ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ವಿಶ್ವ ಗುರುವಿನ ಸ್ಥಾನಕ್ಕೆ ಸನ್ನದ್ಧ’

ಫಿಲೋಮಿನಾ: ಕೌಶಲ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರದ ಉದ್ಘಾಟನೆ
Last Updated 14 ಜನವರಿ 2017, 5:43 IST
ಅಕ್ಷರ ಗಾತ್ರ
ಪುತ್ತೂರು: ಆರ್ಥಿಕ ಶುದ್ಧೀಕರಣ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿ ಮಾನದ ಬದುಕನ್ನು ಹೊಂದುವ ಮೂಲಕ ಭಾರತವು ವಿಶ್ವ ಗುರುವಿನ ಸ್ಥಾನಮಾನ ಪಡೆಯಲು ಸನ್ನದ್ಧವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
 
ಇಲ್ಲಿನ ಸಂತ ಫಿಲೋಮಿನಾ ಕಾಲೇ ಜಿನಲ್ಲಿ  ಭಾರತ ಸರ್ಕಾರದ ವಿನೂತನ ಯೋಜನೆಯಡಿಯಲ್ಲಿ ಆರಂಭಿಸಲಾದ ಕೌಶಲ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರದ ಉದ್ಘಾಟನೆ ಮತ್ತು ಎಲೆ ಕ್ಟ್ರಾನಿಕ್ ಕೌಶಲ ತರಬೇತಿ ಕೇಂದ್ರದ ಜಾರಿ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು. 
 
ದೇಶವು ತನ್ನ ಒಟ್ಟು ಜನಸಂಖ್ಯೆ ಯಲ್ಲಿ ಶೇ 50ಕ್ಕೂ ಮಿಕ್ಕಿ ಯುವಜನ ಸಂಪತ್ತನ್ನು ಹೊಂದಿದೆ. ಇಂತಹ ಅಮೂಲ್ಯವಾದ ಮಾನವ ಸಂಪತ್ತಿನ ಸಮರ್ಪಕ ಬಳಕೆ ದೇಶದ ಆರ್ಥಿಕ ಪ್ರಗ ತಿಗೆ ಉಪಯೋಗವಾಗಬೇಕೆಂಬ ಸದು ದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗ ಸೃಷ್ಟಿ ಮತ್ತು ಕೌಶಲ ವೃದ್ಧಿಗೊಳಿಸುವ ಕ್ರಾಂತಿಕಾರಿ ಯೋಜನೆ ಗಳನ್ನು ಜಾರಿಗೊಳಿಸಿದ್ದಾರೆ ಎಂದರು.
 
ಕೇಂದ್ರದ ಐಟಿ ಮತ್ತು ಎಲೆಕ್ಟ್ರಾನಿಕ್ ಸೆಕ್ಟರ್‌ನ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಡಾ. ವಿಜಯ ಕುಮಾರ್ ಎಲ್. ಅವರು ಉದ್ಘಾಟಿಸಿದರು.   ಕೇಂದ್ರ ಸರ್ಕಾರ ಯುವಜನಾಂಗವನ್ನು ಗಮನದಲ್ಲಿಟ್ಟು ಕೊಂಡು ಹಲವಾರು ರೀತಿಯ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಅಗತ್ಯವಿ ರುವ ತರಬೇತಿಯನ್ನು ನೀಡಲು ತರ ಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
 
ಪ್ರಧಾನ ಮಂತ್ರಿ ಜನ್ ಔಷಧ ಯೋಜನೆಯ ಮಹಾನಿರ್ದೇಶಕ ರೋಹಿತ್ ಮೆಹ್ರಾ, ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕ ಆಲ್ಫ್ರೆಡ್ ಜೆ ಪಿಂಟೊ, ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ  ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮತ್ತು ಬಿಎಸ್ಎಸ್ ನೀತಿ ಆಯೋಗದ ಜಿಲ್ಲಾಧ್ಯಕ್ಷ ಡಾ. ಅನಿಲಾ ದೀಪಕ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿದ್ದರು. 
 
ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೊ ನೊರೊನ್ಹ  ಸ್ವಾಗತಿಸಿದರು. ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಗಣೇಶ ಭಟ್ ನಿರೂಪಿಸಿದರು. 
 
**
ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ ಕೌಶಲ ತರಬೇತಿ ಕೇಂದ್ರವನ್ನು ಜಾರಿಗೊಳಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದೆ
-ಶ್ರೀನಿವಾಸ್ ಎ ಎನ್.
ಸ್ಕಿಲ್ ಕೌನ್ಸಿಲ್ ಅಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT