ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಂದ್ರಗಡದಲ್ಲಿ ಶೀಘ್ರವೇ ಗೋಶಾಲೆ ಸ್ಥಾಪನೆ: ಭರವಸೆ

Last Updated 13 ಜನವರಿ 2017, 6:02 IST
ಅಕ್ಷರ ಗಾತ್ರ
ಗಜೇಂದ್ರಗಡ: ‘ಸಮೀಪದ ನಾಗೇಂದ್ರ ಗಡದಲ್ಲಿ ಸದ್ಯದಲ್ಲಿಯೇ ಗೋಶಾಲೆ ಆರಂಭಿಸಲು ಕ್ರಮ ತೆಗೆದುಕೊಳ್ಳಲಾ ಗಿದೆ’ ಎಂದು ಉಪ ತಹಶೀಲ್ದಾರ್‌ ವಿ.ಎಂ.ಸಾಲೀಮಠ ಹೇಳಿದರು.
 
ಸ್ಥಳೀಯ ಮೇವು ಬ್ಯಾಂಕಿಗೆ ಗುರು ವಾರ ಭೇಟಿದ ನೀಡಿದ ಅವರು, ರೈತರನ್ನು ಉದ್ದೇಶಿಸಿ ಮಾತನಾಡಿದರು. ‘ಇಲ್ಲಿಯ ಎ.ಪಿ.ಎಂ.ಸಿ ಆವರಣದಲ್ಲಿರುವ ಗೋದಾಮಿನಲ್ಲಿ ಮೇವು ಬ್ಯಾಂಕ್‌ ಆರಂಭಿಸಿದ್ದು, ಇದು ತಾಲ್ಲೂಕಿನ ಪ್ರಥಮ ಮೇವು ಬ್ಯಾಂಕ್‌ ಆಗಿದೆ’ ಎಂದರು.
 
‘ರಾಯಚೂರ ಜಿಲ್ಲೆಯ ಮಾನ್ವಿ ಯಿಂದ  3620 ಕೆ.ಜಿ ಮೇವನ್ನು ಖರೀ ದಿಸಿ ಇಲ್ಲಿನ ಮೇವು ಬ್ಯಾಂಕಿಗೆ ತರಲಾ ಗಿದ್ದು, ಸರ್ಕಾರ 6 ರೂ.ಗೆ ಖರೀದಿಸಿ, ಅದನ್ನು ರೈತರಿಗೆ ರಿಯಾಯಿತಿ ದರದಲ್ಲಿ ಅಂದರೆ 3 ರೂ.ಗೆ ಒಂದು ಕೆ.ಜಿಯಂತೆ ಮಾರಾಟ ಮಾಡುತ್ತಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ಇಲ್ಲದ ಕಾರಣ, ಒಂದು ವಾರದಲ್ಲಿ 350 ಕೆ.ಜಿ ಮಾತ್ರ ಮೇವನ್ನು ರೈತರು ಖರೀದಿಸಿದ್ದಾರೆ. ಒಂದು ಜಾನುವಾರಿಗೆ 5 ಕೆ.ಜಿಯಂತೆ ಒಂದು ವಾರಕ್ಕೆ ಬೇಕಾಗುವ 35 ಕೆ.ಜಿ ಮೇವನ್ನು ರೈತರಿಗೆ ನೀಡಲಾಗುತ್ತದೆ. ಬಹಳಷ್ಟು ಜಾನುವಾರುಗಳನ್ನು ಹೊಂದಿದ ರೈತರು ಪಶುಸಂಗೋಪನಾ ಇಲಾಖೆಯ ವೈದ್ಯಾ ಧಿಕಾರಿಗಳಿಂದ ಪ್ರಮಾಣಪತ್ರ ತರಬೇಕು ಎಂದು ಸಾಲೀಮಠ ಹೇಳಿದರು.
 
‘ರೈತರ ಬೇಡಿಕೆ ಹೆಚ್ಚಾದಂತೆ ಮೇವನ್ನು ತರಿಸಲಾಗುವುದು. ಇದು ಆರಂಭಿಕ ಹಂತ, ಮುಂಬರುವ ಬೇಸಿಗೆ ಯನ್ನು ಗಮನದಲ್ಲಿಟ್ಟುಕೊಂಡು ಜಾನು ವಾರುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನಾಗೇಂದ್ರಗಡದಲ್ಲಿ ಒಂದು ವಾರದಲ್ಲಿ ಗೋಶಾಲೆ ಆರಂಭಿ ಸಲಾಗುವುದು’ ಎಂದರು.
 
‘ಇಲ್ಲಿ ಸ್ಥಾಪಿಸಿರುವ ಮೇವು ಬ್ಯಾಂಕಿನಿಂದ ತಾಲ್ಲೂಕಿನ ಯಾವ ಭಾಗದ ರೈತರೂ ಮೇವನ್ನು ಖರೀದಿಸ ಬಹುದು. ಇಲ್ಲಿ ಗೋದಾಮು ವವ್ಯಸ್ಥೆ ಇರುವುದರಿಂದ ಅದನ್ನು ಇಲ್ಲಿ ಸ್ಥಾಪಿಸ ಲಾಗಿದೆ. ಅವಶ್ಯಕತೆ ಇದ್ದರೆ ಮತ್ತೊಂಡು ಕಡೆ ಮೇವು ಬ್ಯಾಂಕನ್ನು ಸ್ಥಾಪಿಸಲಾಗು ವುದು’ ಎಂದು ಕಂದಾಯ ಇಲಾಖೆಯ ನಿರೀಕ್ಷಕ ವೀರಣ್ಣ ಅಡಗತ್ತಿ ಹೇಳಿದರು.
 
‘ಮೇವನ್ನು ಸರಿಯಾಗಿ ಗೋದಾಮಿ ನಲ್ಲಿ ಸಂಗ್ರಹಿಸುವಂತೆ ಅವರು ಗ್ರಾಮ ಲೆಕ್ಕಾಧಿಕಾರಿ ನಿಶಾನದಾರ ಅವರಿಗೆ ಸೂಚನೆ ನೀಡಿದರು.
 
‘ಮೇವಿನಲ್ಲಿ ಹೊಟ್ಟು ಅಲ್ಪ ಪ್ರಮಾಣ ದಲ್ಲಿದೆ, ಆದರೆ ಮೇವು ಇಲ್ಲ. ಹೀಗಾಗಿ ಉಳಿದ ದನಗಳನ್ನು ಮಾರಿ ಈಗ ಕೇವಲ 4 ದನಗಳನ್ನು ಮಾತ್ರ ಇಟ್ಟುಕೊಂಡಿ ದ್ದೇನೆ’ ಎಂದು ಮೇವು ಖರೀದಿಸಲು ಬಂದಿದ್ದ ನಿಡಗುಂದಿ ಗ್ರಾಮದ ರೈತ ದೇವಪ್ಪ ಅಣ್ಣಿಗೇರಿ ಹೇಳಿದರು.
 
’ಮೇವನ್ನು ಕತ್ತರಿಸಿ ಸಣ್ಣ ತುಂಡು ಗಳನ್ನಾಗಿ ಮಾಡಿದರೆ 5–6 ಕೆ.ಜಿ ಮೇವನ್ನು ಬೈಕ್ ಮೇಲೆ ಒಯ್ಯಲು ರೈತರಿಗೆ  ಅನುಕೂಲವಾಗುತ್ತದೆ ’ ಎಂದು ರೈತರಾದ ರಮೇಶ ಸೊಬಗಿನ ಮತ್ತು ಬಸವರಾಜ ಉಳ್ಳಾಗಡ್ಡಿ ಅವರು ಉಪ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT