ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಗಡೀಪಾರು ನಿರ್ಧಾರಕ್ಕೆ ತಕ್ಕ ಪಾಠ

548ನೇ ದಿನಕ್ಕೆ ಕಾಲಿಟ್ಟ ಮಹಾದಾಯಿ ಧರಣಿ: 19ರಂದು ಬೆಂಗಳೂರಿನಲ್ಲಿ ರೈತ ಮಹಾ ಸಮಾವೇಶ
Last Updated 13 ಜನವರಿ 2017, 6:03 IST
ಅಕ್ಷರ ಗಾತ್ರ
ನರಗುಂದ: ರೈತರು ಪ್ರತಿಯೊಂದು ಬೇಡಿಕೆಗೂ ಕೈಒಡ್ಡಿ ನಿಲ್ಲಬೇಕಾದ ದುಸ್ಥಿತಿ ಕರ್ನಾಟಕದಲ್ಲಿದೆ. ರೈತಪರ ಹೋರಾಟ ಗಳಿಗೆ ರಾಜ್ಯದಲ್ಲಿ ಬೆಂಬಲ ಸಿಗುತ್ತಿಲ್ಲ. ಜನ ಪ್ರತಿನಿಧಿಗಳಿಗೆ ಮಹಾದಾಯಿ ಯೋಜನೆ ಜಾರಿಯಾಗುವುದು ಬೇಕಿಲ್ಲ. ಅಲ್ಲದೆ, ಮಹಾದಾಯಿ ಹೋರಾಟಗಾರ ರನ್ನು ಗಡೀಪಾರು ಮಾಡುತ್ತಿರುವ ಸರ್ಕಾ ರಕ್ಕೆ ತಕ್ಕ ಪಾಠ ಕಲಿಸಲು ಎಲ್ಲ ರೈತರು ಮುಂದಾಗಬೇಕು ಎಂದು ಉತ್ತರ ಕರ್ನಾಟಕ ರೈತ ಸಂಘದ ಸಂಚಾಲಕ ಹೊಸಪೇಟೆಯ ವಿಜಯಾನಂದ ಸ್ವಾಮಿ ಸಲಹೆ ನೀಡಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 548ನೇ ದಿನ ಗುರು ವಾರ ಅವರು ಮಾತನಾಡಿದರು.
 
ರೈತರು ಸಮಸ್ಯೆಗಳ ಹಾಗೂ ಪರಿ ಹಾರಗಳ ಕುರಿತು ಚಿಂತನ– ಮಂಥನ ನಡೆಸಲಾಗುತ್ತಿದೆ. ಈ ಕುರಿತು ಬೆಂಗ ಳೂರಿನಲ್ಲಿ ಜ. 19ರಂದು ಉತ್ತರ ಕರ್ನಾ ಟಕ ರೈತರ ಸಮಾವೇಶ ನಡೆಸಲಾಗು ವುದು. ಇದರಲ್ಲಿ ಲಕ್ಷಕ್ಕೂ ಹೆಚ್ಚು  ರೈತರು ಸೇರುವ ನೀರಿಕ್ಷೆ ಇದೆ ಎಂದರು.
 
ನೀರಾವರಿ ಯೋಜನೆ ಸೇರಿದಂತೆ ರೈತರ ಕನಿಷ್ಠ ಬೇಡಿಕೆಗಳಿಗೆ ಶಾಸಕರು, ಸಂಸದರು ಬೆಲೆ ಕೊಡುತ್ತಿಲ್ಲ. ಇದರಿಂದ 500 ದಿನಗಳ ಹೋರಾಟಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದನ್ನು ನಾವು ಸಹಿಸು ವುದಿಲ್ಲ. ಇದರ ಬಗ್ಗೆ ಎಲ್ಲ ರೈತರ ಸಂಘ ಟನೆಗಳು ಒಂದಾಗದಿದ್ದರೆ ಸರ್ಕಾರಗಳು ಹಳೆ ವರಸೆ ಮುಂದುವರಿಸುತ್ತವೆ. ಇದನ್ನು ತಡೆಯಲು ಎಲ್ಲರೂ ಒಂದಾಗಿ ಹೋರಾಡಬೇಕು ಎಂದರು.
 
ಮಹಾದಾಯಿ ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ ಮಾತ ನಾಡಿ, ರೈತರ ಸಾಲ ಮನ್ನಾ ಮಾಡುವ ಮೂಲಕ ಸರ್ಕಾರಗಳು ರೈತರ ನೆರವಿಗೆ ಬರಬೇಕು. ಆಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದರು.
 
ಜಗನ್ನಾಥ ಮುಧೋಳೆ, ಜಗದೀಶ ಬೆಳವಟಗಿ, ವೆಂಕಪ್ಪ ಹುಜ ರತ್ತಿ, ಹನಮಂತ  ಸರನಾಯ್ಕರ, ಪುಂಡ ಲೀಕ ಯಾದವ, ಎಸ್.ಬಿ.ಜೋಗಣ್ಣವರ, ವಾಸು ಚವ್ಹಾಣ, ಚನ್ನಬಸು ಹುಲ ಜೋಗಿ, ಸೋಮಲಿಂಗಪ್ಪ ಆಯಟ್ಟಿ, ವೀರಣ್ಣ ಸೊಪ್ಪಿನ, ಅರ್ಜುನ ಮಾನೆ, ವೀರಬಸಪ್ಪ ಹೂಗಾರ ಇದ್ದರು.
 
***
ಲಜ್ಜೆಗೇಡಿ ಜನಪ್ರತಿನಿಧಿಗಳು
ಗದಗ: ಮಹಾದಾಯಿ ವಿವಾದ ಇತ್ಯರ್ಥಪಡಿಸಲು ಪ್ರಧಾನಿ ಮೋದಿ ಮನಸ್ಸು ಮಾಡಬೇಕು. ಆದರೆ, ಯಾಕೋ ಅವರು ಮನಸ್ಸು ಮಾಡುತ್ತಿಲ್ಲ ಎಂದು ಗದುಗಿನ ತೋಟದಾರ್ಯ ಮಠದ ಸಿದ್ಧಲಿಂಗ ಶ್ರೀ ಹೇಳಿದರು.
 
ನಗರದ ಆಂಗ್ಲೊ ಉರ್ದು ಶಾಲೆ ಮೈದಾನದಲ್ಲಿ ಗುರುವಾರ ನಡೆದ ಕೆಎಸ್‌ಎಸ್‌ ಸುವರ್ಣ ಮಹೋತ್ಸವ ಸಮಾರಂಭಲ್ಲಿ ಅವರು ಮಾತನಾಡಿದರು.
 
ನರಗುಂದದಲ್ಲಿ ರೈತರು ಮಹಾದಾಯಿಗಾಗಿ ಆಗ್ರಹಿಸಿ ರೈತರು ಕಳೆದ ಒಂದೂವರೆ ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ, ಯಾವ ಪರಿಣಾಮ ಆಗಿಲ್ಲ. ನಮ್ಮಲ್ಲಿ ಲಜ್ಜೆಗೇಡಿ ಜನಪ್ರತಿನಿಧಿ ಗಳು,  ನ್ಯಾಯಾಧೀಶರು ಇದ್ದಾರೆ. ಈ ಭಾಗದ ಸಂಸದರು ಪ್ರಧಾನಿ ಮೇಲೆ ಒತ್ತಡ ಹೇರಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT