ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಿಗೆ ನೆರವು ಶೀಘ್ರ ಅಂತಿಮ ಅಂತಿಮ

Last Updated 15 ಜನವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ಹೆಚ್ಚುವರಿ ಬಂಡವಾಳ ನೆರವು ನೀಡುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮನವಿ ಮಾಡಿಕೊಂಡಿವೆ. ಈ ಕುರಿತು ಹಣಕಾಸು ಸಚಿವಾಲಯವು ಒಂದು ವಾರದೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ವಸೂಲಿಯಾಗದ ಸಾಲದ ಜತೆಗೆ ಇದೀಗ ನೋಟು ರದ್ದತಿಯಿಂದ ಬ್ಯಾಂಕ್‌ಗಳ ಬಂಡವಾಳ ಸಾಮರ್ಥ್ಯ ತಗ್ಗಿದೆ. ಹೀಗಾಗಿ ಹೆಚ್ಚಿನ ನೆರವು ನೀಡುವಂತೆ ಬ್ಯಾಂಕ್‌ಗಳು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿಕೊಂಡಿವೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಬಾಸೆಲ್‌–3 ನಿಯಮ ಅಳವಡಿಸಿಕೊಳ್ಳಲು 2019ರ ಒಳಗಾಗಿ ಒಟ್ಟು ₹1.80 ಲಕ್ಷ ಕೋಟಿ ಅಗತ್ಯವಿದೆ. ಇದರಲ್ಲಿ ಕೇಂದ್ರ ಸರ್ಕಾರ ಇಂದ್ರ ಧನುಷ್‌ ಯೋಜನೆಯಡಿ ನಾಲ್ಕು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹70 ಸಾವಿರ ಕೋಟಿ ಬಂಡವಾಳ ನೀಡಲಿದೆ. ಈಗಾಗಲೇ 13 ಬ್ಯಾಂಕ್‌ಗಳಿಗೆ ಮೊದಲ ಹಂತದಲ್ಲಿ ₹22,915 ಕೋಟಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT