ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವತರಿಸಿದ ವಿರಾಸತ್ ವಿರಾಟರೂಪ

ಮೂಡುಬಿದಿರೆ: ಮೂರು ದಿನಗಳ ರಾಷ್ಟ್ರೀಯ ಸಾಂಸ್ಕೃತಿಕ ಉತ್ತವಕ್ಕೆ ಸಂಭ್ರಮ ತೆರೆ
Last Updated 16 ಜನವರಿ 2017, 5:39 IST
ಅಕ್ಷರ ಗಾತ್ರ

ಮೂಡುಬಿದಿರೆ: ಸಾಂಸ್ಕೃತಿಕ ಪರಿಸರದ ಸ್ಪಷ್ಟ ಚಿತ್ರಣವನ್ನು ನೀಡಿದ ಆಳ್ವಾಸ್ ವಿರಾಸತ್ -2017, ತನ್ನ ವಿರಾಟ ರೂಪ ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು. ನೂರಾರು ಬಗೆಯ ಸಾಂಸ್ಕೃತಿಕ ಕಾರ್ಯ ಕ್ರಮಗಳು, ಮಕ್ಕಳಿಂದ ಹಿಡಿದು ಹಿರಿಯ ವರೆಗೂ ಎಲ್ಲ ವರ್ಗದ ಜನರ ಮನತಣಿ ಸಿದವರು.
ದೂರದ ಊರಿ ನಿಂದ ಬಂದ ಪ್ರೇಕ್ಷಕರ ಪಯಣಕ್ಕೆ ಮೆರಗು ತಂದು ಕೊಟ್ಟ ವಿರಾಸತ್‌ನಲ್ಲಿ ಸಂಭ್ರಮದ ಪ್ರತಿ ಕ್ಷಣಗಳೂ ಹಿಡಿದಿಟ್ಟುಕೊಳ್ಳುವಂತಿದ್ದವು.

ಮೊದಲ ದಿನದ ಮೆರವಣಿಗೆ ಯಿಂದ ಹಿಡಿದು, ಕೊನೆಯ ದಿನದ ನೃತ್ಯ ಸಂಭ್ರಮದವರೆಗೂ ಪ್ರತಿಯೊಂದೂ ವಿಶೇಷವೇ. ನೃತ್ಯ, ಸಂಗೀತ, ಸಂಭ್ರಮ ಗಳು ಒಟ್ಟಿಗೆ ಮೇಳೈಸಿದ್ದ ವಿರಾಸತ್‌ನಲ್ಲಿ, ಸಮಯಪ್ರಜ್ಞೆ ಮಾತ್ರ ಎಂಥವರನ್ನೂ ಮೂಕವಿಸ್ಮಿತರನ್ನಾಗಿ ಮಾಡಿತು. ಉದ್ದುದ್ದ ಭಾಷಣವಿಲ್ಲದ, ಕೇವಲ ಕಲೆಗೆ ಕೇಂದ್ರಿಕತವಾಗಿ ಕಾರ್ಯಕ್ರಮದಲ್ಲಿ ಪ್ರತಿಕ್ಷಣವೂ ಅಮೂಲ್ಯ ಎನ್ನುವ ಭಾವನೆ ಜನರದ್ದಾಗಿತ್ತು. ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್‌ನ ಎರಡನೇ ದಿನವಾದ ಶನಿವಾರ ವಿಶೇಷವಾದ ‘ಟ್ರಿನಿಟಿ ನಾದ ಮಾಧುರ್ಯ' ಗಮನ ಸೆಳೆಯಿತು.

ಸಿತಾರ್‌ನಲ್ಲಿ ಪುರ್ಬಯಾನ್ ಚಟರ್ಜಿ,  ಯು.ರಾಜೇಶ್ ಅವರು ಮ್ಯಾಂಡೋಲಿನ್, ರಂಜಿತ್ ಬೇರಟ್, ಗುಲ್ರಾಜ್ ಸಿಂಗ್, ಮೋಹಿನಿ ಡೆ ಅವರು ಬೇಸ್ ಗಿಟಾರ್‌ನಲ್ಲಿ ಮಿಂಚಿದರೆ, ಭೂಷಣ್ ಪರ್ಚುರೆ 'ನಾದ ಮಾಧುರ್ಯ'ಕ್ಕೆ ಸಾಥ್ ನೀಡುವ ಮೂಲಕ ಸೇರಿರುವ ಸಂಗೀತ ಕಲಾಸಕ್ತರ ಗಮನ ಸೆಳೆದರು.
ಬೆಂಗಳೂರಿನ 9 ವರ್ಷದ ಬಾಲ ಪ್ರತಿಭೆ ಮಾಸ್ಟರ್ ರಾಹುಲ್ ವೆಲ್ಲಾಲ್ ಅವರ ದೇವರನಾಮವಂತೂ ಭಕ್ತಿಯ ಸಾಗರದಲ್ಲಿ ತೇಲುವಂತೆ ಮಾಡಿತು.

ಭುವನೇಶ್ವರದ ಆರಾಧನಾ ಡ್ಯಾನ್ಸ್ ಅಕಾಡೆಮಿಯ 55 ಕಲಾವಿದರಿಂದ ಒಡಿಶಾದ-ಗೋಟಿಪುವಾ ನೃತ್ಯರೂಪಕ 'ಅಂಗರಾಗ',  ನಂತರ ಯೋಗೇಶ್ ಮಾಳವಿಯಾ, ಉಜ್ಜಯಿನಿ ಮತ್ತು ಬಸವರಾಜ್ ಬಂಡಿವಾಡ್ ನಿರ್ದೇ ಶನದಲ್ಲಿ 80 ವಿದ್ಯಾರ್ಥಿ ಕಲಾವಿದರಿಂದ ಸಾಹಸಮಯ ರೋಪ್ ಮತ್ತು ಮಲ್ಲಕಂಬ, ಕೊಲ್ಕತ್ತಾದ ಅಶಿಂಬಂಧು ಭಟ್ಟಾಚಾರ್ಯ ನಿರ್ದೇಶನದಲ್ಲಿ 35 ವಿದ್ಯಾರ್ಥಿ ಕಲಾವಿದರಿಂದ ಕಥಕ್ ನೃತ್ಯ ‘ಆನಂದಮಂಗಳಂ ದೇಶ್’ ಅನಾವರಣಗೊಂಡಿತು.

ಸೂಪರ್ ಸಿಂಗ್ ನಿರ್ದೇಶನದಲ್ಲಿ 35 ವಿದ್ಯಾರ್ಥಿ ಕಲಾವಿದರಿಂದ ಮಣಿಪುರದ ಧೋಲ್ ಚಲೋಮ್ ಹಾಗೂ ಕೊಲಂಬೋದ ಜಯಂಪತಿ ಭಂಡಾರ ಅವರ ನಿರ್ದೇಶನದಲ್ಲಿ 60 ವಿದ್ಯಾರ್ಥಿ ಕಲಾವಿರದ ಶ್ರೀಲಂಕಾದ ನೃತ್ಯ ವೈಭವ 'ನೃತ್ಯೋತ್ಸವ' ಪ್ರದರ್ಶನಗೊಂಡಿತು. ಕಲಾವಿದರೆಲ್ಲಾ ಆಳ್ವಾಸ್ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಾಗಿದ್ದರು.

ಮೇಘನಾ ರಿಷ್ಮಾ ನಾದ ಮಾಧುರ್ಯವನ್ನು ಆಳ್ವಾಸ್ನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಪ್ರೇಮ್‌ಸಾಗರ್, ದೋಲ್ ಚಲೋಮ್ ಮತ್ತು ಶ್ರೀಲಂಕಾದ ನೃತ್ಯ ವೈಭವವನ್ನು, ಲಾವಣ್ಯ ವಾಸುದೇವ್ ಶಹಾಪುರ್ ಅವರ ದೇವರನಾಮವನ್ನು ಅಮಿತ ಸೆಬೆಸ್ಟಿಯನ್ ಮತ್ತು ಜ್ಯೋತಿ ಅವರು ಗೋಟಿಪೂವಾ ಕಾರ್ಯಕ್ರಮವನ್ನು ನಿರೂಪಿಸಿದರು.

ಮೂರನೇ ದಿನದ ವೈಭವ ವರ್ಣಿ ಸಲೂ ಅಸಾಧ್ಯ. ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕರಾದ ಶಾನ್ ಮತ್ತು ಪಾಯಲ್ ದೇವ ಅವರ ಹಾಡುಗಳ ಮೋಡಿಯಲ್ಲಿ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಎದುರಿದ್ದ ಜನರೆಲ್ಲ ತೇಲಾಡುವಂತೆ ಮಾಡಿತು. ಶಾನ್ ಕಂಠದಿಂದ ಸುಶ್ರಾವ್ಯ ಸಂಗೀತದ ರಸದೌತಣ ಸವಿದ ಜನರು, ಕರತಾಡನಗಳ ಸುರಿಮಳೆ ಸುರಿಸಿದರು.

ನೃತ್ಯ ಸಂಭ್ರಮವಂತೂ ರಾಜ್ಯಗಳ ಗಡಿಯನ್ನು ದಾಟಿದ್ದು ಒಂದೆಡೆಯಾದರೆ, ವಿದೇಶಿ ನೃತ್ಯದ ಸಂಭ್ರಮವನ್ನು ಸವಿಯುವಂತೆ ಮಾಡಿತು. ಶಿಲಾ ಉನ್ನಿಕೃಷ್ಣನ್ ಅವರ ನಿರ್ದೇಶನದಲ್ಲಿ 40 ವಿದ್ಯಾರ್ಥಿಗಳಿಂದ ಮೂಡಿಬಂದ ಭರತನಾಟ್ಯ ಪುಷ್ಪಾಂಜಲಿ, ಪ್ರೀತಮ್ ಸಿಂಗ್ ನಿರ್ದೇಶನಲ್ಲಿ 30 ವಿದ್ಯಾರ್ಥಿಗಳ ಮಣಿಪುರದ ಸ್ಟಿಕ್ ಡ್ಯಾನ್ಸ್, ಜಯಂಪತಿ ಭಂಡಾರ ನಿರ್ದೇಶನದ 60 ವಿದ್ಯಾರ್ಥಿಗಳ ಶ್ರೀಲಂಕಾದ ಜನಪದ ನೃತ್ಯಗಳನ್ನು ಕಣ್ತುಂಬಿಕೊಳ್ಳುವಂತೆ ಮಾಡಿತು.

*
ಮಂಗಳೂರಿಗೆ ಇದು ಎರಡನೇ ಭೇಟಿ. ಪ್ರೇಕ್ಷಕ ಸಾಗರದ ಎದುರು ಕಾರ್ಯಕ್ರಮ ಪ್ರಸ್ತುತಪಡಿಸುವುದೇ ಒಂದು ಸಂಭ್ರಮದಂತಿದೆ. ಇದೊಂದು ಮರೆಯಲಾಗದ ಕ್ಷಣ.
ಶಾನ್, ಖ್ಯಾತ ಹಿನ್ನೆಲೆ ಗಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT