ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪೋತಗಿರಿಯ ವೈಭವ ಮರುಕಳಿಸುವುದೇ?

ಕಪ್ಪತಗುಡ್ಡ ಸಂರಕ್ಷಣೆ– ಡಂಬಳದಲ್ಲಿ ಸಾರ್ವಜನಿಕ ಸಭೆ ಇಂದು; ಜನರ ಅಂಗಳಕ್ಕೆ ಚೆಂಡು ತಳ್ಳಿ ಕುಳಿತ ಸರ್ಕಾರ
Last Updated 16 ಜನವರಿ 2017, 7:10 IST
ಅಕ್ಷರ ಗಾತ್ರ

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲಾಗುವ ಗದಗ ಜಿಲ್ಲೆಯ ಕಪ್ಪತಗುಡ್ಡಕ್ಕೆ ನೀಡಿದ್ದ ‘ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ’ ಸ್ಥಾನ ಮಾನವನ್ನು ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ ಮುಂಡರಗಿ ತಾಲ್ಲೂ ಕಿನ ಡಂಬಳದ ತೋಂಟದಾರ್ಯ ಕಲಾ ಭವನದಲ್ಲಿ ಜ.16ರಂದು ಬೆಳಿಗ್ಗೆ 11 ಗಂಟೆಗೆ  ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ.

ಕಪ್ಪತಗುಡ್ಡ ವಿಚಾರವಾಗಿ ನಡೆಯು ತ್ತಿರುವ ಮೂರನೆಯ ಸಾರ್ವಜನಿಕ  ಸಭೆ ಇದಾಗಿದೆ. ಇದಕ್ಕೂ ಮುನ್ನ ಎರಡು ಸಭೆಗಳು ನಡೆದಿವೆ. 07–07–2009 ರಂದು ಅತ್ತಿಕಟ್ಟಿ ಗ್ರಾಮದಲ್ಲಿ ಮತ್ತು 21–02–2013ರಲ್ಲಿ ಡಂಬಳದಲ್ಲಿ ಸಭೆಗಳು ನಡೆದಿವೆ.

ಕಪ್ಪತಗುಡ್ಡಕ್ಕೆ ನೀಡಿದ್ದ  ಸಂರಕ್ಷಿತ ಪ್ರದೇಶ ಸ್ಥಾನಮಾನವನ್ನು ರಾಜ್ಯ ಸರ್ಕಾರ 2016ರ ನವೆಂಬರ್‌ 4ರಂದು ವಾಪಸ್‌ ಪಡೆದಿದೆ. 2015ರ ಡಿಸೆಂಬರ್‌ 19ರಂದು ಹೊರಡಿಸಿದ್ದ ಅಧಿಸೂಚನೆಯನ್ನು, ಸಂರಕ್ಷಿತ ಅರಣ್ಯ ಘೋಷಣೆಗೆ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆದಿಲ್ಲ ಮತ್ತು ಸಂರಕ್ಷಿತ ಪ್ರದೇಶದ ಪಕ್ಕದಲ್ಲಿ ಯಾವುದೇ ರಾಷ್ಟ್ರೀಯ ಉದ್ಯಾನ ಇಲ್ಲ ಎಂಬ ಎರಡು ಕಾರಣಗಳನ್ನು ಮುಂದಿಟ್ಟು, 11 ತಿಂಗಳ ಒಳಗಾಗಿ ಸರ್ಕಾರವೇ ವಾಪಸ್‌ ಪಡೆದಿದೆ. ಹೀಗಾಗಿ ಜ.16 ರಂದು ನಡೆಯುವ ಸಾರ್ವಜನಿಕ ಅಹ ವಾಲು ಸಭೆ ಭಾರಿ ಮಹತ್ವ ಪಡೆದು ಕೊಂಡಿದೆ.

ಅನಿಲ್‌ ಕುಂಬ್ಳೆ ವರದಿಯಲ್ಲಿ ಏನಿದೆ?
ಈ ಸಭೆಯಲ್ಲಿ ವ್ಯಕ್ತವಾದ  ಪರ–ವಿರೋಧ ಅಭಿಪ್ರಾಯಗಳನ್ನು ದಾಖ ಲಿಸಿ, ಅನಿಲ್‌ ಕುಂಬ್ಳೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಡಂಬಳ ದಲ್ಲಿ ವನ್ಯಧಾಮ ಎಂದು ಘೋಷಣೆ ಮಾಡಲು ನಡೆದ ಸಭೆಯಲ್ಲಿ 3ರಿಂದ 4 ಜನ ಮಾತ್ರ ಈ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ವನ್ಯಧಾಮ ಎಂದು ಘೋಷಣೆ ಮಾಡಿದರೆ ಅರಣ್ಯ ಇಲಾಖೆಯವರು ಇಲ್ಲಿರುವವರ ಜಮೀನು ವಶಪಡಿಸಿಕೊಂಡು ಒಕ್ಕಲೆಬ್ಬಿಸುತ್ತಾರೆ, ಹುಲಿ ಮತ್ತಿತರ ವನ್ಯ ಪ್ರಾಣಿ ಗಳನ್ನು ತಂದು ಬಿಡುತ್ತಾರೆ. ಬದಲಾಗಿ ಗಣಿಗಾರಿಕೆ ಆರಂಭವಾದರೆ, ಗಾಳಿ ವಿದ್ಯುತ್‌ ಕಂಪೆನಿಗಳು ಬಂದರೆ ಒಂದಿಷ್ಟು ಜನರಿಗೆ ಉದ್ಯೋಗ ಸಿಗು ತ್ತದೆ ಎಂದು ವಾದಿಸಿದ್ದರು.

ಇವರೆಲ್ಲರೂ ಈ ಪ್ರಸ್ತಾವ ವಿರೋಧಿಸಲು ಪೂರ್ವ ನಿಯೋಜಿತವಾಗಿ ನಿರ್ಧರಿಸಿಕೊಂಡೇ ಬಂದಿದ್ದರು ಎನ್ನುವುದು ಅವರ ಅಭಿಪ್ರಾಯದಿಂದ ತಿಳಿದುಬಂತು. ಕಪ್ಪತಗುಡ್ಡವನ್ನು ತುರ್ತಗಾಗಿ ವನ್ಯ ಧಾಮ ಎಂದು ಘೋಷಣೆ ಮಾಡಬೇಕು ಎಂದು ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ಕುಂಬ್ಳೆ ಹೇಳಿದ್ದಾರೆ. ( ಈ ವರದಿ ಪ್ರತಿ ಪತ್ರಿಕೆಗೆ ಲಭ್ಯವಾಗಿದೆ) ಈ  ವರದಿ ಯನ್ನು ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದಂತೆ  15–03–2013 ರಂದು ಬೆಂಗಳೂರಿನಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸಭೆ ನಡೆಯಿತು.

ಈ ಸಭೆಯಲ್ಲಿ ಕಪ್ಪತಗುಡ್ಡದ ಒಟ್ಟು  32,346.524 ಹೆಕ್ಟೇರ್‌ ಭೂಪ್ರದೇಶ ದಲ್ಲಿ 17,872.24 ಹೆಕ್ಟೇರ್‌ ಪ್ರದೇಶ ವನ್ನು ವನ್ಯಧಾಮ ಎಂದು ಘೋಷಿಸ ಬಹುದು ಎಂಬ ನಿರ್ಧಾರ ತೆಗೆದುಕೊಳ್ಳ ಲಾಯಿತು. ಆದರೆ,  ಸರ್ಕಾರ ಸುಮಾರು ಎರಡೂವರೆ ವರ್ಷಗಳು ಕಳೆದ ಬಳಿಕ ವನ್ಯಧಾಮ ಎಂದು ಘೋಷಿಸುವ ಬದಲು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಎಂದು 2015ರ ಡಿಸೆಂಬರ್‌ 19ರಂದು ಆದೇಶ ಹೊರಡಿಸಿತು.

‘ವನ್ಯಧಾಮ’ ಎಂದು ಘೋಷಿಸ ದಿದ್ದರೂ ಪರವಾಗಿಲ್ಲ, ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವಾಗಿ ಆದರೂ, ಕಪ್ಪತಗುಡ್ಡ ಉಳಿಯಲಿದೆ ಎಂದು ಜಿಲ್ಲೆಯ ಪರಿಸರ ಪ್ರೇಮಿಗಳು, ಹೋರಾಟಗಾರರು ಸಮಾಧಾನ ಪಟ್ಟಿ ದ್ದರು. ಇದಾಗಿ 8 ತಿಂಗಳು ಕಳೆಯುವು ದರೊಳಗೆ ಅಂದರೆ 30–08–2016 ರಂದು ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ವಿಷಯ ಮಂಡಿಸಿ ಸ್ಥಾನ ಮಾನ ವಾಪಸ್‌ ಪಡೆಯುವ ನಿರ್ಧಾರ ತೆಗೆದುಕೊಳ್ಳಲಾಯಿತು. ನಂತರ  4–11–2016ರಂದು ಸ್ಥಾನಮಾನ ವಾಪಸ್‌ ಪಡೆಯುವ ಅಧಿಸೂಚನೆ ಹೊರಡಿಸಲಾಯಿತು.

ಜ.12 ರಂದು ಗದುಗಿನಲ್ಲಿ ನಡೆದ ಕೆಎಸ್‌ಎಸ್‌ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದು ಮುಖ್ಯಮಂತ್ರಿಗಳು ಕಪ್ಪತಗುಡ್ಡ ಸ್ಥಾನಮಾನ ನೀಡುವ ವಿಷಯದಲ್ಲಿ ಯಾವುದೇ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 2013 ರಲ್ಲಿ ಡಂಬಳದಲ್ಲಿ ನಡೆದ ಸಾರ್ವಜನಿಕ ಸಭೆಯ ಬಳಿಕ ಅಧಿಸೂಚನೆ ಹೊರಡಿ ಸಲು ಎರಡೂವರೆ ವರ್ಷ ತೆಗೆದು ಕೊಂಡ ಸರ್ಕಾರ, ಈಗ ನಡೆಸುವ ಸಾರ್ವಜನಿಕ ಸಭೆಯ ವರದಿಯನ್ನು ಪರಿಶೀಲಿಸಿ, ಮುಂದಿನ ಅಧಿಸೂಚನೆ ಹೊರಡಿಸಲು ಇನ್ನಷ್ಟು ದಿನ ತೆಗೆದು ಕೊಳ್ಳಬಹುದು ಎನ್ನುವುದು ಯಕ್ಷಪ್ರಶ್ನೆ.

ವನ್ಯಧಾಮದ ಬದಲು ಸಂರಕ್ಷಿತ ಪ್ರದೇಶ!
ವನ್ಯಜೀವಿ ಕಾಯ್ದೆ 1972ರ ಕಲಂ 36–ಎ ರಲ್ಲಿ ನಿಗದಿಪಡಿಸಿರುವಂತೆ ಯಾವುದೇ ಅರಣ್ಯ ಪ್ರದೇಶವನ್ನು ‘ಸಂರಕ್ಷಿತ ಮೀಸಲು ಪ್ರದೇಶ’ ಎಂದು ಘೋಷಿಸಲು ಸಾರ್ವಜನಿಕರ ಅಹ ವಾಲು ಸಭೆ ನಡೆಸಬೇಕು. ಆದರೆ, ‘ವನ್ಯಧಾಮ’ ಎಂದು ಘೋಷಿಸಲು ಈ ಸಭೆ ಕಡ್ಡಾಯವಲ್ಲ. ಆರಂಭದಲ್ಲಿ ಕಪ್ಪತಗುಡ್ಡವನ್ನು ‘ವನ್ಯಧಾಮ’ ಎಂದು ಘೋಷಿಸುವ ಪ್ರಸ್ತಾವವೇ  ಪರಿಶೀಲನೆಯಲ್ಲಿತ್ತು.

ಕಪ್ಪತಗುಡ್ಡದ ಒಟ್ಟು ಭೂ ಪ್ರದೇಶ 32,346.524 ಹೆಕ್ಟೇರ್‌. ಈ  ಅರಣ್ಯ ಪ್ರದೇಶವನ್ನು ವನ್ಯಧಾಮ ಎಂದು ಘೋಷಣೆ ಮಾಡಲು, ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷ ಅನಿಲ್‌ ಕುಂಬ್ಳೆ ನೇತೃತ್ವದಲ್ಲಿ ಡಂಬಳದಲ್ಲಿ, ನಂದಿ ವೇರಿ ಶ್ರೀಗಳ ಸಮ್ಮುಖದಲ್ಲಿ 2013ರ ಫೆಬ್ರುವರಿ 21ರಂದು ಸಾರ್ವಜನಿಕ ಸಭೆ ನಡೆಯಿತು.

ಈ ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ, ವನ್ಯಜೀವಿ ಮಂಡಳಿಯ ಪದಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮತ್ತು ಕಪ್ಪತ ಗುಡ್ಡ ವ್ಯಾಪ್ತಿಗೆ ಬರುವ ಗ್ರಾಮಗಳ ನಿವಾಸಿಗಳು, ಗಣಿಗಾರಿಕೆ ಮತ್ತು ಗಾಳಿ ವಿದ್ಯುತ್‌ ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

*
ಸ್ಥಾನಮಾನ ಮುಂದುವರಿಸುವ ವಿಚಾರವಾಗಿ ಸರ್ಕಾರ ಇದುವರೆಗೆ ಸಕಾರಾತ್ಮಕ ಸ್ಪಂದನೆಯನ್ನೇ ನೀಡಿದೆ. ಡಂಬಳದಲ್ಲಿ ನಡೆಯುವ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ, ಬೆಂಬಲ ವ್ಯಕ್ತಪಡಿಸಬೇಕು.
-ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ,
ತೋಂಟದಾರ್ಯ ಮಠ, ಗದಗ, ಡಂಬಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT