ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಸ್ ಮ್ಯಾಜಿಕ್ ಬಳಕೆಗೆ ಸಲಹೆ

ಕಲಬುರ್ಗಿ: ಶ್ರೀನಿವಾಸ ಸರಡಗಿಯಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ
Last Updated 14 ಜನವರಿ 2017, 12:06 IST
ಅಕ್ಷರ ಗಾತ್ರ
ಕಲಬುರ್ಗಿ: ತೊಗರಿ ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಪಲ್ಸ್ ಮ್ಯಾಜಿಕ್ ಬಳಸಬೇಕು ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಜಿ.ಆರ್.ಪಾಟೀಲ ಹೇಳಿದರು.
 
ತಾಲ್ಲೂಕಿನ ಶ್ರೀನಿವಾಸ ಸರಡಗಿಯ ರೈತ ದೇವೇಂದ್ರಪ್ಪ ಬೇರಜಿ ಅವರ ಹೊಲದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ಅಂಗವಾಗಿ ‘ಪಲ್ಸ್ ಮ್ಯಾಜಿಕ್’ ಬಳಸಿದ ತೊಗರಿ ಬೆಳೆಯನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.
 
‘ಪಲ್ಸ್ ಮ್ಯಾಜಿಕ್‌ ಸೂಕ್ಷ್ಮ ಪೋಷಕಾಂಶ ಹಾಗೂ ಸಸ್ಯ ಪ್ರಚೋದಕಗಳನ್ನು ಒಳಗೊಂಡಿದ್ದು, ಹೂ ಉದುರುವಿಕೆಯನ್ನು ತಡೆಗಟ್ಟುತ್ತದೆ. ಅಲ್ಲದೆ, ಅವಶ್ಯಕತೆಗೆ ಅನುಗುಣವಾಗಿ ಪೋಷಕಾಂಶಗಳ ಪೂರೈಕೆ ಮಾಡುತ್ತದೆ. ಹೀಗಾಗಿ ತೊಗರಿ ಬೆಳೆಯಲ್ಲಿ ಪಲ್ಸ್ ಮ್ಯಾಜಿಕ್ ಬಳಸಬೇಕು ಎಂದು ಸಲಹೆ ನೀಡಿದರು.
 
ವಿಜ್ಞಾನಿ ಡಾ. ಎಂ.ಎ.ಬೆಳ್ಳಕ್ಕಿ ಅವರು, ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಬೆಳೆಗಳ ಬೇಡಿಕೆಗೆ ಅನುಣವಾಗಿ ರಸಗೊಬ್ಬರಗಳ ಪೂರೈಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.
 
ಡಾ.ಮಂಜುನಾಥ ಎನ್. ಅವರು, ತೊಗರಿ ಇಳುವರಿ ಹೆಚ್ಚಳಕ್ಕೆ ಅನುಸರಿಸಬೇಕಾದ ಬಿತ್ತನೆ ಪದ್ಧತಿ, ಅಂತರ ಹಾಗೂ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ವಿವರಿಸಿದರು.
 
ರೇವಣಸಿದ್ದ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು. ನಿಜಗುಣಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. 
 
ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಮಾಜಿ ಮಹಾ ನಿರ್ದೇಶಕ ಡಾ. ಎಸ್. ಅಯ್ಯಪ್ಪನ್, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಂ.ಸಾಲಿಮಠ, ವಿಸ್ತಾರಣಾ ನಿರ್ದೇಶಕ ಡಾ. ಎಸ್.ಕೆ. ಮೇಟಿ, ಒಸಿಪಿ ಯೋಜನೆಯ ಭಾರತೀಯ ಸಲಹೆಗಾರ ಡಾ. ಎಸ್.ಎ. ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಡಾ. ಚಂದ್ರಕಾಂತ ಜೀವಣಗಿ, ವಿಜ್ಞಾನಿಗಳಾದ ಡಾ. ಆರ್.ಸಿ.ಗುಂಡಪ್ಪಗೋಳ, ಡಾ.ಜಯಲಕ್ಷ್ಮಿ, ಡಾ.ಮಂಜುನಾಥ ಪಾಟೀಲ, ಡಾ.ವಾಸುದೇವ ಪಾಲ್ತೆ ಭಾಗವಹಿಸಿದ್ದರು.
 
**
ರೈತರು ಕೃಷಿ ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಳ್ಳಬೇಕು. ತಂತ್ರಜ್ಞಾನವನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ಬಳಸಿ ಅವುಗಳ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆಯಬೇಕು.
-ಡಾ. ರಾಜು ಜಿ.ತೆಗ್ಗೆಳ್ಳಿ 
ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT