ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ವೃತ್ತಗಳಲ್ಲಿ ವರ್ಣಮಯ ಕಾರಂಜಿ

ಬಸವೇಶ್ವರ, ಮಹಾತ್ಮಗಾಂಧಿ, ಶಿವಾಜಿ, ಅಂಬೇಡ್ಕರ್‌ ಪ್ರತಿಮೆಗೆ ಜಲಾಭಿಷೇಕದ ಭಾಗ್ಯ
Last Updated 16 ಜನವರಿ 2017, 6:07 IST
ಅಕ್ಷರ ಗಾತ್ರ

ವಿಜಯಪುರ: ದೇಶ–ವಿದೇಶದ ಪ್ರವಾಸಿ ಗರನ್ನು ಸೂಜಿಗಲ್ಲಿನಂತೆ ಆಕರ್ಷಿಸು ತ್ತಿರುವ ಐತಿಹಾಸಿಕ ಸ್ಮಾರಕ ನಗರಿ, ಗುಮ್ಮಟ ನಗರಿಯ ಸೌಂದರ್ಯೀ ಕರಣಕ್ಕೆ ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಇದೀಗ ಮುನ್ನುಡಿ ಬರೆದಿದೆ.

ನಗರದ ಮಹಾತ್ಮಗಾಂಧಿ ರಸ್ತೆಯ ಡಾ.ಬಿ.ಆರ್‌.ಅಂಬೇಡ್ಕರ್‌, ಬಸವೇಶ್ವರ, ಮಹಾತ್ಮಗಾಂಧಿ, ಶಿವಾಜಿ ವೃತ್ತಗಳಲ್ಲಿ ನೀರಿನ ಕಾರಂಜಿ ನಿರ್ಮಿಸುವ ಜತೆ, ವರ್ಣಮಯ ಚಿತ್ತಾರದ ಬೆಳಕು ಮೂಡಿಸಲು, ಖಾಸಗಿ ಸಹಭಾಗಿತ್ವದಲ್ಲಿ ಈಗಾಗಲೇ ತನ್ನ ಕಾರ್ಯ ಆರಂಭಿಸಿದೆ.

ಸ್ಟೇಷನ್‌ ರಸ್ತೆಯ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಈಗಾಗಲೇ ನೀರಿನ ಕಾರಂಜಿ ಅಳವಡಿಸಿ, ಅದಕ್ಕೆ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಿದ್ಧೇಶ್ವರ ಜಾತ್ರೆ, ಸಂಕ್ರಮಣದ ನಿಮಿತ್ತ ಪ್ರಾಯೋಗಿಕ ಚಾಲನೆ ನೀಡಿದ್ದು, ನಿತ್ಯ ಮುಸ್ಸಂಜೆ 5.30ರಿಂದ ರಾತ್ರಿ 10ರವರೆಗೂ ಅಂಬೇಡ್ಕರ್‌ ಪ್ರತಿಮೆಗೆ ಜಲಾಭಿಷೇಕದ ಭಾಗ್ಯ ಒದಗಿ ಬಂದಿದೆ.

16 ವರ್ಣಮಯ ಚಿತ್ತಾರದಲ್ಲಿ ನೀರಿನ ಕಾರಂಜಿ ಅಂಬೇಡ್ಕರ್‌ ಪ್ರತಿಮೆಗೆ ಜಲಾಭಿಷೇಕ ನಡೆಸುತ್ತಿದ್ದು, ನೋಡುಗರು ತದೇಕ ಚಿತ್ತದಿಂದ ವೃತ್ತದಲ್ಲಿ ಬಹು ಹೊತ್ತು ನಿಂತು ವೀಕ್ಷಿ ಸುವ ದೃಶ್ಯಾವಳಿ ಗೋಚರಿಸುತ್ತಿವೆ. ಸ್ಥಳೀಯರು ಸೇರಿದಂತೆ, ಪ್ರವಾಸಿಗರು ಪಾಲಿಕೆಯ ಸೌಂದರ್ಯೀಕರಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಮೂಲಕ ನಗರದ ಅಂದವನ್ನು ಮತ್ತಷ್ಟು ಹೆಚ್ಚಿ ಸುವ ಕಾಯಕದಲ್ಲಿ ಸ್ಥಳೀಯ  ಪಾಲಿಕೆ ಆಡಳಿತ ಮುಂದಾ ಗಲಿ ಎನ್ನುವವರೇ ಹೆಚ್ಚಿದ್ದಾರೆ.

ತಲಾ ₹ 2.5 ಲಕ್ಷ ವೆಚ್ಚ: ಅಂಬೇಡ್ಕರ್ ವೃತ್ತದಲ್ಲಿ ನೀರಿನ ಕಾರಂಜಿ, ಬೆಳಕಿನ ವೈಭವ ಅಳವಡಿಸಿರುವುದಕ್ಕೆ ಕನಿಷ್ಠ ₹ 2ರಿಂದ ₹ 2.5 ಲಕ್ಷ ವೆಚ್ಚವಾಗಲಿದೆ ಎಂದು ಯೋಜನೆಯ ಗುತ್ತಿಗೆ ಪಡೆದಿ ರುವ ಆರ್‌.ಕೆ.ಏಜೆನ್ಸೀಸ್‌ನ ಮಹಾದೇವ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಮಹಾತ್ಮಗಾಂಧಿ ರಸ್ತೆಯಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿ ಬೆಳಕಿನ ವೈಭವ ಈಗಾಗಲೇ ಅಳವಡಿಕೆ ಯಾಗಿದೆ. ಬಸವೇಶ್ವರ ವೃತ್ತದಲ್ಲಿ ಪ್ರಕ್ರಿಯೆ ನಡೆದಿದೆ. ಶಿವಾಜಿ ವೃತ್ತದಲ್ಲೂ ಬೆಳಕಿನ ವೈಭವ ಬೆಳಗುವುದು. ಮೂರು ವೃತ್ತದಲ್ಲಿ ಬೆಳಕಿನ ವೈಭವ ನಿರ್ಮಿಸಲು ತಲಾ ₹ 80 ಸಾವಿರ ವೆಚ್ಚವಾಗಲಿದೆ.

ಇದೇ ರೀತಿ ಮೂರು ಕಡೆ ನೀರಿನ ಕಾರಂಜಿ ಅಳವಡಿಕೆಗೆ ಕನಿಷ್ಠ ₹ 1.5 ಲಕ್ಷ ವೆಚ್ಚ ತಗುಲಲಿದೆ. ಮಹಾನಗರ ಪಾಲಿಕೆ ಆಡಳಿತ ನಾಲ್ಕು ವೃತ್ತಗಳನ್ನು ಸೌಂದರ್ಯೀಕರಣಗೊಳಿಸಲು ನಮ್ಮ ಏಜೆನ್ಸಿಗೆ ಗುತ್ತಿಗೆ ನೀಡಿದೆ. ಇದೇ ರೀತಿ ಸ್ಟೇಷನ್‌ ರಸ್ತೆಯ ಅಂತ್ಯದಲ್ಲಿ ಬರುವ ಕೋಟೆ ಗೋಡೆ ಮೇಲೆ ವಿಜಯಪುರದ ವೈಭವ ಬಿಂಬಿಸುವ ಬೆಳಕಿನ ದೃಶ್ಯಾವಳಿ ಮೂಡಿಸುವ ಯೋಜನೆಯೂ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ ಎಂದು ಮಹಾದೇವ ಮಾಹಿತಿ ನೀಡಿದರು.

ಈಗಾಗಲೇ ನಾಲ್ಕು ವೃತ್ತಗಳಲ್ಲಿ ಕೆಲಸ ನಡೆದಿದೆ. ಪ್ರಾಯೋಗಿಕ ಚಾಲ ನೆಯೂ ಸಿಕ್ಕಿದೆ. ಫೆ 15ರೊಳಗೆ ನಾಲ್ಕು ವೃತ್ತಗಳು ವರ್ಣಮಯ ನೀರಿನ ಕಾರಂಜಿಯೊಂದಿಗೆ  ನಗರದ ಅಂದ ವನ್ನು ಹೆಚ್ಚಿಸಲಿವೆ. ವಾರದೊಳಗೆ ಅಂಬೇಡ್ಕರ್‌ ವೃತ್ತ ವರ್ಣಮಯ ನೀರಿನ ಕಾರಂಜಿ ಯೊಂದಿಗೆ ನಿತ್ಯವೂ ಕಂಗೊಳಿಸಲಿದೆ ಎಂದು ಹೇಳಿದರು.

ಅತ್ಯಾಧುನಿಕ ತಂತ್ರಜ್ಞಾನ: ನಾಲ್ಕು ವೃತ್ತ, ಕೋಟೆ ಗೋಡೆಯ ಮೇಲೆ ಬೆಳಕಿನ ಚಿತ್ತಾರ ಮೂಡಿಸಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಪಾರ್‌ ಲೈಟಿಂಗ್‌ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಇದರಲ್ಲಿ ನೀರು, ಹವಾ ಮಾನದಲ್ಲಿ  ಬದಲಾವ ಣೆಗಳಾದರೂ ಬೆಳಕಿನ ವ್ಯವಸ್ಥೆಗೆ ಧಕ್ಕೆಯಾಗಲ್ಲ.
ಇದರ ಜತೆಗೆ ಎಲ್‌ಇಡಿ ಬಲ್ಬ್‌ ಬಳಸಿದ್ದು, ವಿದ್ಯುತ್‌ ಮಿತವ್ಯಯದ ಜತೆಗೆ, 50 ಸಾವಿರ ಗಂಟೆ ಬೆಳಗುವ ಸಾಮರ್ಥ್ಯ ಹೊಂದಿರುವ ಬಲ್ಬ್‌ ಬಳಸಲಾಗಿದೆ.

ಕಾರಂಜಿಗೆ ಬಳಸುವ ನೀರು ಅಷ್ಟೇ. ಕಾರಂಜಿಯಲ್ಲಿ ಚುಮ್ಮಿ ಪ್ರತಿಮೆ ಗಳಿಗೆ ಜಲಾಭಿಷೇಕ ನೆರವೇರಿಸಿ ಮತ್ತೆ ಕೆಳಗೆ ಪ್ರತಿಮೆಯ ಸುತ್ತಲಿರುವ ಹೊಂಡ ದೊಳಗೆ ಬಿದ್ದು, ಮತ್ತೆ ರಿಸೈಕ್ಲಿಂಗ್‌ ವ್ಯವಸ್ಥೆಯಲ್ಲಿ ಕಾರಂಜಿ ಮೂಲಕ ಚುಮ್ಮಲಿದೆ. ನಾಲ್ಕು ವೃತ್ತಗಳಲ್ಲಿ ಇದೇ ತಂತ್ರಜ್ಞಾನ ಅಳವಡಿಸುತ್ತಿದ್ದೇವೆ ಎಂದು ಆರ್‌.ಕೆ.ಏಜೆನ್ಸೀಸ್‌ನ ಮಹಾದೇವ ತಿಳಿಸಿದರು.

*
ಅಂಬೇಡ್ಕರ್‌ ವೃತ್ತದಲ್ಲಿನ ಪ್ರತಿಮೆಗೆ ನೀರಿನ ಕಾರಂಜಿ, ವರ್ಣಮಯ ಚಿತ್ತಾರದ ವೈಭವ ಅಳವಡಿಸಲಾಗಿದೆ. ಇದರ ಜತೆಗೆ ಸಂಗೀತವನ್ನೂ ಅಳವಡಿಸಬೇಕು.
-ಚಂದ್ರಶೇಖರ ಕುಂಬಾರ,
ಪ್ರವಾಸಿ, ಮುದೇನೂರು, ಕೊಪ್ಪಳ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT