ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

43 ಇಂಚಿನ ಸ್ಪೈಕ್‌!

Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ
ಕೇಶವಿನ್ಯಾಸದ ಪಟ್ಟಿಯಲ್ಲಿ ಜನಪ್ರಿಯತೆ ಗಳಿಸಿರುವ ಶೈಲಿಯಲ್ಲಿ ಸ್ಪೈಕ್‌ ಕೂಡ ಒಂದು. ಕರೆಂಟ್‌ ಶಾಕ್‌ ಕೊಟ್ಟಂತೆ ಕೂದಲು ಆಕಾಶವನ್ನೇ ನೋಡುತ್ತ ನೆಟ್ಟಗೆ ನಿಲ್ಲುವ ಈ ವಿನ್ಯಾಸ ಫ್ಯಾಷನ್‌ ಟ್ರೆಂಡ್‌ ಆಗಿ ಹಲವು ಕಾಲವೇ ಕಳೆದಿದೆ.
 
ಈಗ ಈ ಸ್ಪೈಕ್‌ ಮತ್ತೊಮ್ಮೆ ಸುದ್ದಿಯಾಗಿರುವುದಕ್ಕೂ ಒಂದು ಕಾರಣವಿದೆ. ಜಪಾನಿನ ಕಜುರಿಯಾ ವಟನಬೆ ಅವರಿಗೆ ವಿಭಿನ್ನವಾಗಿ ಏನನ್ನಾದರೂ ಮಾಡಿ ಹೆಸರು ಗಳಿಸಬೇಕೆಂಬ ಹಂಬಲ. ಇದಕ್ಕಾಗಿ ಅವರು ಆರಿಸಿಕೊಂಡಿದ್ದು ಸ್ಪೈಕ್‌ ಕೇಶವಿನ್ಯಾಸವನ್ನು. ಮೊದಲು ಸ್ಪೈಕ್‌ ಮಾಡಿಕೊಂಡಾಗ ಗೆಳೆಯರೆಲ್ಲ ಈ ಶೈಲಿ ನಿನಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ ಎಂದು ಹೊಗಳುತ್ತಿದ್ದರಂತೆ. ಗೆಳೆಯರ ಮಾತಿನಿಂದ ಉತ್ಸಾಹ ಹೆಚ್ಚಿಸಿಕೊಂಡ ಅವರು, ಕೂದಲನ್ನು ಉದ್ದವಾಗಿ ಬಿಟ್ಟು, ಬರೋಬ್ಬರಿ 44 ಇಂಚಿನಷ್ಟು ಉದ್ದ ಸ್ಪೈಕ್‌ ಮಾಡಿಕೊಂಡಿದ್ದಾರೆ. 
 
ಇಷ್ಟು ಉದ್ದ ಸ್ಪೈಕ್‌ ಮಾಡಿಕೊಳ್ಳುವುದೆಂದರೆ ಸುಲಭದ ಮಾತೇ! ಇದರ ನಿರ್ವಹಣೆಗೆ ಇವರು ದಿನದಲ್ಲಿ ಎರಡು ಗಂಟೆ ಮೀಸಲಿಡುತ್ತಾರೆ. ಈ ಕೂದಲ ರಕ್ಷಣೆಗೆ ಇವರು, ವಾರಕ್ಕೊಮ್ಮೆ ಮೂರು ಬಾಟಲ್‌ ಹೇರ್‌ಸ್ಪ್ರೆ ಮತ್ತು ಒಂದು ಬಾಟಲ್‌ ಜೆಲ್‌ ಬಳಸುತ್ತಾರೆ.
 
‘ನನ್ನ ಈ ಸಾಧನೆಗೆ ಗೆಳೆಯರೇ ಕಾರಣ. ಅವರ ಪ್ರೋತ್ಸಾಹವನ್ನು ನಾನು ಮರೆಯಲು ಸಾಧ್ಯವಿಲ್ಲ. ಜನರು ನಾನು ಹೊರಗೆ ಹೋದರೆ ಸಾಕು ಮುತ್ತಿಕೊಂಡು ಫೋಟೊ ಕ್ಲಿಕಿಸಿಕೊಳ್ಳುತ್ತಾರೆ’ ಎಂದು ಹೆಮ್ಮೆ ಪಡುತ್ತಾರೆ ಕಜುರಿಯಾ. ಈ ಹಿಂದೆ 31 ಇಂಚು ಉದ್ದ ಸ್ಪೈಕ್‌ ಮಾಡಿಕೊಂಡಿದ್ದ ಜರ್ಮನಿಯ ಸ್ಟೆಫನ್‌ ಅವರ ದಾಖಲೆಯನ್ನು ಮುರಿದು ಇವರು, ಈ ಬಾರಿ ಗಿನ್ನಿಸ್ ದಾಖಲೆಯ ಮನ್ನಣೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT