿಲ್ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ದುರ್ಮರಣಕ್ಕೆ ತುತ್ತಾದರು.

ಹಾಗಾಗಿ ನಮಗೆ ಅನುಮತಿ ಸಿಗಲಿಲ್ಲ’ ಎಂಬ ಮಾತು ‘ಕಿನಾರೆ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕೇಳಿಬಂತು. ‘ಕಿನಾರೆ’ ಚಿತ್ರದ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಹಾಜರಿತ್ತು. ಸಿನಿಮಾ ಆರಂಭವಾಗಿ ಒಂದು ವರ್ಷಕ್ಕೆ ಟ್ರೈಲರ್ ಬಿಡುಗಡೆ ಹಂತಕ್ಕೆ ಬಂದಿದೆ. ಇನ್ನೂ ಶೇ. 30ರಷ್ಟು ಚಿತ್ರೀಕರಣ ಬಾಕಿ ಇದೆ. ‘ಆಯಾ ಋತುಮಾನಕ್ಕೆ ತಕ್ಕಂತೆ ಚಿತ್ರೀಕರಣ ಮಾಡುವ ಅನಿವಾರ್ಯದಿಂದಾಗಿ ಚಿತ್ರೀಕರಣ ವಿಳಂಬವಾಗುತ್ತಿದೆ’ ಎಂದು ಚಿತ್ರತಂಡ ಹೇಳಿಕೊಂಡಿತು.

‘ಈವರೆಗೆ ಚಿತ್ರೀಕರಣ ಮಾಡಿರದ ಕರಾವಳಿ ಪ್ರದೇಶಗಳನ್ನು ಆಯ್ದುಕೊಂಡು ಚಿತ್ರೀಕರಣ ಮಾಡಿದ್ದೇವೆ. ಆ ಪ್ರದೇಶಕ್ಕೆ ಯಾವ ರೀತಿಯ ಪಾತ್ರಗಳು ಇದ್ದರೆ ಚೆನ್ನ ಎಂದು ಕಲ್ಪಿಸಿಕೊಂಡು ಪಾತ್ರಗಳನ್ನು ಸೃಷ್ಟಿಸಿದ್ದೇವೆ’ ಎಂದರು ನಿರ್ದೇಶಕ ದೇವರಾಜ ಪೂಜಾರಿ.

‘ಚಿತ್ರದಲ್ಲಿ ಯಾರ ಪಾತ್ರವೂ ಅವರ ಈ ಹಿಂದಿನ ಪಾತ್ರಕ್ಕೆ ಹೋಲಿಕೆ ಆಗುವುದಿಲ್ಲ. ಅವಕ್ಕೆಲ್ಲ ಕಡಲ ತಡಿಯ ಗುಣವಿರುತ್ತದೆ’ ಎಂದ ಅವರು, ‘ಕಲಾತ್ಮಕತೆ ಮತ್ತು ಮನರಂಜನೆ ಎರಡೂ ಬೆರೆತಿರುವ ಚಿತ್ರ ಕಿನಾರೆ’ ಎಂದರು.

ತೆರೆಯ ಹಿಂದೆ ಕೆಲಸ ಮಾಡಿ ಅನುಭವವಿರುವ ಸತೀಶ್ ರಾಜ್ ಈ ಚಿತ್ರದ ಮೂಲಕ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಗ್ಧ ಹುಡುಗನ ಪಾತ್ರಕ್ಕಾಗಿ ಅವರು ತರಬೇತಿ ಪಡೆದಿದ್ದಾರೆ. ಗೌತಮಿ ಕೂಡ ನಟನೆಗೆ ಹೊಸಬರು. ‘ಸುಂದರವಾದ ಮನಸುಗಳು, ಸುಂದರ ಕಥೆ’ ಎಂದು ಚಿತ್ರದ ಕುರಿತು ಹೇಳಿದ ಅವರು, ತಮ್ಮದು ವಿಶೇಷ ಪಾತ್ರ ಎಂದರು.

ದಿನೇಶ್ ಮಂಗಳೂರು ಖಳನಾಗಿ, ಪ್ರಮೋದ್ ಶೆಟ್ಟಿ ಮೇಷ್ಟ್ರಾಗಿ ಪಾತ್ರ ನಿರ್ವಹಿಸಿದ್ದಾರೆ. ದತ್ತಣ್ಣ, ಸಿಹಿಕಹಿ ಚಂದ್ರು, ಚರಿತ, ಚಿರಂಜೀವಿ ತಾರಾಗಣದಲ್ಲಿದ್ದಾರೆ. ವಿಕ್ರಮ್ ಶ್ರೀಧರ್ ಸಂಕಲನ, ಸುರೇಂದ್ರನಾಥ್ ಸಂಗೀತ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT