ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18ರಿಂದ ಕೆಥೊಲಿಕ್‌ ಯುವ ಸಂಚಲನದ ಹತ್ತನೇ ರಾಷ್ಟ್ರೀಯ ಯುವ ಸಮ್ಮೇಳನ

Last Updated 16 ಜನವರಿ 2017, 5:47 IST
ಅಕ್ಷರ ಗಾತ್ರ

ಉಡುಪಿ: ಮಂಗಳೂರು ಸಂತ ಜೋಸೇಫ್‌ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ಇದೇ 18ರಿಂದ 22ರ ವರೆಗೆ ನಡೆಯುವ ಭಾರತೀಯ ಕೆಥೊಲಿಕ್‌ ಯುವ ಸಂಚಲನದ ಹತ್ತನೇ ರಾಷ್ಟ್ರೀಯ ಯುವ ಸಮ್ಮೇಳನದ ಪೂರ್ವಭಾವಿ ಯಾಗಿ ನಡೆಯುವ ಡೇಸ್‌ ಇನ್‌ ಡಯಾಸಿಸ್‌ ಕಾರ್ಯಕ್ರಮಕ್ಕೆ ದೇಶದ ವಿವಿಧ ಧರ್ಮಪ್ರಾಂತ್ಯಗಳಿಂದ ಬಂದಿದ್ದ ಕ್ರೈಸ್ತ ಯುವ ಪ್ರತಿನಿಧಿಗಳಿಗೆ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಶನಿವಾರ ಅದ್ಧೂರಿ ಸ್ವಾಗತ ಕೋರಲಾಯಿತು.

ನಗರದ ಸಂತ ಸಿಸಿಲಿಸ್‌ ಕಾಲೇಜಿನ ಸಭಾಂಗಣದಲ್ಲಿ ಸ್ವಾಗತ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು. 11 ರಾಜ್ಯಗಳ 38 ಧರ್ಮಪ್ರಾಂತ್ಯಗಳಿಂದ ಬಂದಿದ್ದ ಸುಮಾರು 500 ಮಂದಿ ಕ್ರೈಸ್ತ ಯುವ ಪ್ರತಿನಿಧಿಗಳು, ಯುವ ನಿರ್ದೇಶ ಕರು ಹಾಗೂ ಧರ್ಮಭಗಿನಿಯರನ್ನು ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸೇವಾ ಸಂಸ್ಥೆ ಸಂಪದ ಇದರ ನಿರ್ದೇಶಕ ರೆಜಿನಾಲ್ಡ್‌ ಪಿಂಟೊ, ಉಡುಪಿ ಜಿಲ್ಲೆ ಹಾಗೂ ಉಡುಪಿ ಧರ್ಮಪ್ರಾಂತ್ಯದ ಪರಿಚಯವನ್ನು ಯುವ ಪ್ರತಿನಿಧಿಗಳಿಗೆ ಮಾಡಿಕೊಡುವು ದರೊಂದಿಗೆ ಉಡುಪಿ ಜಿಲ್ಲೆಯ ಕಲೆ, ತುಳುನಾಡಿನ ಸಂಸ್ಕೃತಿಯನ್ನು ಮಾಡಿ ಕೊಟ್ಟರು. ಆ ನಂತರ ಯುವ ಪ್ರತಿನಿಧಿ ಗಳನ್ನು ವಿಂಗಡಿಸಿ ಧರ್ಮಪ್ರಾಂತ್ಯದ ವಿವಿಧ ಚರ್ಚ್‌ಗಳಿಗೆ ಕಳುಹಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗದ ನಿರ್ದೇಶಕ ಎಡ್ವಿನ್‌ ಡಿಸೋಜ, ವೈಸಿಎಸ್‌ ಇದರ ರಾಷ್ಟ್ರೀಯ ನಿರ್ದೇಶಕ ಚೇತನ್‌ ಮಚಾದೊ, ನಕ್ರೆ ಧರ್ಮಕೇಂದ್ರದ ವಿನ್ಸೆಂಟ್‌ ಕ್ರಾಸ್ತಾ, ಉಡುಪಿ ಶೋಕ ಮಾತಾ ಇಗರ್ಜಿಯ ಸಹಾಯಕ ಧರ್ಮಗುರು ರೋಯ್‌ಸ್ಟನ್‌ ಫರ್ನಾಂಡಿಸ್‌, ವಿಲಿಯಂ ಮಾರ್ಟಿಸ್‌, ಧರ್ಮಪ್ರಾಂತ್ಯದ ಐಸಿವೈಮ್‌ ಅಧ್ಯಕ್ಷ ಲೊಯೆಲ್‌ ಡಿಸೋಜ, ಕಾರ್ಯದರ್ಶಿ ಫೆಲಿನಾ ಡಿಸೋಜ,

ಮಹಿಳಾ ಸಚೇತಕಿ ಸಿಸ್ಟರ್‌ ಹಿಲ್ಡಾ ಮಸ್ಕರೇನ್ಹಸ್‌, ಸಚೇತಕ ವಾಲ್ಟರ್‌ ಡಿಸೋಜ, ಉಪಾಧ್ಯಕ್ಷ ಅರ್ಥರ್‌ ಡಯಾಸ್‌, ಮಾಜಿ ಅಧ್ಯಕ್ಷ ಡೆರಿಕ್‌ ಮಸ್ಕರೇನ್ಹಸ್‌, ಕೋಶಾಧಿಕಾರಿ ಡೋನ್‌ ಡಿಸೋಜ, ಪಿಆರ್‌ಒ ಒನಿಲ್‌ ಅಂದ್ರಾದೆ, ವಲಯ ಅಧ್ಯಕ್ಷರಾದ ರೊಯ್ಟನ್‌ ಡಿಸೋಜ, ವಿನೈಲ್‌ ಡಿಸೋಜ, ಫ್ಲೆಕ್ಸನ್‌ ಡಿಸಿಲ್ವಾ ಹಾಗೂ ಇತರ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT