ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕುರ

Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ
ನನ್ನ ಗಂಡ ನನ್ನನ್ನು ತುಂಬಾ ಪ್ರೀತಿಸುತ್ತಾನೆ. ಆದರೆ ಲೈಂಗಿಕ ಬದುಕಿನಲ್ಲಿ ನನಗೆ ತೃಪ್ತಿ ಸಿಗುತ್ತಿಲ್ಲ. ಅವರು ಬಹುಬೇಗ ವಿರ್ಯಸ್ಖಲನ ಮಾಡುತ್ತಾರೆ. ಏಕೆ ಹೀಗಾಗುತ್ತಿದೆ ಅಂತ ನನಗೆ ಗೊತ್ತಾಗುತ್ತಿಲ್ಲ. ನಾನು ಏನು ಮಾಡಲಿ?
 
ಶೀಘ್ರ ಸ್ಖಲನ ಎಂದರೇನು?
ಸಂಭೋಗಕ್ಕೂ ಮೊದಲು ಅಥವಾ ಸಂಭೋಗದ ಆರಂಭಿಕ ಹಂತದಲ್ಲಿ ನಿಯಂತ್ರಣವಿಲ್ಲದೆ ವೀರ್ಯಸ್ಖಲನವಾಗುವುದಕ್ಕೆ ಶೀಘ್ರಸ್ಖಲನ ಎನ್ನುತ್ತಾರೆ. ಈ ಸಮಸ್ಯೆ ಅನುಭವಿಸುವ ಪುರುಷರು ಬಹುತೇಕ ಸಂದರ್ಭಗಳಲ್ಲಿ ತನ್ನ ಇಚ್ಛಿತ ಅವಧಿಗೂ ಮೊದಲೇ ಅಥವಾ ಸಂಗಾತಿಗೆ ತೃಪ್ತಿ ಸಿಗುವುದಕ್ಕೂ ಮೊದಲೇ ವೀರ್ಯಸ್ಖಲನ ಮಾಡಿರುತ್ತಾರೆ. ಸಂಭೋಗದ ಸರಾಸರಿ ಅವಧಿ 7.3 ನಿಮಿಷ ಎಂದು ಯುಎಸ್‌ಎ ನ್ಯೂಸ್‌ನ ವರದಿಯೊಂದು ಉಲ್ಲೇಖಿಸುತ್ತದೆ. ಆದರೆ ಶೇ. 43ರಷ್ಟು ಪುರುಷರು ಕೇವಲ 2 ನಿಮಿಷದಲ್ಲಿ ಸಂಭೋಗ ಚಟುವಟಿಕೆ ಮುಗಿಸಿರುತ್ತಾರೆ.
 
ಭಾರತದಲ್ಲಿ ಎಷ್ಟು ಜನರು ಈ ಸಮಸ್ಯೆ ಅನುಭವಿಸುತ್ತಿದ್ದಾರೆ?
ನಮ್ಮ ದೇಶದಲ್ಲಿ ಶೇ. 30ರಷ್ಟು ಪುರುಷರು ಶೀಘ್ರ ಸ್ಖಲನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತನ್ನ ಜೀವಿತಾವಧಿಯಲ್ಲಿ ಎಲ್ಲ ಪುರುಷರೂ ಒಂದಲ್ಲ ಒಂದು ದಿನ ಶೀಘ್ರ ಸ್ಖಲನ ಸಮಸ್ಯೆ ಅನುಭವಿಸಿಯೇ ಇರುತ್ತಾರೆ.
 
ಶೀಘ್ರ ಸ್ಖಲನ ಸಮಸ್ಯೆಯನ್ನು ಹೇಗೆ ಅಳೆಯಲಾಗುತ್ತದೆ?
ಇದಕ್ಕೊಂದು ತಂತ್ರವಿದೆ. ಅದರ ಹೆಸರು ಐಇಎಲ್‌ಟಿ (ಇಂಟ್ರಾ ವಜಿನಲ್ ಎಜಾಕ್ಯುಲೇಷನ್ ಟ್ಯಾಟೆನ್ಸಿ ಟೈಂ). ಯೋನಿ ಪ್ರವೇಶಿಸಿದ ಶಿಶ್ನವು ವೀರ್ಯ ಸ್ಖಲಿಸಲು ತೆಗೆದುಕೊಳ್ಳುವ ಅವಧಿಯನ್ನು ಪರಿಗಣಿಸಿ ಶೀಘ್ರ ಸ್ಖಲನದ ಲೆಕ್ಕಾಚಾರ ಹಾಕಲಾಗುತ್ತದೆ. ಸ್ಖಲನಕ್ಕೂ ಮೊದಲು ಯೋನಿಯೊಳಗೆ ಶಿಶ್ನ ಎಷ್ಟು ಅವಧಿ ಇರುತ್ತದೆ ಎಂಬುದನ್ನೂ ಗಮನಿಸಬೇಕಾಗುತ್ತದೆ.  ಸಂಗಾತಿಯನ್ನು ತೃಪ್ತಿಪಡಿಸಲು ಶೀಘ್ರ ಸ್ಖಲನ ಸಮಸ್ಯೆ ಪರಿಹರಿಸಿಕೊಳ್ಳುವುದು ಅಗತ್ಯ. ಸಂಭೋಗದ ಅವಧಿ ಹೆಚ್ಚಿದಷ್ಟೂ ತೃಪ್ತಿಯೂ ಹೆಚ್ಚುತ್ತದೆ. ಸಂಭೋಗದ ಅವಧಿಯು ಪುರುಷ ಮತ್ತು ಆತನ ಸಂಗಾತಿಯ ಮೇಲೆ ಅವಲಂಬಿತವಾಗಿರುತ್ತದೆ. ಜೋಡಿಯಿಂದ ಜೋಡಿಗೆ ಇದು ವ್ಯತ್ಯಾಸವಾಗುತ್ತದೆ. ಸಂಭೋಗದ ಅವಧಿ ಲೆಕ್ಕ ಹಾಕುವಾಗ ಅಂತಿಮವಾಗಿ ದಂಪತಿಯ ತೃಪ್ತಿಯನ್ನೇ ಮುಖ್ಯ ಎಂದುಕೊಳ್ಳಬೇಕು.
 
ಶೀಘ್ರ ಸ್ಖಲನದಲ್ಲಿ ಎಷ್ಟು ವಿಧ?
ಜೀವನಪೂರ್ತಿ: ಮೊದಲ ಸಂಭೋಗದಿಂದಲೇ ಇದು ಅರಿವಿಗೆ ಬರುತ್ತದೆ. ವ್ಯಕ್ತಿ ಜೀವನಪೂರ್ತಿ ಈ ಸಮಸ್ಯೆಯನ್ನು ಅನುಭವಿಸುತ್ತಾನೆ
ಕ್ರಮೇಣ ಬಂದಿದ್ದು: ಲೈಂಗಿಕ ಜೀವನದ ಆರಂಭದ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ತೃಪ್ತಿ ಅನುಭವಿಸುತ್ತಿದ್ದವರು ಏಕಾಏಕಿ ಸ್ಖಲನದ ಸಮಸ್ಯೆಗಳಿಂದ ಕಂಗಾಲಾಗುತ್ತಾರೆ.
 
ನನಗೆ ಶೀಘ್ರ ಸ್ಖಲನದ ಸಮಸ್ಯೆ ಇದೆ. ಸಂಭೋಗದ ಸಂದರ್ಭ ಯೋನಿ ಪ್ರವೇಶಿಸಿದ ಎರಡೇ ನಿಮಿಷದಲ್ಲಿ ನನ್ನ ಶಿಶ್ನ ಗಡುಸುತನ ಕಳೆದುಕೊಳ್ಳುತ್ತದೆ. ಈ ಸಮಸ್ಯೆಗೆ ಪರಿಹಾರವಿದೆಯೇ?
ಶೀಘ್ರ ಸ್ಖಲನ ವಿಶ್ವದಾದ್ಯಂತ ಪುರುಷರು ಅನುಭವಿಸುವ ಸಾಮಾನ್ಯ ಸಮಸ್ಯೆ. ಇದು ಅನೇಕ ದಂಪತಿಗಳ ಸಂತೃಪ್ತಿಯನ್ನು ಕಿತ್ತುಕೊಂಡಿದೆ. ದಾಂಪತ್ಯದ ಹೊರಗೆ ಸುಖ ಅನ್ವೇಷಿಸುವ ಮನೋಭಾವ ಬೆಳೆಸುವುದು ಮತ್ತು ವಿಚ್ಛೇದನಕ್ಕೂ ಇದು ಮುಖ್ಯ ಕಾರಣ ಎನಿಸಿದೆ. ಈ ಸಮಸ್ಯೆ ಅನುಭವಿಸುತ್ತಿರುವ ಅನೇಕ ಪುರುಷರು ಯಾರ ಸಹಾಯವನ್ನೂ ಪಡೆಯುವುದಿಲ್ಲ. ಅದರ ಬದಲು ಸ್ವ ಕನಿಕರ ಮತ್ತು ಹತಾಶ ಮನಃಸ್ಥಿತಿ ಬೆಳೆಕೊಳ್ಳುತ್ತಾರೆ.
 
ಕೆಲ ಪುರುಷರು ಸಮಸ್ಯೆ ಪರಿಹರಿಸಿಕೊಳ್ಳಲು ಮುಂದಾಗುತ್ತಾರಾದರೂ ತಪ್ಪು ಚಿಕಿತ್ಸಾ ಕ್ರಮಗಳಿಗೆ ಮೊರೆ ಹೋಗುತ್ತರೆ. ಇಂಥ ಚಿಕಿತ್ಸೆಗಳು ತಾತ್ಕಾಲಿಕ ಪರಿಹಾರ ಒದಗಿಸುತ್ತವೆ, ಆದರೆ ನಿಜವಾದ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ನಿಜವಾದ ಸಮಸ್ಯೆ ಎನಿಸಿದ ‘ಲೈಂಗಿಕ ತೃಪ್ತಿ’ಯನ್ನು ಇಂಥ ಚಿಕಿತ್ಸಾ ಕ್ರಮಗಳಿಂದ ಪಡೆಯಲು ಸಾಧ್ಯವಿಲ್ಲ.
 
ಶೀಘ್ರ ಸ್ಖಲನದ ನಿಜವಾದ ಕಾರಣ ಅರಿಯುವುದು ಮುಖ್ಯ. ಇದರ ನಿಜವಾದ ಕಾರಣ ದೇಹದ ಆಳದಲ್ಲಿ ಅಡಗಿರುತ್ತದೆ. ಇದರಿಂದಾಗಿ ಹಾರ್ಮೋನ್‌ಗಳ ಸ್ರವಿಸುವಿಕೆಯಲ್ಲಿ ಏರುಪೇರಾಗುವುದು ಮತ್ತು ಮಾನಸಿಕ ನಿಯಂತ್ರಣ ತಪ್ಪುವುದು ಕಂಡು ಬರುತ್ತದೆ. ದೈಹಿಕ ಏರುಪೇರನ್ನು ನಿಯಂತ್ರಿಸುವುದು ಶೀಘ್ರ ಸ್ಖಲನಕ್ಕೆ ಇರುವ ಅತಿ ಮುಖ್ಯ ವೈಜ್ಞಾನಿಕ ಮತ್ತು ಶಾಶ್ವತ ಚಿಕಿತ್ಸೆಯಾಗಿದೆ. 
(ಮುಂದಿನ ವಾರ: ಶೀಘ್ರ ಸ್ಖಲನದ ಕಾರಣಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT