ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಖರ್ಚಲ್ಲಿ ಊರಿಗೆ ನೀರು

ಜನರ ಬಳಕೆಗೆ ಮುಕ್ತಗೊಳಿಸಿದ ಬಿ.ಸಿ.ಪಾಟೀಲ್
Last Updated 13 ಜನವರಿ 2017, 6:01 IST
ಅಕ್ಷರ ಗಾತ್ರ
ಹಂಸಭಾವಿ: ಸಮೀಪದ ಅರಳಿಕಟ್ಟಿ ಗ್ರಾಮದ ರೈತ ಪುಟ್ಟಪ್ಪ ಗೊರವರ ಅವರು ತಮ್ಮ ಹೊಲದಲ್ಲಿನ ಕೊಳವೆ ಬಾವಿ ನೀರನ್ನು ಗ್ರಾಮಕ್ಕೆ ಉಚಿತವಾಗಿ ನೀಡಲು ನಿರ್ಧರಿಸಿದ್ದು, ಮಾಜಿ ಶಾಸಕ ಬಿ.ಎಸ್‌. ಪಾಟೀಲ ಅವರು ಗುರುವಾರ ನೀರನ್ನು ಸಾರ್ವಜನಿಕರಿಗೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 
‘ಗ್ರಾಮದಲ್ಲಿ ಬರಗಾಲ ಉಂಟಾಗಿದೆ. ಇದನ್ನು ಮನಗಂಡ ರೈತ ಪುಟ್ಟಪ್ಪ ಗೊರವರ ಅವರು ಸುಮಾರು 50 ಸಾವಿರ ಖರ್ಚು ಮಾಡಿ ಕೊಳವೆ ಬಾವಿ ಕೊರೆಯಿಸಿ, ಪೈಪ್‌ಲೈನ್‌ ಅಳವಡಿಸಿ ಗ್ರಾಮದ ಜನರಿಗೆ ನೀರು ಪೂರೈಸಲು ಮುಂದಾಗಿದ್ದಾರೆ’ ಎಂದು ಪಾಟೀಲ ಪ್ರಶಂಸಿಸಿದರು.
 
ಗ್ರಾಮದ ರೈತರಾದ ಮಾಲತೇಶ ಬಿದರಿ, ಕಾಂತೇಶ ಹದಗಲ, ನಾಗಪ್ಪ ಮುಳಗುಂದ, ಚೌಡಪ್ಪ ಬಿದರಿ, ಕರಬಸಪ್ಪ ಲಿಂಗದೇವರ ಕೊಪ್ಪ, ನಾಗಪ್ಪ ಮುದ್ದೇರ, ಮಂಜು ಬಿದರಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
 
***
ನೀರು ಯಾರ ಸೊತ್ತಲ್ಲ. ಈ ಬಾರಿ ನೀರಿನ ಸಮಸ್ಯೆ ಉಲ್ಬಣಿಸಿದ್ದರಿಂದ ನೀರನ್ನು ಉಚಿತ ಮುಂದಾದೆ. ಸಮಾಜ ಸೇವೆ  ಪುಣ್ಯದ ಕೆಲಸ. ಇದು ನನಗೆ ಖುಷಿ ನೀಡಿದೆ
-ಪುಟ್ಟಪ್ಪ ಗೊರವರ,
ರೈತ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT