ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ: ಟಿಪ್ಪಣಿ

ಮಿನುಗು ಮಿಂಚು
Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ
ನೋಟು ರದ್ದತಿ ಎಂದರೇನು?
ಚಲಾವಣೆಯಲ್ಲಿರುವ ನಿರ್ದಿಷ್ಟ ಮುಖಬೆಲೆಯ ನೋಟುಗಳ ಬಳಕೆಯನ್ನು ಕಾನೂನಾತ್ಮಕವಾಗಿ ನಿಲ್ಲಿಸುವ ಪ್ರಕ್ರಿಯೆ ಇದು. ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಟಿ.ವಿ ಚಾನೆಲ್‌ನಲ್ಲಿ ₹ 500 ಹಾಗೂ ₹ 1000 ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರ ಪ್ರಕಟಿಸಿದರು. ಆ ನೋಟುಗಳ ಬದಲಿಗೆ ₹ 500ರ ಹೊಸ ನೋಟುಗಳು ಹಾಗೂ ₹ 2000 ಮೌಲ್ಯದ ನೋಟುಗಳನ್ನು ಚಲಾವಣೆಗೆ ತರುವುದಾಗಿ ತಿಳಿಸಿದರು. 
 
* ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ?
ಭಯೋತ್ಪಾದನೆಗೆ ಅಗತ್ಯ ಹಣಕಾಸು ಪೂರೈಕೆಗಾಗಿ ನಕಲಿ ನೋಟುಗಳ ಬಳಕೆ ಇದೆ ಎನ್ನಲಾಗಿದ್ದು, ಅದನ್ನು ಮಟ್ಟಹಾಕಲು ಹಾಗೂ ಕಪ್ಪುಹಣದ ಸಮಸ್ಯೆ ಬಗೆಹರಿಸಲು ಈ ನಿರ್ಧಾರ ಕೈಗೊಂಡಿದ್ದಾಗಿ ಪ್ರಧಾನಿ ಪ್ರಕಟಿಸಿದರು. 
 
* ಸಾಮಾನ್ಯ ಜನರ ಮೇಲೆ ಇದರಿಂದ ಯಾವ ಪರಿಣಾಮ ಉಂಟಾಯಿತು?
ನಾಗರಿಕರು ಹಣ ಪಡೆಯಲು ಹಾಗೂ ಜಮಾ ಮಾಡಲು ಬ್ಯಾಂಕ್‌ಗಳ ಹೊರಗೆ ಉದ್ದದ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಯಿತು. ಅಂಚೆ ಕಚೇರಿಗಳು ಹಾಗೂ ಎಟಿಎಂಗಳ ಎದುರೂ ಸರತಿ ಸಾಲುಗಳು ಕಂಡವು. ದಿಢೀರನೆ ಅಷ್ಟೊಂದು ಜನ ಸಾಲುಗಟ್ಟಿ ನಿಂತಿದ್ದರಿಂದ ₹ 10, ₹ 20, ₹ 50 ಹಾಗೂ ₹ 100ರ ಬೆಲೆಯ ನೋಟುಗಳಿಗೆ ಬೇಡಿಕೆ ಅಧಿಕವಾಯಿತು. ಎಷ್ಟೋ ಕಡೆ ಎಟಿಎಂಗಳು ಸ್ಥಗಿತಗೊಂಡವು. 
 
ಇನ್ನೊಂದು ಕಡೆ, ದೊಡ್ಡ ಮೊತ್ತದ ಹಳೆಯ ನೋಟುಗಳು ಬೇಡಿಕೆ ಕಳೆದುಕೊಂಡಿದ್ದರಿಂದ ಕಳ್ಳತನ, ದರೋಡೆ ಪ್ರಮಾಣದಲ್ಲಿ ತೀವ್ರ ಕುಸಿತವಾಯಿತು ಎಂದು ಪೊಲೀಸರು ಹೇಳಿದರು. 
 
* ಹಳೆಯ ನೋಟುಗಳನ್ನು ಏನು ಮಾಡುತ್ತಾರೆ?
ಮಾರ್ಗದರ್ಶಿ ಸೂಚಿಯ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆ ನೋಟುಗಳನ್ನೆಲ್ಲಾ ನಾಶಪಡಿಸುತ್ತದೆ.
 
* ಹಿಂದೆಯೂ ನೋಟುಗಳ ರದ್ದತಿ ಆಗಿತ್ತೆ?
ಹೌದು. ಇದಕ್ಕೂ ಮೊದಲು ಎರಡು ಬಾರಿ ಹೀಗೆ ಆಗಿದೆ. 1946ರಲ್ಲಿ ₹ 1000 ಹಾಗೂ ₹ 10,000 ಮೌಲ್ಯದ ನೋಟುಗಳನ್ನು ಆರ್‌ಬಿಐ ರದ್ದು ಮಾಡಿತ್ತು. 1950ರಿಂದ ಚಲಾವಣೆಯಲ್ಲಿದ್ದ ₹ 5000 ಹಾಗೂ ₹ 10,000 ಮೌಲ್ಯದ ನೋಟುಗಳನ್ನು 1978ರಲ್ಲಿ ರದ್ದು ಮಾಡಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT