ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಎಸ್‌ ಲಾಭ ಶೇ 11 ರಷ್ಟು ಹೆಚ್ಚಳ

Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ

ಮುಂಬೈ: ಸಾಫ್ಟ್‌ವೇರ್‌ ಸೇವೆ ರಫ್ತು ಮಾಡುವ ದೇಶದ ಅತಿದೊಡ್ಡ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ₹6,778 ಕೋಟಿ ನಿವ್ವಳ ಲಾಭ ಗಳಿಸಿದೆ.

2015–16ನೇ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿದ್ದ ₹6,110 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ, ಈ ಬಾರಿ  ಲಾಭದ ಪ್ರಮಾಣ
ಶೇ11ರಷ್ಟು ಹೆಚ್ಚಾಗಿದೆ ಎಂದು ಕಂಪೆನಿಯು ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.

ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಲಾಭ ₹7,733 ಕೋಟಿಗಳಷ್ಟಿದೆ. ಕಂಪೆನಿಯ ವರಮಾನವು ₹ 27,364 ಕೋಟಿಗಳಿಂದ ₹29,735 ಕೋಟಿಗಳಿಗೆ ಶೇ 8.7ರಷ್ಟು ಏರಿಕೆಯಾಗಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ನಿವ್ವಳ ಲಾಭವು ಶೇ 2.9ರಷ್ಟು ಮತ್ತು ವರಮಾನ ಶೇ 1.5ರಷ್ಟು ವೃದ್ಧಿಯಾಗಿದೆ.

‘ಕಾರ್ಯತಂತ್ರ ಬಲಪಡಿಸಿರುವುದು ಮತ್ತು ವ್ಯಾಪಾರದಲ್ಲಿ ಆಗಿರುವ ಚೇತರಿಕೆಯಿಂದ ಈ ಪ್ರಗತಿ ಸಾಧ್ಯವಾಗಿದೆ’ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎನ್‌.ಚಂದ್ರಶೇಖರನ್‌ ಅವರು ತಿಳಿಸಿದ್ದಾರೆ.

‘ಡಿಜಿಟಲ್‌ ತಂತ್ರಜ್ಞಾನದ ಶಕ್ತಿ ಮತ್ತು ಕ್ಲೌಡ್‌ ಆಧಾರಿತ ಸೇವೆಗಳನ್ನು ಒದಗಿಸುವ ಸಾಮರ್ಥ್ಯಗಳು ಕಂಪೆನಿ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ’ ಎಂದೂ ಚಂದ್ರಶೇಖರನ್‌ ಹೇಳಿದ್ದಾರೆ.

ಲಾಭಾಂಶ: ಕಂಪೆನಿಯು 3ನೇ ತ್ರೈಮಾಸಿಕದಲ್ಲಿ ಪ್ರತಿ ಷೇರಿಗೆ ₹6.5 ರಷ್ಟು ಲಾಭಾಂಶ ಘೋಷಿಸಿದೆ. ಸದ್ಯ, ಪ್ರತಿ ಷೇರಿನ ಗಳಿಕೆ ₹34.40 ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT