ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಚೂರು

Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ
ಪೆಂಗ್ವಿನ್ ತಪಾಸಣೆ
ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ ಮೃಗಾಲಯದಲ್ಲಿ ಇರುವ ಕಿಂಗ್ ಪೆಂಗ್ವಿನ್ ನಾರ್ವೆ ರಾಜನ ರಕ್ಷಕ. ಬ್ರಿಗೇಡಿಯರ್ ಸರ್ ನಿಲ್ಸ್‌ ಒಲಾವ್ ಎಂಬ ಹೆಸರನ್ನು ಈ ಪೆಂಗ್ವಿನ್‌ಗೆ ಇಡಲಾಗಿದೆ. ಸ್ಕಾಟ್ಲೆಂಡ್‌ನ ರಾಜಧಾನಿಗೆ ಭೇಟಿ ನೀಡುವ ಪ್ರತಿ ಯೋಧರನ್ನು ‘ನಿಲ್ಸ್‌ ಒಲಾವ್ 3’ ಪರಿಶೀಲಿಸುತ್ತದೆ. 1972ರಿಂದ ಪೆಂಗ್ವಿನ್ ಮೂಲಕ ಯೋಧರ ತಪಾಸಣೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಅಂದಿನಿಂದ ಈ ಕಾರ್ಯ ನಡೆಸುತ್ತಿರುವ ಮೂರನೇ ಪೆಂಗ್ವಿನ್ ಇದು. ಅದಕ್ಕೇ ‘ನಿಲ್ಸ್‌ ಒಲಾವ್ 3’ ಎಂಬ ಹೆಸರಿರುವುದು. 
 
**
ಕೃತಕ ವಕೀಲ ರಾಸ್
ಜಗತ್ತಿನ ಮೊದಲ ಕೃತಕ ಬುದ್ಧಿವಂತ ವಕೀಲ ರಾಸ್. ಅಮೆರಿಕದ ಪ್ರತಿಷ್ಠಿತ ಕಾನೂನು ಸಂಸ್ಥೆಯೊಂದು ಸಂಶೋಧನೆ ನಡೆಸಲು ರಾಸ್ ಅನ್ನು ನೇಮಕ ಮಾಡಿಕೊಂಡಿತು. ಬ್ಯಾಂಕ್ ದರೋಡೆ ಪ್ರಕರಣಗಳನ್ನು ಬಗೆಹರಿಸಲು ಅಗತ್ಯವಿರುವ ಮಾಹಿತಿಯನ್ನು ರಾಸ್‌ ತನ್ನ ಸಹೋದ್ಯೋಗಿಗಳಿಗೆ ಕ್ಷಿಪ್ರಗತಿಯಲ್ಲಿ ಒದಗಿಸಿದ. 
 
**
ದೊಡ್ಡ ಹಿಮನದಿ
ಭೂಮಿಯ ಶೇ 10ರಷ್ಟು ಭಾಗವನ್ನು ಹಿಮನದಿಗಳು ಆವರಿಸಿವೆ. ಅವುಗಳಲ್ಲಿ ಭೂಮಿಯ ಮುಕ್ಕಾಲು ಭಾಗದಷ್ಟು ಶುದ್ಧ ನೀರು ಶೇಖರಣೆಯಾಗುತ್ತದೆ. ಪೂರ್ವ ಅಂಟಾರ್ಕ್ಟಿಕಾದಲ್ಲಿ ಇರುವ ಲ್ಯಾಂಬರ್ಟ್ ಹಿಮನದಿಯು ವಿಶ್ವದಲ್ಲಿಯೇ ಅತಿ ದೊಡ್ಡದು. ಸುಮಾರು 80 ಕಿ.ಮೀ. ಅಗಲ ಹಾಗೂ 500 ಕಿ.ಮೀ. ಉದ್ದದ ನದಿ ಇದು. ಹಿಮನದಿಗಳಲ್ಲಿ ನೀರಿನ ಹರಿವು ಸಾಮಾನ್ಯ ನದಿಗಳಂತೆ ಇರುವುದಿಲ್ಲ. ಲ್ಯಾಂಬರ್ಟ್‌ ಗ್ರೇಸಿಯರ್‌ನಲ್ಲಿ ದಿನಕ್ಕೆ ಒಂದರಿಂದ ಎರಡು ಮೀಟರ್‌ನಷ್ಟು ದೂರ ಮಾತ್ರ ನೀರು ಹರಿಯುತ್ತದೆ. ಪ್ರತಿವರ್ಷ 35 ಘನ ಕಿ.ಮೀ.ನಷ್ಟು ಹಿಮಪದರವನ್ನು ಸಮುದ್ರಕ್ಕೆ ಈ ನದಿ ಸೇರಿಸುತ್ತದೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT