ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋದಂಡರಾಮನ ಸಂಭ್ರಮದ ರಥೋತ್ಸವ

ಮೈಸೂರು, ಹಾಸನ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಯಿಂದ ಭಕ್ತರ ಆಗಮನ
Last Updated 16 ಜನವರಿ 2017, 6:35 IST
ಅಕ್ಷರ ಗಾತ್ರ

ಸಾಲಿಗ್ರಾಮ: ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಕಾವೇರಿ ನದಿ ದಂಡೆ ಮೇಲಿರುವ ಪುರಾಣ ಪ್ರಸಿದ್ಧ ಕೋದಂಡರಾಮನ ಬ್ರಹ್ಮರಥೋತ್ಸವ ಭಾನುವಾರ ಬೆಳಿಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ದೇವಾಲಯದ ಪ್ರಾಂಗಣದಲ್ಲಿ ಹೂವಿನಿಂದ ಅಲಂಕೃತ ಗೊಂಡಿದ್ದ ರಥಕ್ಕೆ ಶಾಸಕ ಸಾ.ರಾ.ಮಹೇಶ್ ಮತ್ತು ಜೆಡಿಎಸ್ ನಾಯಕ ಎಚ್‌.ಡಿ.ರೇವಣ್ಣ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಕೋದಂಡರಾಮನಿಗೆ ಜೈಕಾರ ಹಾಕುತ್ತಾ ಸಾವಿರಾರು ಭಕ್ತರು  ಬ್ರಹ್ಮರಥವನ್ನು ದೇವಾಲಯದ ಸುತ್ತ ಎಳೆದರು.  ಭಕ್ತರು ಹಣ್ಣು ಮತ್ತು ದವನವನ್ನು ರಥದ ಮೇಲೆ ಎಸೆಯುವ ಮೂಲಕ ಹರಕೆ ತೀರಿಸಿದರು.

ಕೋದಂಡರಾಮನ ಬ್ರಹ್ಮರಥೋತ್ಸವವನ್ನು ಭಕ್ತರು ದೇವಾಲಯ ಸುತ್ತ ಎಳೆದು ತರುವ ವೇಳೆ ಮಹಿಳೆಯರು ಹೆಣ್ಣು ಮಕ್ಕಳನ್ನು ರಥದ ಮುಂದೆ ನಿಲ್ಲಿಸಿ ಕೊಂಡು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಹೊತ್ತು ಕೊಳ್ಳುತ್ತಿದ್ದರು. ಮತ್ತೆ ಕೆಲವರು ರಥಕ್ಕೆ ಪೂಜೆ ಸಲ್ಲಿಸುತ್ತಿದ್ದರು.

ವರ್ಷದ ಮೊದಲ ರಥೋತ್ಸವವಾದ ಮೇರೆಗೆ ಬಹುತೇಕ ನವದಂಪತಿಗಳ ದಂಡು ರಥೋತ್ಸವದಲ್ಲಿ ಉತ್ಸಾಹದಿಂದ ಭಾಗಹಿಸಿ ಹಣ್ಣು ಮತ್ತು ದವನವನ್ನು ರಥದ ಮೇಲೆ ಎಸೆದು ಭಕ್ತಿ ಮೆರೆಯುತ್ತಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಾ.ರಾ.ನಂದೀಶ್ ರಥೋತ್ಸವಕ್ಕೆ ಬಂದಿದ್ದ  ಭಕ್ತರಿಗೆ ಲಾಡು ಪ್ರಸಾದವನ್ನು ವಿತರಿಸಿದರು.
ಕೋದಂಡರಾಮನ ಬ್ರಹ್ಮರಥೋತ್ಸವಕ್ಕೆ ಮಂಡ್ಯ, ಹಾಸನ, ಮಡಿಕೇರಿ, ಬೆಂಗಳೂರು, ತುಮಕೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದ ನೂರಾರು ಭಕ್ತರು ಬಂದಿದ್ದರು.

ಡಿವೈಎಸ್‌ಪಿ ವಿಕ್ರಂ ಅಮಟೆ ನೇತೃತ್ವದಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಿದ್ದರು.  ಆದಿಚುಂಚನಗಿರಿ ಮೈಸೂರು ಶಾಖಾಮಠದ ಸೋಮನಾಥ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ನಟರಾಜಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಶಾಸಕ ಸಾ.ರಾ.ಮಹೇಶ್, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ, ತಹಶೀಲ್ದಾರ್ ನಾಗರಾಜ್, ಜಿ.ಪಂ ಸದಸ್ಯರಾದ ಸಾ.ರಾ.ನಂದೀಶ್, ಡಿ.ರವಿಶಂಕರ್, ಭವಾನಿ ರೇವಣ್ಣ, ಪ್ರಜ್ವಲ್‌ ರೇವಣ್ಣ, ತಾ.ಪಂ ಸದಸ್ಯೆ ಶೋಭಾ, ಎ.ಟಿ. ಸೋಮಶೇಖರ್, ಉಪತಹಶೀಲ್ದಾರ್ ಯಧು ಗಿರೀಶ್, ಹರ್ಷ ಕುಮಾರ್‌ಗೌಡ, ಎಸ್.ವಿ.ಹೇಮಂತ್, ವಾಸು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT