ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ಸೋಮನಾಥ ರಥೋತ್ಸವ

ಜಯಘೋಷಗಳ ಮಧ್ಯೆ ಸಾಗಿದ ಸೋಮನಾಥ ಬ್ರಹ್ಮ ರಥೋತ್ಸವ
Last Updated 16 ಜನವರಿ 2017, 6:50 IST
ಅಕ್ಷರ ಗಾತ್ರ

ಕಕ್ಕೇರಾ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೌರಾಷ್ಟ್ರ ಅಧಿಪತಿ ಸೋಮನಾಥ ದೇವರ ಬ್ರಹ್ಮರಥೋತ್ಸವವು ಸಂಭ್ರಮ, ಸಡಗರದಿಂದ ನಡೆಯಿತು. ಸಹಸ್ರಾರು ಭಕ್ತ ಸಮೂಹಗಳ ಹಾಗೂ ಸಿಡಿಮದ್ದುಗಳ ಕರಡತಾನದ ಮಧ್ಯೆ ವೈಭವಯುತವಾಗಿ ಅದ್ದೂರಿಯಾಗಿ ಜರುಗಿತು.

ಸಂಜೆ 6.28ರ ಸುಮಾರಿಗೆ ದೇವಾಲಯದ ಪ್ರಧಾನ ಅರ್ಚಕ ನಂದಣ್ಣಪ್ಪ ಪೂಜಾರಿ ಅವರು ಬ್ರಹ್ಮರಥಕ್ಕೆ ಪೂಜೆ ಸಲ್ಲಿಸಿದರು. ವಿಶೇಷ ವಿದ್ಯುತ್‌ ಅಲಂಕಾರದಿಂದ ಹಾಗೂ ವಿವಿಧ ಹೂಗಳಿಂದ ಶೃಂಗಾರಗೊಂಡಿದ್ದ ಬ್ರಹ್ಮರಥಕ್ಕೆ ಚಾಲನೆ ನೀಡಿದರು.

ನೂತನ ಬ್ರಹ್ಮರಥೋತ್ಸವದ ಮೇಲೆ ಭಕ್ತರು ಹೂ, ಹಣ್ಣು, ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಧನ್ಯರಾದರು. ಈ ಮಧ್ಯೆ ಭಕ್ತರು ಸೋಮನಾಥ , ಮಹಾರಾಜಕೀ...ಜೈ. ಕರಿಮಡ್ಡಿ ಸೋಮನಾಥ ಮಹಾರಾಜಕೀ...ಕೀ ಜೈ. ಎಂದು ಜಯಘೋಷ ಹಾಕಿ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.

ರಥೋತ್ಸವದ ಉದ್ದಕ್ಕೂ ವಿವಿಧ ವಾದ್ಯಘೋಷಗಳು ಮುಗಿಲು ಮುಟ್ಟುವಂತಿತ್ತು. ಬೆಟ್ಟಗುಡ್ಡಗಳಿಂದ ರಥೋತ್ಸವ ವೀಕ್ಷಿಸುತ್ತಿದ್ದವರು ದೂರದಿಂದಲೇ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಇದಕ್ಕೂ ಮುಂಚೆ ನೂತನ ಬ್ರಹ್ಮರಥಕ್ಕೆ ಪುರೋಹಿತರಿಂದ ರಥಾಂಗ ಹೋಮ-ಹವನ ಜರುಗಿತು. ಪಟ್ಟಣದ ಹರಕೆಯನ್ನು ಹೊತ್ತವರು ಬಾಜಾ ಭಜಂತ್ತಿ, ಡೊಳ್ಳುವಾದ್ಯಗಳ ಮಧ್ಯದಲ್ಲಿ ಪುಟ್ಟಮಕ್ಕಳು ಸೇರಿದಂತೆ ಹಿರಿಯರು, ಮಹಿಳೆಯರೂ ದೀಡ್ ನಮಸ್ಕಾರಗಳನ್ನು ಹಾಕಿ ದೇವರ ಕೃಪೆಗೆ ಪಾತ್ರರಾದರು.

ಹಿರಿಯ ಮುಖಂಡ ಸೀತಾರಾಮನಾಯಕಗೌಡ ಜಾಗೀರದಾರ, ಕರಿಮಡ್ಡೆಪ್ಪ ತಾತಾ, ಅಡವಿಲಿಂಗ ಮಹಾರಾಜರು, ಗುರುಗುಂಟಾ ಅರಸು ಮನೆತನದ ರಾಜಾ ಸೋಮನಾಥ ನಾಯಕ, ಸುರಪುರ ಸಂಸ್ಥಾನದ ರಾಜಾ ಲಕ್ಷ್ಮಿನಾರಾಯಣ ನಾಯಕ, ಕೋಠಾ ನರಸಿಂಹನಾಯಕ, ರಾಯಚೂರು ಸಹಕಾರ ಸಂಘದ ಉಪಾಧ್ಯಕ್ಷ ರಾಜಶೇಖರನಾಯಕ್, ಮಾಜಿ ಸಚಿವ ರಾಜೂಗೌಡ, ಹಣಮಂತರಾಯಗೌಡ ಜಾಗೀರದಾರ, ಕೊಪ್ಪಳದ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ರಾಮಯ್ಯಶೆಟ್ಟಿ, ರಥಶಿಲ್ಪಿಗಳಾದ ಯಲ್ಲಪ್ಪ ಬಡಿಗೇರ, ಕೇಶಪ್ಪ ಬಡಿಗೇರ, ಪುರಸಭೆ ಅಧ್ಯಕ್ಷ ರಾಜು ಹವಾಲ್ದಾರ, ಉಪಾಧ್ಯಕ್ಷೆ ಮಲ್ಲಪ್ಪ ಮ್ಯಾಗೇರಿ, ನಿಂಗಣ್ಣ ಚಿಂಚೋಡಿ, ರಾಮಯ್ಯಶೆಟ್ಟಿ. ಪರಮಣ್ಣ ಗುತ್ತೇದಾರ, ಎಪಿಎಂಸಿ ನೂತನ ಸದಸ್ಯ ಬಸವರಾಜ ಆರ್ಯಶಂಕರ ಪುರಸಭೆ ಸದಸ್ಯರುಗಳು ಸೇರಿದಂತೆ ಪಟ್ಟಣದ ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಹಸ್ರಾರು ಭಕ್ತ ಸಮೂಹ ನೆರೆದಿತ್ತು.

ಜಾತ್ರೆಗೆ ಬಂದಿದ್ದ ಭಕ್ತರಿಂದ ಸಿಹಿತಿನಿಸುಗಳ ಖರೀದಿ ಬಹಳ ಜೋರಾಗಿಯೇ ನಡೆಯಿತು. ಮಕ್ಕಳು ಪೀಪಿಗಳನ್ನು ಊದುತ್ತಾ, ಜೋಕಾಲಿ, ತೊಟ್ಟಿಲುಗಳಲ್ಲಿ ಕುಳಿತು ಸಂಭ್ರಮಿಸಿದರು. ಮಕ್ಕಳು ಹಾಗೂ ಯುವಕರು ಫೋಟೊ ತೆಗೆಸಿಕೊಳ್ಳುವುದರಲ್ಲಿ ತಲ್ಲಿನರಾಗಿರುವುದು ಕಂಡು ಬಂತು.

ಹುಣಸಗಿ ವೃತ್ತ ನಿರೀಕ್ಷಕ ಟೀಕುನಾಥ ಪವಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಕೊಡೇಕಲ್ ಪಿಎಸ್ಐ ಕಾಳಪ್ಪ ಬಡಿಗೇರ, ಶ್ಯಾಮುಸುಂದರನಾಯಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT