ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹ ತೋರದ ರೈತರು: ಶೇ 46.93 ಮತದಾನ

ಉತ್ಸಾಹ ತೋರದ ರೈತರು: ಶೇ 46.93 ಮತದಾನ
Last Updated 14 ಜನವರಿ 2017, 9:27 IST
ಅಕ್ಷರ ಗಾತ್ರ
ಸುರಪುರ: ಗುರುವಾರ ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿ ಎಂಸಿ) ಚುನಾವಣೆಯ ಮತದಾನ ನೀರ ಸವಾಗಿತ್ತು. ಕಳೆದ ಸಾರ್ವತ್ರಿಕ ಚುನಾ ವಣೆಯಲ್ಲಿ ಶೇ 60 ಹೆಚ್ಚು ಮತ ದಾನವಾಗಿತ್ತು. ಆದರೆ, ಎಪಿಎಂಸಿ ಚುನಾ ವಣೆಯಲ್ಲಿ ಶೇ 46.93 ಮತದಾನವಾಗಿದೆ.
 
ನವೆಂಬರ್‌ 22ಕ್ಕೆ ಎಪಿಎಂಸಿ ಚುನಾವಣೆ ನಿಗದಿಯಾಗಿತ್ತು. ಈ ವೇಳೆ ಅಭ್ಯ ರ್ಥಿಗಳು ಭರ್ಜರಿ ಪ್ರಚಾರ ಮಾಡಿ ದ್ದರು. ಅಲ್ಲದೆ, ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದರು. ನಂತರ ಕೋರ್ಟ್‌ ಆದೇಶದಂತೆ ಚುನಾವಣೆಯನ್ನು ಮುಂಡೂ ಡಲಾಯಿತು. ಇದರಿಂದ ಅಭ್ಯ ರ್ಥಿಗಳು ನಿರಾಸೆ ಅನುಭವಿಸಿದರು.
 
ಮತ್ತೆ ಅನಿವಾರ್ಯವಾಗಿ ಅಭ್ಯ ರ್ಥಿಗಳು ನಾಮಪತ್ರ ಸಲ್ಲಿ ಸುವಂತಾಯಿತು. ಆಗ ಬಹುತೇಕ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಲಿಲ್ಲ. ಆಯಾ ಪಕ್ಷದ ಮುಖಂಡ ರ ಒತ್ತಾಯಕ್ಕೆ ಮಣಿದು ಸ್ಪರ್ಧಿ ಸಿದ ಅಭ್ಯರ್ಥಿಗಳಿಗೆ ಮೊದಲಿನ ಉತ್ಸಾಹ ಇರಲಿಲ್ಲ.
 
ಬಹುತೇಕ ಬಡ ಕೃಷಿಕರು ಗುಳೆ ಹೋಗಿದ್ದಾರೆ. ಬಹಳಷ್ಟು ಮತದಾರರು ಆಯಾ ಗ್ರಾಮದಲ್ಲಿ ವಾಸಿಸದೆ ನಗರ ಪ್ರದೇಶಗಳಲ್ಲಿ ಇರುತ್ತಾರೆ. ಇಂತಹ ಮತ ದಾರರನ್ನು ಕರೆದು ತರುವ ಉತ್ಸಾಹ ಅಭ್ಯರ್ಥಿಗಳು ತೋರಲಿಲ್ಲ. 
 
ಈ ಎಲ್ಲ ಕಾರಣಕ್ಕೆ ಮತದಾನ ಪ್ರಮಾಣ ಕಡಿಮೆಯಾಗಿದೆ ಎನ್ನುವ ಅಭಿಪ್ರಾಯ ವಿವಿಧ ಪಕ್ಷಗಳ ಮುಖಂಡರದ್ದಾಗಿದೆ.
 
ಒಟ್ಟು 80,837 ಕೃಷಿಕರು ಮತದಾನದ ಹಕ್ಕನ್ನು ಹೊಂದಿದ್ದಾರೆ. ಅದರಲ್ಲಿ 66,144 ಪುರುಷ ಮತ್ತು 14,693 ಮಹಿಳಾ ಮತದಾರರಿದ್ದಾರೆ. ಅದರಲ್ಲಿ ಕೇವಲ 37,935 ಕೃಷಿಕರು ಮಾತ್ರ ಮತ ಚಲಾಯಿಸಿದ್ದಾರೆ. ಅದರಲ್ಲಿ 30,967 ಪುರುಷ ಮತ್ತು 6,968 ಮಹಿಳಾ ಮತದಾರರು ಸೇರಿದ್ದಾರೆ.
 
ಅತಿ ಹೆಚ್ಚು ಮತದಾನ ವರ್ತಕರ ಕ್ಷೇತ್ರದ ಮತಗಟ್ಟೆ ಸಂಖ್ಯೆ 162 ಕೆಂಭಾವಿಯಲ್ಲಿ ಶೇ. 90.52 ಆಗಿದ್ದರೆ, ಅತಿ ಕಡಿಮೆ ಮತದಾನ ಮತಗಟ್ಟೆ ಸಂಖ್ಯೆ 46 ಸರ್ಕಾರಿ ಹಿರಿಯ ಪ್ರಾಥಮಿಕ ಸಾಲೆ ಮಾಲಗತ್ತಿ ವ್ಯವಸಾಯಗಾರರ ಕ್ಷೇತ್ರದಲ್ಲಿ ಶೇ. 32.57 ಆಗಿದೆ.
 
ಒಟ್ಟು 162 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅದರಲ್ಲಿ ವರ್ತಕರ ಕ್ಷೇತ್ರದ 3 ಮತಟ್ಟೆಗಳಾದ ಎಪಿಎಂಸಿ ಕಚೇರಿ ಖಾನಾಪುರ ಎಸ್‌ಎಚ್‌ (ಶೇ. 80), ವಿಶೇಷ ತಹಶೀಲ್ದಾರ್‌ ಕಚೇರಿ ಹುಣಸಗಿ (ಶೇ. 86.96), ಉಪ ತಹಶೀಲ್ದಾರ್‌ ಕಚೇರಿ ಕೆಂಭಾವಿ (ಶೇ. 90.52) ಹೆಚ್ಚು ಮತದಾನವಾಗಿದೆ.
 
ಒಟ್ಟು 14 ಕ್ಷೇತ್ರಗಳಲ್ಲಿ ಕೆಂಭಾವಿ ಕ್ಷೇತ್ರಕ್ಕೆ ತಡೆಯಾಜ್ಞೆ ಇದೆ. ಟಿಎಪಿಸಿಎಂಎಸ್‌ ಕ್ಷೇತ್ರದಿಂದ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರದಿಂದ ತಲಾ ಒಬ್ಬರು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೂವರು ನಾಮನಿರ್ದೇಶಿತ ಸದಸ್ಯರನ್ನು ನೇಮಿಸುವ ಅಧಿಕಾರ ಕಾಂಗ್ರೆಸ್‌ ಸರ್ಕಾರಕ್ಕೆ ಇದೆ. ಹೀಗಾಗಿ ಸಮಿತಿಯ ಒಟ್ಟು ಸದಸ್ಯರ ಸಂಖ್ಯೆ 17 ಆಗುತ್ತದೆ. 
 
9 ಸದಸ್ಯರನ್ನು ಹೊಂದಿದ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ. ಮೂವರು ನಾಮ ನಿರ್ದೇಶಿತ ಸದಸ್ಯರೂ ಸೇರಿದಂತೆ ಕಾಂಗ್ರೆಸ್‌ನ 5 ಸದಸ್ಯರು ಇರುವುದರಿಂದ ಆ ಪಕ್ಷ ಇನ್ನು ಕೇವಲ 4 ಕ್ಷೇತ್ರಗಳನ್ನು ಗೆದ್ದುಕೊಂಡರೆ ಸಾಕು ಅಧಿಕಾರ ವಹಿಸಿಕೊಳ್ಳುತ್ತದೆ. ಬಿಜೆಪಿಗೆ ಕನಿಷ್ಠ 9 ಕ್ಷೇತ್ರಗಳನ್ನು ಗೆಲ್ಲುವ ಅನಿವಾರ್ಯತೆ ಇದೆ.
 
ಶನಿವಾರ ನಗರದ ಪ್ರಭು ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಮತ ಏಣಿಕೆ ನಡೆಯಲಿದೆ. 11 ಕ್ಷೇತ್ರಗಳ 22 ಅಭ್ಯರ್ಥಿಗಳ ಭವಿಷ್ಯ ಸಂಜೆ ವೇಳೆಗೆ ಹೊರಬೀಳಲಿದೆ. ಮಧ್ಯಾಹ್ನ 4 ಗಂಟೆಗೆ ಮೊದಲ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
 
ಲೆಕ್ಕಾಚಾರ: ತಮ್ಮ ತಮ್ಮ ಅಭ್ಯರ್ಥಿಗಳು ಇಷ್ಟಿಷ್ಟು ಮತಗಳಿಂದ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ಎಲ್ಲೆಡೆ ಕಂಡು ಬರುತ್ತಿವೆ. ಹೊಟೇಲ್‌ಗಳು, ಮರದ ಕಟ್ಟೆ ಇತರ ಸ್ಥಳಗಳಲ್ಲಿ ಆಯಾ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.
 
ತಮ್ಮ ಅಭ್ಯರ್ಥಿಗಳು ಇಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬಾಜಿ ಕಟ್ಟುವುದು ಜೋರಾಗಿಯೇ ನಡೆದಿದೆ. ಸೋತರೆ ಒಂದಕ್ಕೆ ಎರಡರಷ್ಟು ಹಣ ಎಂಬ ಬಾಜಿಯೂ ನಡೆದಿದೆ. ನಮ್ಮ ಅಭ್ಯರ್ಥಿಗಳೆ ಗೆಲ್ಲುತ್ತಾರೆ, ಗೆದ್ದರೆ ಬಾಡೂಟ ಏರ್ಪಡಿಸಬೇಕು ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
–ಅಶೋಕ ಸಾಲವಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT