ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ

ಸಂತೇಬೆನ್ನೂರಿನಲ್ಲಿ ನಡೆಯುವ ಸಮ್ಮೇಳನ; ಪ್ರೊ.ರಂಗನಾಥ ಸಮ್ಮೇಳನಾಧ್ಯಕ್ಷ
Last Updated 16 ಜನವರಿ 2017, 4:06 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂತೆಬೆನ್ನೂರು 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಸಂಯುಕ್ತವಾಗಿ ಸಂತೇಬೆನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಚ್‌.ಎಸ್‌.ಮಂಜುನಾಥ ಕುರ್ಕಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರ ನೀಡಿದರು.

ಸೂಳೆಕೆರೆ ಶಾಂತವ್ವ ವೇದಿಕೆಯಲ್ಲಿ ನಡೆಯುವ ಈ ಸಮ್ಮೇಳನದ ಕಾರ್ಯ ಕ್ರಮಗಳನ್ನು ಜ.21ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಉದ್ಘಾಟಿಲಿದ್ದಾರೆ. ಸಮ್ಮೇಳನವನ್ನು ಕನ್ನಡ ಅಭಿವೃದ್ಧಿ ಪ್ರಾಧಿ ಕಾರ ಮಾಜಿ ಅಧ್ಯಕ್ಷ ಡಾ.ಎಲ್‌. ಹನುಮಂತಯ್ಯ ಉದ್ಘಾಟಿಸಲಿದ್ದಾರೆ. ಪ್ರೊ.ಎಸ್‌.ಬಿ. ರಂಗನಾಥ್‌ ಸಮ್ಮೇಳನಾ ಧ್ಯಕ್ಷರಾಗಿದ್ದಾರೆ. ಸಂಚಯ ಪುಸ್ತಕ ಮತ್ತು ಇತರ ಕೃತಿಗಳನ್ನು ಶಾಸಕ ಶಾಮನೂರು ಶಿವಶಂಕರಪ್ಪ ಬಿಡುಗಡೆ ಮಾಡಲಿದ್ದಾರೆ. ಸಂಸದ ಜಿ.ಎಂ.ಸಿದ್ದೇಶ್ವರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಎಚ್‌.ಎ. ಭಿಕ್ಷಾವರ್ತಿಮಠ ಕನ್ನಡ ಧ್ವಜ ಹಸ್ತಾಂತರಿಸಲಿದ್ದಾರೆ ಎಂದು ಹೇಳಿದರು.

ಶಾಸಕರಾದ ಕೆ.ಶಿವಮೂರ್ತಿ, ಎಚ್‌.ಎಸ್‌. ಶಿವಶಂಕರ್‌, ಡಿ.ಜಿ. ಶಾಂತನಗೌಡ, ಎಂ.ಪಿ.ರವೀಂದ್ರ, ಎಚ್‌.ಪಿ. ರಾಜೇಶ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಉಮಾ ಎಂ.ಪಿ.ರಮೇಶ್‌, ಡಿಡಿಪಿಐ ಎಚ್‌.ಎಂ.ಪ್ರೇಮಾ, ಕಸಾಪ ನಿಕಟಪೂರ್ವ ಎ.ಆರ್‌.ಉಜ್ಜನಪ್ಪ, ಚೆನ್ನಗಿರಿ ತಾಲೂಕು ಪಂಚಾಯ್ತಿ ಅಧ್ಯಕ್ಷರಾದ ಎಂ.ಎನ್‌. ಪುಷ್ಪಾವತಿ ಅತಿಥಿಗಳಾಗಿರುವರು ಎಂದರು.

ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ, ಬೆಳಿಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ 2ಕ್ಕೆ ದಾವಣಗೆರೆ ಜಿಲ್ಲೆ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ.ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಇತಿಹಾಸ ಸಂಶೋಧಕ ಸುಮತೀಂದ್ರ ನಾಡಿಗ್‌, ಸಾಹಿತಿ ಎಸ್‌.ಟಿ. ಶಾಂತಗಂಗಾಧರ ವಿಷಯ ಮಂಡನೆ ಮಾಡಲಿದ್ದಾರೆ. ಪ್ರೊ.ಎಸ್‌.ಎಚ್‌. ಲಕ್ಷ್ಮೀನಾರಾಯಣ ಭಟ್‌ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಜೆ 4.15ಕ್ಕೆ ಸಮೂಹ ಮಾಧ್ಯಮಗಳು ಗೋಷ್ಠಿ ನಡೆಯಲಿದೆ. ಪತ್ರಕರ್ತ ಬಿ.ಎನ್‌. ಮಲ್ಲೇಶ್‌, ಪತ್ರಕರ್ತ ಆರ್‌.ಜಿ.ಹಳ್ಳಿ ನಾಗರಾಜ್‌, ಸಹಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ, ವಿಷಯ ಮಂಡನೆ ಮಾಡಲಿದ್ದಾರೆ ಎಂದರು.

ಸಂಜೆ 5.45ಕ್ಕೆ ಉಪನ್ಯಾಸಕ ಜಿ.ಎಸ್‌.ಸುಭಾಷ್‌ಚಂದ್ರ ಬೋಸ್‌ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆಶುಕವಿ ಯುಗ ಧರ್ಮರಾಮಣ್ಣ ಉದ್ಘಾಟಿಸುವರು. ಕನ್ನಡ ನಾಡು, ನುಡಿ, ಗೀತೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಜ.22ರಂದು ಬೆಳಿಗ್ಗೆ 9.30ಕ್ಕೆ ಕನ್ನಡ ಕನ್ನಡಿಗ ಕರ್ನಾಟಕ ಗೋಷ್ಠಿ ನಡೆಯಲಿದೆ. ಸಹಪ್ರಾಧ್ಯಾಪಕ ಡಾ. ಲೋಕೇಶ್‌ ಅಗಸನಕಟ್ಟೆ, ಸಹಪ್ರಾಧ್ಯಾ ಪಕ ಡಾ.ಬಿ.ವಿ.ವಸಂತಕುಮಾರ್‌, ಸಾಹಿತಿ ಎನ್,ಟಿ. ಯರ್ರಿಸ್ವಾಮಿ ವಿಷಯ ಮಂಡನೆ ಮಾಡಲಿದ್ದಾರೆ ಎಂದರು.

ಬೆಳಿಗ್ಗೆ 11ಕ್ಕೆ ಮಹಿಳೆ ಮತ್ತು ಸವಾಲುಗಳು ಗೋಷ್ಠಿ ನಡೆಯಲಿದೆ. ಸಾಹಿತಿ ಡಾ.ಎಸ್‌.ಅನಸೂಯ, ಉಪ ನ್ಯಾಸಕಿ ಸುಮತಿ ಜಯಪ್ಪ, ಉಪನ್ಯಾಸಕಿ ಅರುಣಕುಮಾರಿ ಬೀರಾದಾರ ವಿಷಯ ಮಂಡನೆ ಮಾಡುವರು. ಡಾ. ಬಿ.ದಾದಾಪೀರ್‌ ನವಿಲೇಹಾಳ್‌ ವಿಶೇಷ ಉಪನ್ಯಾಸ ನೀಡುವರು.ಮಧ್ಯಾಹ್ನ 2ಕ್ಕೆ ಡಾ.ಆನಂದ ಋಗ್ವೇದಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.

ಸೈಯದ್‌ ಫೈಜುಲ್ಲಾ ಆಶಯ ನುಡಿ ನೀಡಲಿದ್ದಾರೆ. ಸಂಜೆ 4ಕ್ಕೆ ಕ.ಸಾ.ಪ ಅಧ್ಯಕ್ಷ  ಮಂಜುನಾಥ ಕುರ್ಕಿ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ. ಪಿ.ನಾಗಭೂಷಣ್‌ ತೌಡೂರು ನಿರ್ಣಯ ಮಂಡಿಸಲಿದ್ದಾರೆ ಎಂದರು.

ಪತ್ರಿಕಾಗೊಷ್ಠಿಯಲ್ಲಿ ಪಿ. ನಾಗಭೂಷಣ ತೌಡೂರು, ಕೆ.ಸಿರಾಜ್‌ ಅಹ್ಮದ್‌, ಎ.ಆರ್‌.ಉಜ್ಜನಪ್ಪ, ಎನ್‌.ಎಸ್‌.ರಾಜು, ಬಿ.ವಾಮದೇವಪ್ಪ, ಜಿ.ಆರ್‌.ಷಣ್ಮುಖಪ್ಪ, ಬಿ.ವಿ. ರಾಜಶೇಖರ್‌, ರೇವಣ್ಣ ಬಳ್ಳಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT