ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದ ಜ್ಞಾನದ ದ್ಯೋತಕ

ರಾಷ್ಟ್ರೀಯ ಯುವ ಸಪ್ತಾಹದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ ಅಭಿಮತ
Last Updated 13 ಜನವರಿ 2017, 7:07 IST
ಅಕ್ಷರ ಗಾತ್ರ
ಚಾಮರಾಜನಗರ: ‘ಸ್ವಾಮಿ ವಿವೇಕಾ ನಂದರು ಭಾರತೀಯ ಧರ್ಮ ಹಾಗೂ ಜ್ಞಾನದ ವೈಭವವನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಹೇಳಿದರು.
 
ನಗರದ ಜೆ.ಎಚ್. ಪಟೇಲ್‌ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಿಂದ ಸ್ವಾಮಿ ವಿವೇಕಾನಂದರ 154ನೇ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
 
ವಿವೇಕಾನಂದರನ್ನು ಇಡೀ ಜಗತ್ತು ಗೌರವದಿಂದ ನೆನಪಿಸಿಕೊಳ್ಳುತ್ತಿದೆ. ಅವರ ಜೀವನ ಮೌಲ್ಯ ಕುರಿತ ಸಂದೇಶ ಗಳನ್ನು ಯುವಜನರು ಮೈಗೂಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
 
ಯುವಶಕ್ತಿಯೇ ರಾಷ್ಟ್ರದ ಶ್ರೇಷ್ಠ ಸಂಪನ್ಮೂಲ. ಯುವಜನರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ವಿವೇಕಾನಂದರ ಆಶಯದಂತೆ ಸಾಗಬೇಕು ಎಂದು ತಿಳಿಸಿದರು.
 
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಯುವಜನರು ಜೀವನದಲ್ಲಿ ಉತ್ತಮ ಗುರಿ ಹೊಂದಬೇಕು. ವಿವೇಕಾ ನಂದರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಉತ್ತಮ ಪ್ರಜೆಯಾಗಿ ದೇಶ ಕಟ್ಟಲು ಶ್ರಮಿಸಬೇಕು ಎಂದರು.
 
ವಿವೇಕಾನಂದರು ಎಲ್ಲ ಧರ್ಮಗಳಿಗೂ ಪ್ರಾತಿನಿಧ್ಯ ನೀಡಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಸಮಾಜದಲ್ಲಿ ಅವರಿಗೂ ಸಮಾನವಾದ ಸ್ಥಾನಮಾನ ಸಿಗಬೇಕು ಎಂದು ಆಶಿಸಿ ದ್ದರು. ಅವರ ವಿವೇಕವಾಣಿ ಇಂದಿಗೂ ಪ್ರಸ್ತುತವಾಗಿದೆ ಎಂದರು.
 
ಜಿಲ್ಲಾಧಿಕಾರಿ ಬಿ.ರಾಮು ಮಾತನಾಡಿ, ಭಾರತ ಶಾಂತಿಯ ಸಂದೇಶ ಸಾರಿದ ದೇಶ. ಇಲ್ಲಿನ ಮಣ್ಣಿನಲ್ಲಿ ಹಲವು ಮಹನೀಯರು ಜನಿಸಿದ್ದಾರೆ. ಅವರ ತತ್ವ, ಆದರ್ಶವನ್ನು ಅಳವಡಿಸಿಕೊಳ್ಳುವ ಮೂಲಕ ಭಾರತ ಜಗತ್ತಿನಲ್ಲಿಯೇ ಉತ್ತಮವಾದ ಸಂಸ್ಕೃತಿ ಹೊಂದಿದೆ. ವಿದೇಶಿಗರು ಕೂಡ ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದರು.
 
ಬಲಿಷ್ಠವಾದ ದೇಹ ಮತ್ತು ಆರೋಗ್ಯದಿಂದ ಮಾತ್ರ ಉತ್ತಮ ಆಲೋಚನೆ ಸಾಧ್ಯ ಎಂದು ವಿವೇಕಾ ನಂದರು ಹೇಳಿದ್ದಾರೆ. ಅವರ ಮಾತಿ ನಂತೆ ಯುವಜನರು ಆರೋಗ್ಯಕರವಾದ ಗುಣ, ಚಿಂತನೆ, ಆಲೋಚನೆ ಮಾಡ  ಬೇಕು. ದೇಶದ ಉತ್ತಮ ಪ್ರಜೆಯಾಗ ಬೇಕು ಎಂದರು.
 
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ವಿನಯ್‌ ಮಾತನಾಡಿ, ವ್ಯಕ್ತಿತ್ವದ ಎಲ್ಲ ಆಯಾಮ ಗಳ ಸಾರ್ಥಕತೆಗೆ ಅವಕಾಶ ನೀಡುವ ಕಾಲವೇ ಯೌವನ. ಈ ಕಾಲದಲ್ಲಿ ಬುದ್ಧಿ ಇದ್ದರೆ ಕ್ರಿಯಾಶೀಲತೆ ಇರುವುದಿಲ್ಲ. ಕ್ರಿಯಾಶೀಲತೆ ಇದ್ದರೆ ಬುದ್ಧಿ ಇರುವು ದಿಲ್ಲ. ಹೀಗಾಗಿ, ಯೌವನ ಎನ್ನುವುದು ಹಲವರ ಜೀವನದಲ್ಲಿ ಅರ್ಥ ಕಳೆದು ಕೊಳ್ಳುತ್ತದೆ. ಬುದ್ಧಿ, ಶಕ್ತಿ, ಕ್ರಿಯಾಶೀಲತೆಯ ಸಂಗಮದಿಂದ ಮಾತ್ರ ವಿವೇಕಾನಂದರ ಆಶಯ ಈಡೇರಿಸಲು ಸಾಧ್ಯ ಎಂದರು.
 
ವಿವೇಕಾನಂದರು ನವಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಿದ್ದಾರೆ. ಸದೃಢ ರಾಷ್ಟ್ರ ನಿರ್ಮಾಣ ಕ್ಕಾಗಿ ಯುವಜನರನ್ನು ಸತ್ಕಾರ್ಯಗಳಿಗೆ ಪ್ರೇರೇಪಿಸಬೇಕಿದೆ. ಆಗ ಮಾತ್ರ ಯುವಕರು ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಎಸ್.ಎನ್.ರೇಣುಕಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಉಪ ಕಾರ್ಯದರ್ಶಿ ಎನ್.ಮುನಿರಾಜಪ್ಪ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇ ಞಶಕಿ ರಜಿನಾ ಪಿ.ಮಲಾಕಿ, ಉಪ ನ್ಯಾಸಕ ಸುರೇಶ್‌ ಋಗ್ವೇದಿ ಹಾಜರಿದ್ದರು.
 
**
ವಿದ್ಯಾರ್ಥಿಗಳು ವಿವೇಕಾ ನಂದರ ಜೀವನ ಚರಿತ್ರೆ ಹಾಗೂ ಅವರ ಸಂದೇಶ ಓದಬೇಕು. ಶಾಲಾ, ಕಾಲೇಜುಗಳಲ್ಲಿ ವಿವೇಕಾನಂದರ ಸಂದೇಶದ ಬಗ್ಗೆ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸಬೇಕು
-ಎಂ.ರಾಮಚಂದ್ರ, ಅಧ್ಯಕ್ಷ, ಜಿಲ್ಲಾ ಪಂಚಾಯಿತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT