ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಟೂರಿನಲ್ಲಿ ಗಲಾಟೆ

ಎಪಿಎಂಸಿ ಚುನಾವಣೆ: ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ
Last Updated 13 ಜನವರಿ 2017, 6:12 IST
ಅಕ್ಷರ ಗಾತ್ರ
ಗದಗ: ಎಪಿಎಂಸಿ ಚುನಾವಣೆ ಫಲಿ ತಾಂಶದ ಹಿನ್ನೆಲೆಯಲ್ಲಿ ತಾಲ್ಲೂಕಿನ  ಸೊರಟೂರು ಗ್ರಾಮದಲ್ಲಿ  ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದ್ದು, ಆರು ಮಂದಿ ಗಾಯ ಗೊಂಡಿದ್ದಾರೆ.
 
ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ  ಪ್ರೇಮಾ ಹೊಸ ಮಠ ಜಯ ಗಳಿಸಿದ್ದರು. ಈ ವಿಚಾರ ವಾಗಿ ಬಿ.ಜೆ.ಪಿ ಗ್ರಾಮೀಣ ಘಟಕದ ಅಧ್ಯಕ್ಷ ಭದ್ರೇಶ ಕುಸಲಾಪೂರ ಎಂಬುವ ವರ ಮನೆಗೆ ನುಗ್ಗಿ ಕಾಂಗ್ರೆಸ್ ಕಾರ್ಯ ಕರ್ತರು ದಾಂದಲೆ ನಡೆಸಿ, ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಪೀಠೋಪಕರಣ ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ ದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಮುಳಗುಂದ ಪೊಲೀಸ್‌ ಠಾಣೆಯಲ್ಲಿ ಪರ ವಿರೋಧ ಪ್ರಕರಣ ದಾಖಲಾಗಿದೆ. 
 
ಘಟನೆಯಲ್ಲಿ ಬದ್ರೇಶ ಕುಸಲಾಪುರ, ಪ್ರಕಾಶ ಪಲ್ಲೇದ, ಶಿವಾನಂದ ಪಲ್ಲೇದ, ಬಸಮ್ಮ ಕುಸಲಾಪುರ, ರೇಖಾ ಕುಸ ಲಾಪುರ ಎಂಬುವರಿಗೆ ಗಾಯಗಳಾಗಿವೆ. ಕಾಂಗ್ರೆಸ್‌ನ ಬಸವರಾಜ ಕೊನ್ನೂರು ಅವರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿ ಸಲಾಗಿದೆ.
 
ಬಿಜೆಪಿ ಪ್ರತಿಭಟನೆ: ಸೊರಟೂರು ಗ್ರಾಮ ದಲ್ಲಿ ದಾಂದಲೆ ನಡೆಸಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ  ಪ್ರತಿಭಟನೆ ನಡೆಸಿದರು. 
 
ಗಲಾಟೆ ಹಿನ್ನೆಲೆಯಲ್ಲಿ ಸೊರಟೂರು ಗ್ರಾಮದಲ್ಲಿ ಮುಳಗುಂದ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
 
ಕಾನೂನು  ಕ್ರಮಕ್ಕೆ  ಆಗ್ರಹ
ತಾಲ್ಲೂಕಿನ ಸೊರಟೂರ ಹಾಗೂ ಕುರ್ತಕೋಟಿ ಗ್ರಾಮದ ಬಿಜೆಪಿ ಕಾರ್ಯ ಕರ್ತರ ಹಾಗೂ ಅವರ ಕುಟುಂಬ ಸದ ಸ್ಯರ ಮೇಲೆ ಗೂಂಡಾಗಿರಿ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸು ವಂತೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಆಗ್ರಹಿಸಿದ್ದಾರೆ.
 
ಗಲಾಟೆಯಲ್ಲಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದರು.
 
ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕಾಂಗ್ರೆಸ್‌ ಗೂಂಡಾಗಿರಿ ನಡೆಸುತ್ತಿದೆ. ಇಂತಹ ಬೆದರಿಕೆ ತಂತ್ರಕ್ಕೆ ಬಿಜೆಪಿ ಹೆದರುವುದಿಲ್ಲ. ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲೆ ಯಾದ್ಯಂತ ಹೋರಾಟ ನಡೆಸಲಾಗು ವುದು ಎಂದರು. ಈ ವಿಷಯವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಸಂತೋಷಬಾಬು ಅವರ ಜತೆಗೆ, ಎಸ್‌.ವಿ ಸಂಕನೂರ ಮಾತನಾಡಿ, ಆರೋಪಿ ಗಳನ್ನು ಬಂಧಿಸುವಂತೆ ಒತ್ತಾಯಿಸಿದರು. 
 
ಶ್ರೀನಿವಾಸ ಹುಬ್ಬಳ್ಳಿ, ಮಹೇಶ ಕೋಟಿ, ಅಶೋಕ ಕುಡತಿನ್ನಿ, ಬಸುವ ರಾಜ ಚವ್ಹಾಣ, ನಾಗರಾಜ ಜೋಗಿ, ಫಕೀರಪ್ಪ ಗುಜರಾತಿ, ಕೃಷ್ಣಾ ಘೋಡಕೆ, ಮಹಾದೇವಪ್ಪ ಹಡಪದ, ಎಮ್.ವಿ. ನಡುವಿನಮನಿ, ರಾಮಣ್ಣಾ ಕಮ್ಮಾರ, ವಾಯ್.ಪಿ. ಅಡ್ನೂರು, ಎಮ್.ಬಿ. ಗಿಡ್ಡಕೆಂಚಣ್ಣವರ, ದೇವಪ್ಪ ಕುಸಲಾ ಪುರ, ಮಾರುತಿ ಮಾದಣ್ಣವರ, ಬಸಪ್ಪ ದಿವಟರ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT