ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಂಗಡಿ ಚಿಬ್ಬುರೋಗಕ್ಕೆ ತಜ್ಞರ ಪರಿಹಾರೋಪಾಯ

ಹೊನಕುಪ್ಪಿ ಗ್ರಾಮದಲ್ಲಿ ತೋಟಗಾರಿಕೆ ಕ್ಷೇತ್ರೋತ್ಸವ
Last Updated 13 ಜನವರಿ 2017, 6:37 IST
ಅಕ್ಷರ ಗಾತ್ರ
ಮೂಡಲಗಿ: ಸಮೀಪದ ಹೊನಕುಪ್ಪಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬೆಳೆದಿರುವ ಕಲ್ಲಂಗಡಿ ಬೆಳೆಗೆ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಕಾಲೇಜಿನ ವಿಜ್ಞಾನಿ ಗಳಾದ ಡಾ.ಸಿ.ಎನ್. ಹಂಚಿನಮನಿ, ಡಾ. ಎಚ್.ಪಿ. ಹಾದಿಮನಿ, ಡಾ. ಕಾಂತರಾಜು ವಿ. ಮತ್ತು ಡಾ. ರಮನಗೌಡ ಎಸ್.ಎಚ್ ಅವರು ಭೇಟಿ ನೀಡಿ ರೈತರಿಗೆ ಬೆಳೆಯ ಬಗ್ಗೆ ಸಲಹೆ ನೀಡಿದರು.
 
ಗ್ರಾಮದಲ್ಲಿ ಸುಮಾರು 20 ಜನ ರೈತರು ಕಲ್ಲಂಗಡಿಯನ್ನು ಬೆಳೆದಿದ್ದು ಹೂ ಬಿಡುವ ಹಂತದಿಂದ ಹಣ್ಣು ಮಾಗುವ ಹಂತದವರೆಗೆ ಇದ್ದು ಕೆಲವು ರೋಗ ಮತ್ತು ಕೀಟಗಳ ಹತೋಟಿಗೆ ಕ್ರಮಗಳನ್ನು ರೈತರಿಗೆ ತಿಳಿಸಿದರು.
 
ಕಲ್ಲಂಗಡಿಗೆ ಪ್ರಮುಖವಾಗಿ ಬರುವ ಚಿಬ್ಬುರೋಗ ಅಥವಾ ಮಚ್ಚೆ ರೋಗಕ್ಕೆ ಥಯೋಪೀನೇಟ್‌ ಮೀಥೈಲ್‌ವನ್ನು 1 ಗ್ರಾಂ ಅಥವಾ ಕಾರ್ಬೇಂಡೈಜಿಮ್‌ ಮತ್ತು ಮ್ಯಾಂಕೋಜೆಬ್‌ವನ್ನು 2 ಗ್ರಾಂ. ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೂವಾಡುವ ಹಂತದಲ್ಲಿರುವ ಬೆಳೆಗಳಿಗೆ ಹಣ್ಣ ನೊಣದ ನಿಯಂತ್ರಣಕ್ಕಾಗಿ 1 ಮಿ.ಲೀ. ಮೆಲಾಥಿಯಾನ್‌ 50 ಇ.ಸಿ. ಮತ್ತು 10 ಗ್ರಾಂ. ಸಕ್ಕರೆ ಅಥವ ಬೆಲ್ಲವನ್ನು ಪ್ರತಿ ಲೀಟರ್‌ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಇದೇ ಸಿಂಪರಣೆಯನ್ನು ಒಂದು ವಾರದ ನಂತರ ಬಾಧೆ ಕಂಡು ಬಂದರೆ ಮಾತ್ರ ಸಿಂಪರಣೆ ಮಾಡಬೇಕು. 
 
ಸಸ್ಯ ಹೇನಿಗೆ ಪರಿಹಾರ: ಸಸ್ಯ ಹೇನು ಕಾಣಿಸಿಕೊಂಡಾಗ 1.5 ಮಿ.ಲೀ. ಪಿಪ್ರೋನಿಲ್‌ ಶೇ.5ಎಸ್‌.ಸಿ.ಯನ್ನು ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಲ್ಲಂಗಡಿಯ ಬೆಳೆಯ ಅಧಿಕ ಇಳುವರಿ ಮತ್ತು ಗುಣಮಟ್ಟವನ್ನು ಪಡೆಯಲು ಬೆಂಗಳೂರಿನ ಹೆಸರುಘಟ್ಟಿದ ಐ.ಐ. ಎಚ್‌.ಆರ್. ಇವರಿಂದ ಸಂಶೋಧಿಸಿ ಹಾಗೂ ದೃಢಿಕರಿಸಿದ 15 ಗ್ರಾಂ. ಅರ್ಕಾ ‘ವೆಜಿಟೆಬಲ್‌ ಸ್ಪೇಷಲ್‌’ ಮಿಶ್ರಣವನ್ನು ಒಂದು ಶ್ಯಾಂಪೂ ಪಾಕೆಟ್‌ ಮತ್ತು ಒಂದು ನಿಂಬೆ ಹಣ್ಣಿನ ರಸದೊಂದಿಗೆ 15 ಲೀ. ನೀರಿನೊಂದಿಗೆ ಮಿಶ್ರಣ ಮಾಡ ಬೇಕು. ಸಿಂಪರಣೆಯನ್ನು ಬೆಳಿಗ್ಗೆ 6ರಿಂದ 11ರವರೆಗೆ ಮತ್ತು ಸಂಜೆ 4ರಿಂದ ಸಂಜೆ 6.30ರವರೆಗೆ ಸಿಂಪರಣೆಯನ್ನು ಮಾಡಲು ಸೂಕ್ತವಾದ ಸಮಯವಾಗಿರು ತ್ತದೆ. 
 
ಈ ಮಿಶ್ರಣವನ್ನು ಯಾವುದೇ ಕೀಟ ನಾಶಕ ಹಾಗೂ ಶೀಲಿಂದ್ರ ನಾಶಕದೊಂ ದಿಗೆ ಬಳಸಬಹುದು (ತಾಮ್ರ ಮಿಶ್ರಿತ ಸಿಲೀಂದ್ರನಾಶಕ ಹೊರತು ಪಡಿಸಿ). ಒಂದು ಪೂರ್ತಿ ಬೆಳೆಗೆ ಮೂರು ಬಾರಿ ಸಿಂಪರಣೆ ಅವಶ್ಯವಾಗಿದೆ. ಮೊದ ಲನೆ ಸಿಂಪರಣೆಯನ್ನು 25–30 ದಿನಗಳ ನಂತರ ಮಾಡಬೇಕು. ಇದರಿಂದ ಶೇ. 20ರಷ್ಟು ಅಧಿಕ ಇಳುವರಿ ಹಾಗೂ ಗುಣಮಟ್ಟದಲ್ಲಿ ಸುಧಾರಣೆ ಪಡೆಯಬಹುದು.  
 
ಈ ಸಂದರ್ಭದಲ್ಲಿ ಹೊನಕುಪ್ಪಿ ಗ್ರಾಮದ ರೈತರಾದ ಸುಭಾಷ ಗಂಗರಡ್ಡಿ, ಸುನೀಲ ಗಂಗರಡ್ಡಿ, ಬಸು ತೆಗ್ಗಿ, ಸೋಮಪ್ಪ ಗಂಗರಡ್ಡಿ, ರಾಮಣ್ಣ ತೋಟ್ಯಾಪುರ, ವಿನೋದ ಗಂಗರಡ್ಡಿ, ಹಣಮಂತ ಸಿದ್ದಾಪೂರ, ರಾಮಚಂದ್ರ ಲಗಳಿ, ಶೇಖರ ಸಿದ್ದಾಪೂರ, ಪಾಂಡು ಅರಕೇರಿ, ಬಸು ತೋಟ್ಯಾಪೂರ ಹಾಗೂ ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT