ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿಗೆ ದಾಖಲು; 15ರವರೆಗೆ ಅವಕಾಶ

ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಸೂಚನೆ: ಶನಿವಾರ, ಭಾನುವಾರವೂ ಕೆಲಸ
Last Updated 13 ಜನವರಿ 2017, 7:05 IST
ಅಕ್ಷರ ಗಾತ್ರ
ಮೈಸೂರು: ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಲಾಗುತ್ತಿದ್ದು, ರಾಜ್ಯದ ನೋಂದಾಯಿತ ವರ್ತಕರು ಈ ತೆರಿಗೆ ಪದ್ಧತಿಗೆ ದಾಖಲಾತಿ ಮಾಡಿಕೊಳ್ಳಲು ಜ. 15ರವರೆಗೂ ಅವಕಾಶ ಇದೆ ಎಂದು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಬಿ.ಎನ್‌.ಗಿರಿಯಣ್ಣನವರ್‌ ತಿಳಿಸಿದರು. 
 
ಮೌಲ್ಯವರ್ಧಿತ (ವ್ಯಾಟ್‌), ಮನರಂಜನೆ, ವಿಲಾಸ ತೆರಿಗೆ ವ್ಯಾಪ್ತಿಯ ಎಲ್ಲ ವರ್ತಕರು ಜಿಎಸ್‌ಟಿ ಪದ್ಧತಿಗೆ ದಾಖಲು ಮಾಡಿಕೊಳ್ಳಬೇಕು. ವರ್ತಕರು ಎಲ್‌ವಿಒ ಕಚೇರಿಗಳನ್ನು ಸಂಪರ್ಕಿಸಿ ಡೀಲರ್‌ ಲಾಗಿನ್‌ನಲ್ಲಿ ಈಗಾಗಲೇ ಬಂದಿರುವ ಪ್ರಾವಿಷನಲ್‌ ಐಡಿ, ಇ–ಮೇಲ್‌, ದೂರವಾಣಿ, ಮೊಬೈಲ್‌ ಸಂಖ್ಯೆಗಳನ್ನು ನೀಡಿ ಜಿಎಸ್‌ಟಿ ಲಾಗ್‌ಇನ್‌ನಲ್ಲಿ ಅಪಲೋಡ್‌ ಮಾಡಿಸಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
 
ದಾಖಲಾತಿಯನ್ನು ತ್ವರಿತವಾಗಿ ನಡೆಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಜ. 14 (ಸಂಕ್ರಾಂತಿ) ಮತ್ತು 15 (ಭಾನುವಾರ) ಸರ್ಕಾರಿ ರಜಾದಿನಗಳಂದು ಕಚೇರಿಗಳಲ್ಲಿ ಪ್ರಕ್ರಿಯೆ ನಡೆಯಲಿದೆ. ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳು ಈ ವಿಭಾಗೀಯ ಕಚೇರಿ ವ್ಯಾಪ್ತಿಗೆ ಒಳಪಡುತ್ತವೆ. ಈ ವಿಭಾಗ ವ್ಯಾಪ್ತಿಯ ಎಲ್ಲ ವರ್ತಕರು ನಿಗದಿತ ದಿನದೊಳಗೆ ದಾಖಲಾತಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. 
 
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಿಗೆ ಜ. 1ರಿಂದ 15ರವರೆಗೆ ದಾಖಲಾತಿ ಮಾಡಿಕೊಳ್ಳಲು ಅವಕಾಶ ಇದೆ. ಈ ಅವಧಿಯ ನಂತರವೂ ದಾಖಲಾತಿಗೆ ಅವಕಾಶ ಸಿಕ್ಕಿದ್ದರೂ, ಪ್ರಕ್ರಿಯೆ ಪೂರ್ಣಕ್ಕೆ ಬಹಳ ಸಮಯ ಹಿಡಿಯುತ್ತದೆ. ಈ ಪದ್ಧತಿಗೆ ಸ್ಥಿತ್ಯಂತರಗೊಳ್ಳದಿದ್ದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದರು. 
 
ದಾಖಲಾತಿ ಪ್ರಕ್ರಿಯೆ ಮಾಹಿತಿ ವಿನಿಮಯ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಕಚೇರಿಗಳಲ್ಲಿ ಸಹಾಯವಾಣಿ:  0821–2420360 ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಕಾರ್ಯನಿರ್ವಹಿಸುತ್ತದೆ. ವ್ಯಾಟ್‌ನಿಂದ ಜಿಎಸ್‌ಟಿಗೆ ಸುಗಮವಾಗಿ ಸ್ಥಿತ್ಯಂತರ ಹೊಂದಲು ಮಾಹಿತಿಗೆ ದೂ: 0124–4688999 ಅಥವಾ helpdesk@ gst.gov.in ಸಂಪರ್ಕಿಸಬಹುದು ಎಂದು ವಿವರಿಸಿದರು. 
 
ಮಾಹಿತಿಗೆ ಜಿಲ್ಲಾವಾರು ಸಂಪರ್ಕ ದೂರವಾಣಿ ಸಂಖ್ಯೆಗಳು ಇಂತಿವೆ. ಮೈಸೂರು: 0821–249617, ಮಂಡ್ಯ: 08232 –220386, ಚಾಮರಾಜನಗರ: 08226 –224724, ಕೊಡಗು: 08272 –225901
 
ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ಮೌಲ್ಯವರ್ಧಿತ ತೆರಿಗೆ ವಿಭಾಗದ ಕೆ.ನಾಗೇಶ್ವರರಾವ್‌, ಉಪಆಯುಕ್ತ ಡಾ.ಬಿ.ಟಿ.ಬಾಣೇಗೌಡ, ಸಹಾಯಕ ಆಯುಕ್ತರಾದ ಬಾಲಸುಬ್ರಹಣ್ಯಂ, ಡಿ.ಕುಮಾರ್‌, ದೀಪಾ, ಎಚ್‌.ಕೆ.ದುರ್ಗಾಪರಮೇಶ್ವರಿ ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT