ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನುಗ್ಗೇಕಾಯಿ’ ಹಾಡಿಗೆ ಹೆಜ್ಜೆ

Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ

ಆ್ಯಡ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಪ್ರೀತಂ ಎಸ್ ಹೆಗ್ಡೆ (ಅನ್ನು) ಕಥೆ ಬರೆದು ನಿರ್ಮಿಸುತ್ತಿರುವ ‘ನುಗ್ಗೇಕಾಯಿ’ ಚಿತ್ರದ ಹಾಡಿಗೆ ಮಂಗಳೂರಿನ ರಾಯಲ್ ಗಾರ್ಡನ್‌ನಲ್ಲಿ ನಾಯಕ ನಟ ಮಧುಸೂದನ್, ನಾಯಕ ನಟಿ ಕ್ರಿಸ್ಟಿನಾ ಜಾಯ್ ಹೆಜ್ಜೆ ಹಾಕಿದ್ದಾರೆ.

‘ನುಗ್ಗೇಕಾಯಿ ತಿನ್ನು ಆಸೆಗೆ ಸ್ವರ್ಗ ಸುಖವು ನಿನ್ನ ಕೈಸೆರೆ, ಚಿಂತೆ ಯಾಕೋ ಒಂದು ಬಾರಿ ಸೊಂಟ ಬಳಸು’ ಎಂಬುದು ಹಾಡು.

ಈಗಾಗಲೇ ಮಾತಿನ ಭಾಗದ ಜೊತೆಗೆ ಐದು ಹಾಡುಗಳ ಚಿತ್ರೀಕರಣ ಕೂಡಾ ಮುಕ್ತಾಯವಾಗಿದೆ. ಇನ್ನು ಐದು ದಿನಗಳ ಚಿತ್ರೀಕರಣ ನಡೆದರೆ ಸಿನಿಮಾ ಪೂರ್ತಿ ಯಾದಂತೆ ಎಂದಿದ್ದಾರೆ,  ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ ಎ.ವೇಣು ಗೋಪಾಲ್.

ಸುರೇಶ್ ಬಿ.ಎಸ್.ವಿ. ಸಾಹಿತ್ಯ ಮತ್ತು ಸಂಗೀತ, ಸೂರ್ಯಕಾಂತ್ ಹೊನ್ನಳ್ಳಿ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಮಾದೇಶ್ ಮುತ್ತಪ್ಪ ಸಂಭಾಷಣೆ, ಸಹ ನಿರ್ದೇಶನ, ಹೈಟ್‍ಮಂಜು, ಕಂಬಿರಾಜು ನೃತ್ಯ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನವಿದೆ. ಮಧುಸೂದನ್, ಎಸ್ತಾರ್‌ ನರೋನ, ಸುಚೇಂದ್ರಪ್ರಸಾದ್, ಕ್ರಿಸ್ಟಿನಾ ಜಾಯ್, ದತ್ತಣ್ಣ, ಬ್ಯಾಂಕ್ ಜನಾರ್ಧನ್, ಬಿರಾದರ, ಪೂಜಾ ಶೆಟ್ಟಿ, ಜನಿಫರ್ ಆಂಟನಿ, ರಂಜಿತ್, ಉದಿತ್ ಪ್ರಸಾದ್, ಮುಂತಾದವರು ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT