ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಳೆಗೇರಿಗೆ ಅನುದಾನ’

ನಿಪ್ಪಾಣಿಯ ನಾಲ್ಕು ಪ್ರದೇಶ ಸ್ಲಂ ಪಟ್ಟಿಯಲ್ಲಿ ಸೇರ್ಪಡೆ
Last Updated 13 ಜನವರಿ 2017, 6:44 IST
ಅಕ್ಷರ ಗಾತ್ರ
ನಿಪ್ಪಾಣಿ: ನಗರದ ತಹಶೀಲ್ದಾರ್‌ ಪ್ಲಾಟ್‌, ಅಂಬೇಡ್ಕರ್‌ ನಗರ, ಶಿಂಧೆ ನಗರ ಮತ್ತು ಜತ್ರಾಟವೇಸ್‌ ಪ್ರದೇಶಗಳಿಗೆ ಸ್ಲಂ ಪ್ರದೇಶ ಎಂದು ಅನುಮೋದನೆ ಸಿಕ್ಕಿದೆ. ಈ ಭಾಗ ಗಳಲ್ಲಿ ದಲಿತರು, ಹಿಂದುಳಿದ ವರ್ಗ, ಅಭಿವೃದ್ಧಿ ವಂಚಿತರಿದ್ದು, ಇವುಗಳನ್ನು ಕೊಳೆಗೇರಿ ಪ್ರದೇಶ ಎಂದು ಪರಿಗಣಿಸ ಬೇಕು ಎಂಬ ಬೇಡಿಕೆ ಇಡಲಾಗಿತ್ತು. ಇದಕ್ಕೆ ಅನುಗುಣವಾಗಿ ಸರ್ಕಾರ ಸ್ಲಂ ಎಂದು ಘೋಷಿಸಿ ಆದೇಶ ಹೊರಡಿಸಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
 
ಈಗ ಅನುಮೋದನೆಗೊಂಡಿರುವ ಸ್ಲಂ ಭಾಗಗಳಲ್ಲಿಯೂ ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣ  ಮೊದಲಾದ ಮೂಲ ಸೌಲಭ್ಯಗಳನ್ನು ಪೂರೈಸು ವುದರೊಂದಿಗೆ ಆ ಭಾಗ ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು. 
 
ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳಿಂದ ಸ್ಲಂ ಭಾಗಗಳಿಗೆ ವಿಶೇಷ ಯೋಜನೆಗಳಿದ್ದು ಅವುಗಳ ಮೂಲಕ ಅಲ್ಲಿ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು. ಎಪಿಎಂಸಿ ಚುನಾವಣೆ ನಂತರ ನಾಗರಿಕರು, ಕಾರ್ಯಕರ್ತರು, ನಗರಸಭೆ ಸದಸ್ಯರೊಂದಿಗೆ ಚರ್ಚಿಸಿ ಸ್ಲಂ ಕ್ಷೇತ್ರದ ಸರ್ವೆ ನಡೆಸಿ ಒಟ್ಟಾರೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲಾಗುವುದು’ ಎಂದು ತಿಳಿಸಿದರು
 
ಬಿಜೆಪಿ ನಗರ ಘಟಕದ ಅಧ್ಯಕ್ಷ ಜಯವಂತ ಭಾಟಲೆ, ಪ್ರಣವ ಮಾನವಿ, ಬಂಡಾ ಘೋರ್ಪಡೆ, ನಗರಸಭೆ ಅಧ್ಯಕ್ಷ ದೀಪಕ ಮಾನೆ, ವಿಜಯ ಟವಳೆ, ದತ್ತಾ ಜೋತ್ರೆ, ಪ್ರವೀಣ ಭಾಟಲೆ, ಮೋಹನ ಸಾದಳಕರ, ಅಮಿತ್ಸಾ ಳವೆ ಮೊದಲಾದವರು ಇದ್ದರು. 
 
**
ಆಂದೋಲನ ನಗರ, ಆಶ್ರಯ ನಗರ, ಭೀಮ ನಗರ, ಪಾಂಗೀರೆ ‘ಬಿ’ ರಸ್ತೆ  ಸ್ಲಂ ಎಂದು ಘೋಷಣೆಯಾಗಿದ್ದು ಅಲ್ಲಿ ₹ 1 ಕೋಟಿ ಅಭಿವೃದ್ಧಿಗೆ ಬಿಡುಗಡೆಯಾಗಿದೆ 
-ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ,
ಶಾಸಕಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT