ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಎಪಿಎಂಸಿ ಚುನಾವಣೆಯಲ್ಲಿ ನಕಲಿ ಮತದಾನ ಮಾಡಿದ ಆರೋಪ
Last Updated 14 ಜನವರಿ 2017, 5:40 IST
ಅಕ್ಷರ ಗಾತ್ರ
ತರೀಕೆರೆ: ಎಪಿಎಂಸಿ ಚುನಾವಣೆಯ ಮತದಾನದ ವೇಳೆ ಶಿವನಿ ಕ್ಷೇತ್ರದ ಮತ ಗಟ್ಟೆಗೆ ಅಕ್ರಮವಾಗಿ ಪ್ರವೇಶಿಸಿ ನಕಲಿ ಮತದಾನ ಮಾಡಿದ ಆರೋಪ ಹೊಂದಿ ರುವ ಶಾಸಕ ಹಾಗೂ ಅವರ ಬೆಂಬಲಿಗ ರನ್ನು ಕೂಡಲೇ ಬಂಧಿಸುವಂತೆ  ಒತ್ತಾ ಯಿಸಿ ಪಟ್ಟಣದಲ್ಲಿ ಶುಕ್ರವಾರ  ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸಿದರು.
 
ಪಟ್ಟಣದ ಸಾಲುಮರದಮ್ಮ ದೇವ ಸ್ಥಾನದಿಂದ ಹೊರಟ ಪ್ರತಿಭಟನಕಾರರು ಪೊಲೀಸ್ ಠಾಣೆ ತಲುಪಿ, ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಬಂದು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
 
ಮಾಜಿ ಶಾಸಕ ಟಿ.ಎಚ್.ಶಿವ ಶಂಕರಪ್ಪ ಮಾತನಾಡಿ, ಶಾಸಕರು ತಮ್ಮ ಕ್ಷೇತ್ರದಲ್ಲಿ ಜನಮನ್ನಣೆಯನ್ನು ಕಳೆದು ಕೊಂಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಆದ ಹಿನ್ನಡೆಯಿಂದ ಹತಾಶರಾಗಿ ಮತಗಟ್ಟೆಗಳಿಗೆ ನುಗ್ಗಿ ಅಕ್ರಮ ಮತದಾನ ಮಾಡುವ ಮೂಲಕ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೊರ ಟಿದ್ದಾರೆ ಎಂದು ಆರೋಪಿಸಿದರು.
 
ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೆ ಯಾವ ಶಾಸಕರು ಮತದಾನದಲ್ಲಿ ಅಕ್ರಮವೆಸಗಿಲ್ಲ. ಶಾಸಕ ಜಿ.ಎಚ್.ಶ್ರೀನಿವಾಸ್ ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ. ಬೇರೆ ಪಕ್ಷಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾ ಗುತ್ತಿದೆ. ಅದಕ್ಕೆ ಕಾರಣರಾಗಿರುವ ಶಾಸಕರನ್ನು ಬಂಧಿಸಬೇಕೆಂದು ಅವರು ಒತ್ತಾಯಿಸಿದರು.
 
ಎಂ.ಎ.ಡಿ.ಬಿ ಮಾಜಿ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಮತಗಟ್ಟೆಗೆ ಅಕ್ರಮವಾಗಿ ಪ್ರವೇಶ ಮಾಡಿ ನಕಲಿ ಮತದಾನ ಮಾಡಿರುವ ಶಾಸಕ ಜಿ.ಎಚ್.ಶ್ರೀನಿವಾಸ್ ಹಾಗೂ ಬೆಂಬಲಿ ಗರನ್ನು ಪೊಲೀಸ್ ಅಧಿಕಾರಿಗಳು ರಕ್ಷಿಸುತ್ತಿದ್ದಾರೆ. ತಾಲ್ಲೂಕಿನ ದೋರ ನಾಳು, ಗಡಿಹಳ್ಳಿ, ಶಿವನಿ ಹಾಗು ಸಿಡುಕನಹಳ್ಳಿ ಮತಗಟ್ಟೆಗಳಲ್ಲೂ ಅಕ್ರಮ ನಡೆದಿರುವ ಅನುಮಾನವಿದೆ ಎಂದು ಆರೋಪಿಸಿದರು.
 
ಮುಖಂಡ ಎನ್.ರಾಜು ಮಾತ ನಾಡಿ, ಶಾಸಕರು ಹಾಗೂ ಅವರ ಕುಟುಂಬದ ಸದಸ್ಯರು ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಶಾಸಕರ ದುರಾಡಳಿತದ ವಿರುದ್ಧ ತಾಲ್ಲೂಕಿನಾ ದ್ಯಂತ ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
 
ಈ ಸಂದರ್ಭ ಪ್ರತಿಭಟನಾನಿ ರತರೊಂದಿಗೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ದೂರವಾಣಿಯಲ್ಲಿ ಮಾತನಾಡಿ, ಸದ್ಯದಲ್ಲಿ ಪಟ್ಟಣಕ್ಕೆ ಭೇಟಿ ನೀಡಿ ಪ್ರತಿಭಟಿಸುತ್ತಿರುವ ಮುಖಂಡ ರೊಂದಿಗೆ ಪ್ರಕರಣದ ಬಗ್ಗೆ ಚರ್ಚಿಸಲಾಗುವುದು. ಚುನಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ತರಿಸಿ ಪರಿಶೀಲಿಸಲಾಗುತ್ತಿದೆ. ಪ್ರತಿಭಟ ನೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಮನವಿ ಮಾಡಿದ ಬಳಿಕ ಪ್ರತಿಭಟನೆ ಯನ್ನು ಕೈಬಿಡಲಾಯಿತು.
 
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೆಶಕ ಟಿ.ಎಲ್.ರಮೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಲೋಕೇಶ್, ಪುರಸಭೆ ಮಾಜಿ ಸದಸ್ಯರಾದ ಟಿ.ಎಲ್. ಕೃಷ್ಣ ಮೂರ್ತಿ, ಟಿ.ಎಂ.ಭೋಜರಾಜ್, ಮುಖಂಡರಾದ ಟಿ.ಡಿ.ಆರ್. ಬಾಬು, ಟಿ.ವಿ.ಜಯ್ಯಣ್ಣ, ಟಿ.ಹೆಚ್. ಮಂಜು ನಾಥ್, ರಮೇಶ್ ಇತರರು ಇದ್ದರು.
 
**
ಶಾಸಕರ ಬಂಧನಕ್ಕೆ ಬಿಜೆಪಿ ಗಡುವು
ತರೀಕೆರೆ: ಗುರುವಾರ ನಡೆದ ಎಪಿ ಎಂಸಿ ಚುನಾವಣೆಯ ಮತದಾನದ ವೇಳೆ ಶಿವನಿ ಕ್ಷೇತ್ರದ ಮತಘಟ್ಟೆಗೆ ಅಕ್ರಮವಾಗಿ ಪ್ರವೇಶಿಸಿ ನಕಲಿ ಮತದಾನ ಮಾಡಿದ ಆರೋಪ ಹೊಂದಿರುವ ಶಾಸಕ ಜಿ.ಎಚ್. ಶ್ರೀನಿವಾಸ್ ಹಾಗೂ ಬೆಂಬಲಿಗರನ್ನು ಭಾನುವಾರದೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಸೋಮವಾರ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ರಸ್ತೆ ತಡೆ ಸೇರಿದಂತೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಡಿ.ಎಸ್.ಸುರೇಶ್ ಎಚ್ಚರಿಸಿದರು.
 
ಅವರು ಶುಕ್ರವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮತಗಟ್ಟೆಗೆ ನುಗ್ಗಿ 51 ಬ್ಯಾಲೆಟ್ ಪತ್ರಗಳನ್ನು ಚುನಾವಣಾಧಿಕಾರಿಗಳಿಂದ ಕಸಿದುಕೊಂಡು ಶಾಸಕರು ತನ್ನಬೆಂಬಲಿಗರೊಂದಿಗೆ ಅಕ್ರಮ ಮತದಾನ ಮಾಡಿರುವ ಪ್ರಕರಣ ರಾಜ್ಯದಲ್ಲಿ ಪ್ರಥಮವಾಗಿದೆ. ಇದರಿಂದ ಕ್ಷೇತ್ರದ ಜನತೆಯ ಗೌರವಕ್ಕೆ ಧಕ್ಕೆ ಬಂದಿದೆ. ಶಾಸಕರು ಪ್ರಜಾಪ್ರಭುತ್ವದ ಆಶಯಗಳ ಹತ್ಯೆ ನಡೆಸಿದ್ದಾರೆ. ಅವರಿಗೆ ಶಾಸಕರಾಗಿ ಮುಂದುವರೆಯಲು ನೈತಿಕತೆ ಇಲ್ಲದ ಕಾರಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
 
ಮತದಾನ ನಡೆಯುವ ಕೇಂದ್ರದಲ್ಲಿ ಶಾಸಕರನ್ನು ಒಳಬಿಟ್ಟಿರುವ ಬಗ್ಗೆ ಅನುಮಾನಗಳಿದ್ದು, ಚುನಾವಣೆಯಲ್ಲಿ ಭಾಗವಹಿಸಿದ್ದ ಎಲ್ಲ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು. ತಾಲ್ಲೂಕಿನ ಸ್ಥಿತಿಯನ್ನು  ಶಾಸಕರು ಹಿಂದಿನ ಬಿಹಾರ ರಾಜ್ಯದ ಪರಿಸ್ಥಿತಿಗೆ ತಳ್ಳಿದ್ದಾರೆ. ವೀಕ್ಷಣೆಗಾಗಿ ಶಾಸಕರು ಮತಗಟ್ಟೆಗೆ ಬಂದಿದ್ದಾರೆ ಎಂದು ಉತ್ತರ ನೀಡುವ ತಹಶೀಲ್ದಾರರು, ‘ಶಾಸಕರೇನು ಚುನಾವಣಾ ಅಧಿಕಾರಿಯೇ?’ ಎಂಬುದನ್ನು ಖಚಿತಪಡಿಸಬೇಕೆಂದು ಪ್ರಶ್ನಿಸಿದರು.
 
ತಾಲೂಕು ಬಿಜೆಪಿ ಅಧ್ಯಕ್ಷ ಎಸ್.ಬಿ.ಆನಂದಪ್ಪ,  ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಆನಂದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ವಸಂತಕುಮಾರ್, ಮುಖಂಡರಾದ ಲಕ್ಕವಳ್ಳಿ ರಮೇಶ್, ಸಂಜೀವ್ ಕುಮಾರ್, ಶಾಂತರಾಜ್, ಸುಧಾಕರ್, ಶಿವಮೂರ್ತಿ ಹಾಗೂ ಇತರರು ಇದ್ದರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT