ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಪ್‌ಸ್ಟಿಕ್‌ ಬಿಸಾಕು ಬೀಟ್‌ರೂಟ್‌ ಸಿಪ್ಪೆ ಸಾಕು

Last Updated 15 ಜನವರಿ 2017, 19:30 IST
ಅಕ್ಷರ ಗಾತ್ರ

ಕೆಲವರಿಗೆ ಬೀಟ್‌ರೂಟ್‌ ಅಂದ್ರೆ ಅಚ್ಚುಮೆಚ್ಚು. ಪಲ್ಯ, ಸಾಂಬಾರು, ದೋಸೆ ಮಾಡಿದರೂ ಚೆಂಗುಲಾಬಿಯಂತಹ ಬಣ್ಣದ ಮೋಡಿಗೊಳಗಾಗಿ ಮತ್ತು ಸಿಹಿಯ ಸ್ವಾದದಿಂದಾಗಿ ಇನ್ನಷ್ಟು ಮತ್ತಷ್ಟು ಎಂದು ತಿನ್ನುತ್ತಾರೆ.

ಅಂತಹ ಬೀಟ್‌ರೂಟ್‌ನಲ್ಲಿ ಸೌಂದರ್ಯ ಮೀಮಾಂಸೆಯೂ ಅಡಗಿರುವುದು ನಿಮಗೆ ಗೊತ್ತೇ?

ನಿಜ, ತುಟಿಯ ಅಂದ ಚಂದ ಹೆಚ್ಚಿಸಿ ‘ಹವಳದ ತುಟಿಯವಳು’ ಎಂದು ಮೆಚ್ಚುಗೆ ನುಡಿಗಳನ್ನು ಕೇಳುವಂತಾಗಲು  ಬೀಟ್‌ರೂಟ್‌ ನೆರವಾಗುತ್ತದೆ.
ಬೀಟ್‌ರೂಟ್‌ನ್ನು ಅಡುಗೆಗೆ ಬಳಸಬೇಕಾದರೆ ತೊಳೆದು ಸಿಪ್ಪೆ ತೆಗೆದಿರುತ್ತೀರಿ ಅಲ್ವೇ? ಈ ಸಿಪ್ಪೆಯನ್ನು ತೊಳೆಯದೆ ತುಟಿಯ ಮೇಲೆ ಮೆತ್ತಗೆ ಮಸಾಜ್‌ ಮಾಡುತ್ತಾ ಬನ್ನಿ. ಮಸಾಜ್‌ ಮಾಡುತ್ತಿದ್ದಂತೆ ಸಿಪ್ಪೆಯಿಂದ ರಸ ಬೀರುತ್ತಾ ಹೋಗುತ್ತದೆ. ಐದು ನಿಮಿಷದಲ್ಲಿ ತುಟಿ ಗಾಢ ಗುಲಾಬಿ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿಕೊಂಡಂತೆ ಕಾಣುತ್ತದೆ. ಪ್ರತಿದಿನ ಹೀಗೇ ಮಾಡಿ.

ಮಿಕ್ಕಿರುವ ಸಿಪ್ಪೆಗಳನ್ನು ಫ್ರೀಜರ್‌ನಲ್ಲಿಡಬಹುದಾದ ಬಾಕ್ಸ್‌ನಲ್ಲಿ ಹಾಕಿ ಫ್ರೀಜರ್‌ನಲ್ಲಿಟ್ಟುಬಿಡಿ.  ಬಳಸುವುದಕ್ಕೂ ಮೊದಲು ಫ್ರಿಜ್‌ನಿಂದ ಹೊರಗಿಟ್ಟುಕೊಳ್ಳಿ. ಇಲ್ಲದಿದ್ದರೆ ಸಿಪ್ಪೆಯಿಂದ ರಸ ಬರುವುದಿಲ್ಲ.

ತುಟಿಯ ಸುತ್ತ ಕಪ್ಪು ಗೆರೆಯಿದ್ದರೆ, ತುಟಿ ಕಪ್ಪಗಿದ್ದರೆ ಅದು ನಿವಾರಣೆಯಾಗಿ  ತುಟಿಗೆ ಸಹಜವಾದ ತಿಳಿಗುಲಾಬಿ ಬಣ್ಣ ಬರುತ್ತದೆ.

ಆರು ತಿಂಗಳು ಬಿಡದೆ ಈ ಉಪಾಯವನ್ನು ಮಾಡಿ ನೋಡಿ. ನೀವೇ ಹೇಳುತ್ತೀರಿ... ಲಿಪ್‌ಸ್ಟಿಕ್‌ ಬಿಸಾಕು; ಬೀಟ್‌ರೂಟ್‌ ಸಿಪ್ಪೆ ಸಾಕು ಎಂದು.
ಒಂದು ಮಾತು... ಬೀಟ್‌ರೂಟ್‌ ಆಯ್ದುಕೊಳ್ಳುವಾಗ ಸ್ವಲ್ಪ ಜಾಣ್ಮೆ ತೋರಬೇಕು. ಸಿಪ್ಪೆ ತೆಳುವಾಗಿದ್ದು ಒಳಭಾಗ ಕಂಡೂಕಾಣದಂತಿದ್ದರೆ ಅದು ತಾಜಾ ಆಗಿರುತ್ತದೆ ಎಂದರ್ಥ. ಈ ಸಿಪ್ಪೆಯಲ್ಲಿ ರಸವೂ ಹೆಚ್ಚು ಇರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT