ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.10ರಂದು ಸಿಡಿಹಬ್ಬ

Last Updated 16 ಜನವರಿ 2017, 5:00 IST
ಅಕ್ಷರ ಗಾತ್ರ

ಮಳವಳ್ಳಿ: ಫೆ.10ರಿಂದ ಎರಡು ದಿನ ನಡೆಯುವ ಸಿಡಿಹಬ್ಬದ ಯಶಸ್ಸಿಗಾಗಿ ಪುರಸಭೆ ಆಡಳಿತ ಕುಡಿಯುವ ನೀರು, ಶೌಚಾಲಯ ಸೌಲಭ್ಯದ ಜತೆಗೆ ಸ್ವಚ್ಛತೆಗೂ ಕಾಳಜಿ ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಅರುಳ್‌ಕುಮಾರ್ ಮುಖ್ಯಾಧಿಕಾರಿಗೆ ಸೂಚಿಸಿದರು.

ಪ್ರವಾಸಿಮಂದಿರದಲ್ಲಿ ಶನಿವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಜನಾಂಗದವರು ಜತೆಗೂಡಿ ಅಹಿತಕರ ಘಟನೆಗಳಿಗೂ ಅವಕಾಶಕೊಡದೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದರು.

ಅಬಕಾರಿ ಇಲಾಖೆ ಅಧಿಕಾರಿಗಳು ಹಬ್ಬಕ್ಕೂ ಮುನ್ನ ಮದ್ಯದಂಗಡಿ ಮುಚ್ಚಿಸುವ ಜತೆಗೆ, ಅಕ್ರಮ ಮಾರಾಟ ಆಗದಂತೆಯೂ ನಿಗಾ ವಹಿಸಬೇಕು. ಜತೆಗೆ ಸಣ್ಣಪುಟ್ಟ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ವಿರುದ್ಧವೂ ನಿಗಾವಹಿಸಬೇಕು ಎಂದು ಸೂಚಿಸಿದರು. ಸೆಸ್ಕ್‌ ಸಿಬ್ಬಂದಿ ಎರಡು ದಿನ ವಿದ್ಯುತ್ ಸಮಸ್ಯೆ ಆಗದಂತೆ ಹಾಗೂ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಸಿಡಿ ರಥ ಹೋಗುವ ರಸ್ತೆಗಳ ಸುಸ್ಥಿತಿಗೆ ಕ್ರಮಕೈಗೊಳ್ಳಬೇಕು. ಹಬ್ಬಕ್ಕೆ ಪ್ಲೆಕ್ಸ್ ಹಾಕಬಯಸುವವರು ಪುರಸಭೆಯಿಂದ ಅನುಮತಿ ಪಡೆಯಬೇಕು ತಿಳಿಸಿದರು.

ಪುರಸಭೆ ಸದಸ್ಯ ಮೆಹಬೂಬ್ ಪಾಷ, ಹಬ್ಬದ ಸಂದರ್ಭದಲ್ಲಿ ಜನರಿಗೆ ಅನುವಾಗುವಂತೆ ತಾತ್ಕಾಲಿಕ ಶೌಚಾಲಯ ನಿರ್ಮಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ರಿಯಾಜಿನ್ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಪೊಲೀಸರು ನಿಯಂತ್ರಿಸಲು ಒತ್ತು ನೀಡುತ್ತಿಲ್ಲ.  ಎಂದು ಪುರಸಭೆ ಸದಸ್ಯ ಎಂ.ಎ.ಚಿಕ್ಕರಾಜು ಆರೋಪಿಸಿದರು.
ತಹಶೀಲ್ದಾರ್ ಎಚ್‌.ಎಸ್‌.ದಿನೇಶ್ ಚಂದ್ರ, ಡಿವೈಎಸ್ಪಿ ಮ್ಯಾಥ್ಯೂ ಥಾಮಸ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎನ್ ವಿಶ್ವಾಸ್, ಮುಖ್ಯಾಧಿಕಾರಿ ಶಿವಪ್ಪ, ಪಟ್ಟಣದ ಇನ್ಸ್ ಪೆಕ್ಟರ್ ನಾಗರಾಜು ಮತ್ತು ಲೋಕೋಪಯೋಗಿ ಇಲಾಖೆ, ಸೆಸ್ಕ್‌, ಅಬಕಾರಿ ಇಲಾಖೆ, ಅಗ್ನಿಶಾಮಕ ಸೇವೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT