ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದರ ಆದರ್ಶ ಪಾಲನೆ:ಯುವಜನರಿಗೆ ಸಲಹೆ

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ, ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ
Last Updated 14 ಜನವರಿ 2017, 11:38 IST
ಅಕ್ಷರ ಗಾತ್ರ
ಆಳಂದ: ಯುವಕರು ದೇಶದ ಶಕ್ತಿ. ಉತ್ತಮ ಚಾರಿತ್ರ್ಯ ರೂಪಿಸಿಕೊಳ್ಳುವ ರೀತಿ ಅವರಿಗೆ ಶಿಕ್ಷಣ ದೊರೆಯಬೇಕು ಎಂದು ನವದೆಹಲಿ ರಾಮಕೃಷ್ಣ ಆಶ್ರಮದ ಸಂಪನ್ಮೂಲ ವ್ಯಕ್ತಿ ರಮೇಶ ಉಮರಾಣಿ ನುಡಿದರು.
 
ಪಟ್ಟಣದ ಜಯಪ್ರಕಾಶ ನಾರಾ ಯಣ ಪ್ರೌಢಶಾಲೆಯಲ್ಲಿ ಶುಕ್ರವಾರ ವಿವೇಕಾನಂದರ ಜಯಂತಿ ಪ್ರಯುಕ್ತ ವಿವೇಕ ಚಿಂತನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
 
ನಾವು ಪಡೆಯುವ ಶಿಕ್ಷಣ ನಮ್ಮಲ್ಲಿ ಶೃದ್ಧೆ, ಆತ್ಮವಿಶ್ವಾಸ, ಉತ್ಸಾಹ ಹಾಗೂ ಘನತೆ ಹೆಚ್ಚಿಸಲು ಕಾರಣವಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಆತ್ಮ ಸಾಕ್ಷಿ ಯನ್ನು ಜಾಗೃತಗೊಳಿಸಿದಾಗ ಮಾತ್ರ ಅವರಲ್ಲಿ ಸಮಾಜ ಉಪಕಾರಿ ಯಾದ ಗುಣ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
 
ಕಲಬುರ್ಗಿಯ ವಿವೇಕಾನಂದ ಆಶ್ರಮದ ಅಧ್ಯಕ್ಷ ಮಹೇಶ್ವರಾನಂದ ಸ್ವಾಮೀಜಿ ಮಾತನಾಡಿ, ಒಂದು ದೇಶ, ಭಾಷೆ, ಸಂಸ್ಕೃತಿ, ಆಚರಣೆ ಮತ್ತು ವಿಚಾರಗಳು ಸಹಿಸದಿರುವುದು ನಮ್ಮ ದೌರ್ಬಲ್ಯ. ಇದರಿಂದ ವ್ಯಕ್ತಿ–ವ್ಯಕ್ತಿ, ಸಮಾಜ ಮತ್ತು ರಾಷ್ಟ್ರಗಳ ನಡುವೆ ಸಂಘರ್ಷಕ್ಕೆ ದಾರಿಯಾಗುತ್ತವೆ. ಎಲ್ಲರೂ ಸಮನ್ವಯ ಭಾವದಿಂದ ಬಲಿಷ್ಠ ಭಾರತ ಕಟ್ಟಲು ಸಾಧ್ಯ ಎಂದರು.
 
ಸಂಸ್ಥೆ ಅಧ್ಯಕ್ಷ ಮಹಾದೇವಪ್ಪ ಪಾಟೀಲ, ಪ್ರಾಚಾರ್ಯ ಸಿದ್ದರಾಮ ಅಮರೆ, ಮುಖ್ಯ ಶಿಕ್ಷಕ ಎಲ್.ಎಸ್. ಬೀದಿ, ಬಸವರಾಜ ಕಡಗಂಚಿ, ಬಸವ ರಾಜ ಚೌಧುರಿ, ರಾಜಕುಮಾರ ಪವಾರ, ರಾಜಕುಮಾರ ಚಲವಾದಿ ಇದ್ದರು.
 
ಸರ್ಕಾರಿ ಕಾಲೇಜು: ಪಟ್ಟಣ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ವಿವೇಕ ಚಿಂತನಾ ಕಾರ್ಯ ನಡೆಯಿತು. ಮಹೇಶ್ವ ರಾನಂದ ಸ್ವಾಮೀಜಿ ಮಾತನಾಡಿ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅರಿಯುವ ಮೂಲಕ ಜೀವನದಲ್ಲಿ ಯಶಸ್ಸು ಮತ್ತು ಸಾರ್ಥಕತೆ ಪಡೆದುಕೊಳ್ಳಲು ತಿಳಿಸಿದರು. ರಮೇಶ ಉಮರಾಣಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ಜಗದೇವಿ ಸುರಗಾಳಿ, ಮುಖ್ಯ ಶಿಕ್ಷಕಿ ಪಾರ್ವತಿ ತೋಟದ, ಉಪನ್ಯಾಸಕರಾದ ಎಂ.ವಿ.ಪೊದ್ದಾರ, ಎಸ್.ವಿ.ಪೊದ್ದಾರ, ರಮೇಶ ಮಾಡಿ ಯಾಳಕರ, ರಾಮ ಚಂದ್ರ ಹಕ್ಕಿ, ಸುಭಾಶ್ಚಂದ್ರ, ಜ್ಞಾನೋಭಾ ಗಾಯಕ ವಾಡ, ಗಜಾನಂದ ಕುಂಬಾರ, ಸಿದ್ದಲಿಂಗ ನಂದೆಪ್ಪಗೊಳ್ಳ ಇದ್ದರು.
 
ತಾಡ ತೆಗನೂರು ವಿವೇಕಾನಂದ ಆಶ್ರಮ ಶಾಲೆಯ ವಿದ್ಯಾರ್ಥಿಗಳು ವಿವೇಕಾನಂದರ ವೇಷಭೂಷಣದಲ್ಲಿ ಅವರು ಚಿಕಾಗೋದ ವಿಶ್ವ ಸಮ್ಮೇ ಳನದಲ್ಲಿ ಮಾಡಿದ ಭಾಷಣ ವಾಚಿಸಿ ಗಮನ ಸೆಳೆದರು. ಅಂಧ ಕಲಾವಿದರು ಸ್ವಾಮಿ ವಿವೇಕಾನಂದರ ಜೀವನಗಾಥೆ ಸಾರುವ ಗೀತೆಗಳನ್ನು ಹಾಡಿ ದರು.ಶಾಲಾಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
 
ಚಿತ್ತಾಪುರ ವರದಿ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಇಡೀ ಜೀವನವೇ ಇಂದಿನ ಮತ್ತು ಮುಂದಿನ ಸಮಾಜಕ್ಕೆ, ಯುವ ಜನಾಂಗಕ್ಕೆ ದೊಡ್ಡ ಆದರ್ಶ. ವಿದ್ಯಾರ್ಥಿಗಳು ಜೀವನದಲ್ಲಿ ವಿವೇಕಾನಂದರ ಆದರ್ಶ, ತತ್ವ, ಸಿದ್ಧಾಂತ ಅಳವಡಿಸಿಕೊಳ್ಳಬೇಕು. ಯುವಕರು ಅವರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು ಎಂದು ಶಿಕ್ಷಕ ಬಾಬಾಸಾಹೇಬ ಸಾಳುಂಕೆ ಹೇಳಿದರು.
 
ತಾಲ್ಲೂಕಿನ ಶಹಾಬಾದ ನಗರದ ಹಿಂದಿ ಪ್ರೌಢ ಶಾಲೆಯಲ್ಲಿ ಗುರುವಾರ ಆಯೋಜಿಸಿದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಕಿಚ್ಚು ಮೂಡಿದಾಗ ಮಾತ್ರ ಭಾರತ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವೆಂದು ವಿವೇಕಾನಂದರು ನಂಬಿದ್ದರು ಎಂದರು.
 
ದೇಶದ ಸಂಸ್ಕೃತಿ, ಗೌರವವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಾಧಕ ವಿವೇಕಾನಂದರಲ್ಲಿ ಇದ್ದ ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ಈ ಮಣ್ಣಿನ ಬಗ್ಗೆ ಅವರಿಗಿದ್ದ ಧನ್ಯತಾ ಭಾವನೆ ಇಂದಿನ ಯುವಕರಲ್ಲಿ ಬೆಳೆಯಬೇಕಿದೆ. ಇಂದಿನ ಸಮಾಜದಲ್ಲಿ ನಾವು ಮತ್ತು ನಮ್ಮ ಕುಟುಂಬ ಚೆನ್ನಾಗಿದ್ದರೆ ಸಾಕು ಎಂಬ ಪ್ರವೃತ್ತಿ ವ್ಯಾಪಕವಾಗಿ ಬೆಳೆಯುತ್ತಿ ರುವುದು ವಿಪರ್ಯಾಸ ಎಂದು ವಿಷಾದಿ ಸಿದರು. 
 
ವಿವೇಕಾನಂದರು ಹಾಕಿದ ಮಾರ್ಗದಲ್ಲಿ ಹೆಜ್ಜೆಗಳನ್ನು ಹಾಕುತ್ತಾ, ಅವರ ತತ್ವಗಳನ್ನು ಪಾಲಿಸುತ್ತಾ ಯುವಕರು ಸಮಾಜಕ್ಕಾಗಿ ಬದುಕುವ, ದೇಶಕ್ಕಾಗಿ ದುಡಿಯುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ದೇಶದ ಚಿತ್ರಣ ಬದಲಿಸಬಹುದು ಎಂದರು. 
 
ನಂದಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಸುಧೀರ್ ಕುಲಕರ್ಣಿ ಮಾತನಾಡಿದರು. ಸಿಎ ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶು ಪಾಲ ರಾಜಕುಮಾರ ಬಾಸೂತ್ಕರ್, ಹಿಂದಿ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ದಮಯಂತಿ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಮೇಶ ಥಳಂಗೆ ಇದ್ದರು. 
 
ಶಿಕ್ಷಕಿ ರೋಸಲಿನ್ ನಿರೂಪಿಸಿದರು, ಸೋಹೆಲ್ ಪ್ರಾರ್ಥಿಸಿದರು, ಶಿಕ್ಷಕ ಮಲ್ಲಿನಾಥ ಪಾಟೀಲ ಸ್ವಾಗತಿಸಿದರು, ರಂಗನಾಥ ಹೊಸಮನಿ ವಂದಿಸಿದರು. ನಿರ್ಮಲಾ ಕುಲಕರ್ಣಿ, ಮಹೇಶ್ವರಿ ಗುಳಿಗಿ, ರಾಜೇಶ್ವರಿ. ಎಮ್, ಗೀತಾ.ಪಿ ಇದ್ದರು.
 
ಯುವಜನ ದಿನಾಚರಣೆ: ಯಾವುದೇ ಒಂದು ದೇಶದ ಅಭಿವೃದ್ಧಿ ಯಲ್ಲಿ ಯುವಕರ ಪಾತ್ರ ತುಂಬಾ ಪ್ರಮುಖ ವಾಗಿದೆ. ಇಡೀ ಯುವ ಸಮೂಹದ ಚೇತನಾ ಶಕ್ತಿಯಾದ ಸ್ವಾಮಿ ವಿವೇಕಾ ನಂದರ ಸಂದೇಶದಿಂದ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಪ್ರಭಾರ ಪ್ರಾಂಶುಪಾಲರಾದ ಜಯಶ್ರೀ ಹೊಟ್ಟಿ ಹೇಳಿದರು.
 
ತಾಲ್ಲೂಕಿನ ತೆಂಗಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ ಜಂಟಿಯಾಗಿ ಗುರುವಾರ ನಡೆದ ಯುವಕರ ಆದರ್ಶ ಮತ್ತು ಶಕ್ತಿಯಾ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ‘ಯುವಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ವಿವೇಕಾನಂದ ಅವರು ಧರ್ಮಕ್ಕೆ ಹೊಸ ಭಾಷ್ಯ ಬರೆದರು. ಅವರು ಶ್ರೇಷ್ಠ ಮಾನವತಾವಾದಿ ಹಾಗೂ ಶ್ರೇಷ್ಠ ತತ್ವಜ್ಞಾನಿಯಾಗಿದ್ದರು. ದೇಶದ ಪರಿವ ರ್ತನೆ ಮತ್ತು ಸದೃಢ ಭಾರತದ ನಿರ್ಮಾಣಕ್ಕೆ ಯುವಕರು ಸ್ವಾಮಿ  ವಿವೇಕಾನಂದರು ಹಾಕಿಕೊಟ್ಟ ಮಾರ್ಗ ದಲ್ಲಿ ಸಾಗಬೇಕು ಎಂದು ಹೇಳಿದರು.
 
ಮುಖ್ಯ ಶಿಕ್ಷಕ ರವೀಂದ್ರರೆಡ್ಡಿ ಶಿಕಾರಿ ಮಾತನಾಡಿ, ಸ್ವಾವಲಂಬನೆ ಜೀವನಕ್ಕೆ ವಿವೇಕಾನಂದರ ಸಿದ್ದಾಂತಗಳು ಮತ್ತು ಸಂದೇಶಗಳು ಯುವಕರಿಗೆ ಉತ್ತಮ ಮತ್ತು ಉನ್ನತ ಸೂತ್ರದಂತಿವೆ. ಜೀವನ ದಲ್ಲಿ ಉನ್ನತ ಸಾಧನೆ ಮಾಡಬೇಕೆಂಬ ಯುವಕರಿಗೆ ವಿವೇಕಾನಂದರು ಸದಾ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿಉಪನ್ಯಾಸಕರಾದ ಹಣಮಂತರಾವ ಬಿ.ಪಾಟೀಲ, ಸಿದ್ದಲಿಂಗ ಪೂಜಾರಿ, ವಸುಂಧರಾ ದೇಶಪಾಂಡೆ, ಜಗನ್ನಾಥ ಮುತ್ತಂಗಿ, ಶಿಕ್ಷಕರಾದ ಬಿ.ಜಿ.ಪಾಟೀಲ, ವಿಜಯಲಕ್ಷ್ಮೀ ಮೇಟಿ, ನರಸಪ್ಪಾ ಬೆಸ್ತಾ, ರಸೂಲ ಶಹಾ ಮೋಘಾ, ಸಲೀಮಾಜಿ ಉಪಸ್ಥಿತರಿದ್ದರು.
 
ಜೇವರ್ಗಿ ವರದಿ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪ ಗಳಾಗಿವೆ. ಆ ನಿಟ್ಟಿನಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ವಿವೇಕಾನಂದರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು. 
 
ಗುರುವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯ ಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
 
ಸುರೇಶರೆಡ್ಡಿ ಲಕಣಾಪುರ, ಸಿದ್ದು ಅಂಗಡಿ, ಶ್ರೀಶೈಲಗೌಡ ಕರಕಿಹಳ್ಳಿ, ಅಕ್ಬರಸಾಬ್ ಅಂಕಲಗಾ,ಕಿಶೆನರಾವ್ ಹೇಮನೂರ್,  ರಾಜು ರದ್ದೇವಾಡಗಿ, ಸಾಯಬಣ್ಣ ಗುತ್ತೇದಾರ್, ಪರಮೇಶ್ವರ ಬಿರಾಳ (ಕೆ), ಸಂಗಣ್ಣಗೌಡ ರದ್ದೇ ವಾಡಗಿ, ವಿರೇಶ ಪಾಟೀಲ್ ನರಿಬೋಳ, ಗೌಡಪ್ಪಗೌಡ ಅಮರಖೇಡ್, ನರೇಂದ್ರ ಕುಲಕರ್ಣಿ, ಮಹಾಂತೇಶ ಪವಾರ್, ತಿಪ್ಪಣ್ಣ ರಾಠೋಡ್ ಇದ್ದರು.
 
**
ಕಮಲಾಪುರ: ಪಂಜಿನ ಮೆರವಣಿಗೆ
ಕಮಲಾಪುರ: ಸ್ವಾಮಿ ವಿವೇಕಾ ನಂದ 154ನೇ ಜಯಂತಿ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಗುರುವಾರ  ಪಂಜಿನ ಮೆರವಣಿಗೆ ನಡೆಸಿದರು.
ಬಸವೇಶ್ವರ ವೃತ್ತದಿಂದ ಬಸ್‌ ನಿಲ್ದಾಣದವರೆಗೆ ನಡೆದ ಈ ಮೆರಣಿಗೆಯಲ್ಲಿ ಕಾರ್ಯಕರ್ತರು ವಿವೇಕಾನಂದರ ನುಡಿಗಟ್ಟುಗಳ ಫಲಕ ಹಿಡಿದು ಜೈಘೋಷ ಕೂಗಿದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಾಬುರಾವ ಚೌವಾಣ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಭಾಷ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರವೀಣ ತೆಗನೂರ, ಕಾರ್ಯದರ್ಶಿ ಸೂರ್ಯಕಾಂತ ಢೋಣಿ, ಮಂಡಲ ಅಧ್ಯಕ್ಷ ಶಶಿಧರ ಮಾಕಾ, ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ ದೋಶೆಟ್ಟಿ, ನಾಮದೇವ ಕರಹರಿ, ಶರಣು ಸಜ್ಜನ, ವಿನೋದ ರಾಠೋಡ, ಅಪ್ಪಶಾ ಬುರಲಿ, ಸಂತೋಷ ಹಾದಿಮನಿ, ದೇಶಮುಖ ಬಸವಣ, ಬಾಬುರಾವ ಜಾಲಳ್ಳಿ, ನಾಗರಾಜ ಹುಣಚಿಗಿಡ, ಚೇತನ ಸಾವಜಿ, ಚಂದ್ರಕಾಂತ ದೋಶಟ್ಟಿ ಇದ್ದರು.
 
**
ಸ್ವಾಮಿ ವಿವೇಕಾನಂದ ಜೀವನದ ತತ್ವ, ಆದರ್ಶ ಮತ್ತು ಸಂದೇಶವನ್ನು ರೂಢಿಸಿಕೊಳ್ಳುವ ಮೂಲಕ ಯುವಜನರು ಯಶಸ್ವಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.
-ಮಹೇಶ್ವರಾನಂದ ಸ್ವಾಮೀಜಿ
ಅಧ್ಯಕ್ಷ, ವಿವೇಕಾನಂದ ಆಶ್ರಮ
 
**
ಶ್ರೇಷ್ಠ ಮಾನವತಾವದಿ ವಿವೇಕಾನಂದರು ಸದೃಢ ಮತ್ತು ಸಶಕ್ತ ಭಾರತ ಕಟ್ಟುವ ಕನಸು ಕಂಡಿದ್ದರು. ಯುವಜನರ ಮೇಲೆ ಅಪಾರ ಆಶಾಭಾವನೆ ಹೊಂದಿದ್ದರು.
-ಜಯಶ್ರೀ ಹೊಟ
ಪ್ರಭಾರ ಪ್ರಾಂಶುಪಾಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT